ಮುಲ್ಕಿ–ಸುರತ್ಕಲ್: ರಾಮ ಕ್ಷತ್ರಿಯ ಭಜನಾ ಸಂಘ, ಮುಲ್ಕಿ–ಸುರತ್ಕಲ್ನ ದಶಮ ಸಂಭ್ರಮದ ಅಂಗವಾಗಿ ಸೆ. 6ರಂದು ನಡೆದ ವರಮಹಾಲಕ್ಷ್ಮೀ ಪೂಜೆ, ಭಜನಾ ಸಂಕೀರ್ತನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕೀಕಾನ ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಸಂಘ ಭಜನಾ ಸೇವೆ ಸಲ್ಲಿಸಿತು.

ವಿವಿಧ ಭಜನಾ ಮಂಡಳಿಗಳೊಂದಿಗೆ ಭಾಗವಹಿಸಿದ ಸಂಘದ ಸದಸ್ಯರು ಭಕ್ತಿಗೀತೆಗಳೊಂದಿಗೆ ಭಕ್ತಿಭಾವಪೂರ್ಣ ಕುಣಿತ ಭಜನೆ ಪ್ರದರ್ಶಿಸಿ ಗಮನ ಸೆಳೆದರು. ಸಂಘದ ಕುಣಿತ ಭಜನೆಗೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ಸಂಘದ ತಂಡವನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ವಾಮನ್ ರಾವ್ ಬೇಕಲ್, ಮಹಿಳಾ ಭಜನಾ ಸಂಘಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಯೊಂದಿಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸಂಘಟನಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ರಾಮ ಕ್ಷತ್ರಿಯ ಸಂಕೀರ್ತನೆ ತಂಡ ಜೆಪ್ಪು–ಮಾರ್ಗನ್ ಗೇಟ್, ರಾಮ ಕ್ಷತ್ರಿಯ ಭಜನಾ ಸಂಘ ನಗರ ಘಟಕ ಉಡುಪಿ, ರಾಮ ಕ್ಷತ್ರಿಯ ಮಹಿಳಾ ಭಜನಾ ಮಂಡಳಿ ಉಡುಪಿ–ಉಪ್ಪೂರು, ರಾಮ ಕ್ಷತ್ರಿಯ ಭಜನಾ ಸಂಘ ಕೂಡ್ಲು, ಶ್ರೀ ಲಕ್ಷಣಾನಂದ ಸರಸ್ವತಿ ಮಹಿಳಾ ಭಜನಾ ವೃಂದ ಅಣಂಗೂರು–ಕಾಸರಗೋಡು, ರಾಮ ಕ್ಷತ್ರಿಯ ಭಜನಾ ಸಮಿತಿ ಮೂಡಬಿದ್ರೆ, ಸದ್ಗುರು ರಾಮ ರಾಜ ಕ್ಷತ್ರಿಯ ಭಜನಾ ಸಂಘ ಉಳ್ಳಾಲ ತಾಲೂಕು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಸುಬ್ರಹ್ಮಣ್ಯ ಮಹಿಳಾ ಭಜನಾ ಸಂಘ ಕೊರಕೋಡು–ಕಾಸರಗೋಡು ಸೇರಿದಂತೆ ವಿವಿಧ ತಂಡಗಳು ಭಜನಾ ಸೇವೆ ಸಲ್ಲಿಸಿದವು.
ಕೀಕಾನ ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಸಂಘದ ಕುಣಿತ ಭಜನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು


Clean design and great performance on mobile. It is hard to find a place this reliable these days. I am sticking with bruuu555 for a long time.
Feeling like a real VIP here. The rewards are generous and the platform feels very premium. You should check out hn88vip for the best perks.
Spicycassino really brings a fresh vibe to the online gaming scene. I was impressed by how quickly they verify new accounts and process my first cash out. The hot new releases drop every single week and the bonuses feel genuinely rewarding rather than restrictive. It is exactly the kind of spot I look forward to visiting after work. spicycassino