ಮಂಜೇಶ್ವರ ಸರ್ಕಾರಿ ಕಾಲೇಜಿನಲ್ಲಿ ಸಂಭ್ರಮದ ಆಹಾರ ಮೇಳ : ವಿಭಿನ್ನ ರುಚಿಗಳ ಸವಿಯೂಟ

ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕಾಲೇಜಿನ ಜೀವನಿ, ಲಿಟರರಿ ಮತ್ತು ಜೆಂಡರ್ ಕ್ಲಬ್ ಜಂಟಿಯಾಗಿ ಆಯೋಜಿಸಿರುವ “ಆಹಾರ ಮೇಳ” ಕ್ಕೆ ಮಂಗಳವಾರದಂದು ಅತ್ಯಂತ ಸೌಹಾರ್ದ ಹಾಗೂ ವಿಜೃಂಭಣೆಯೊಂದಿಗೆ ಚಾಲನೆ ದೊರಕಿತು.ಈ ವಿಶೇಷ ಕಾರ್ಯಕ್ರಮವನ್ನು ಕಾಲೇಜಿನ ಜೀವನಿ, ಲಿಟರರಿ ಮತ್ತು ಜೆಂಡರ್ ಕ್ಲಬ್ ಜಂಟಿಯಾಗಿ ಆಯೋಜಿಸಿವೆ.

ಮಂಜೇಶ್ವರ ಸರ್ಕಾರಿ ಕಾಲೇಜು ಆವರಣದಲ್ಲಿ ಆಯೋಜಿಸಲಾದ ಈ ಆಹಾರ ಮೇಳದಲ್ಲಿ ಕೇರಳದ ದಕ್ಷಿಣ ಭಾಗದಿಂದ ಹಿಡಿದು ಉತ್ತರ ಭಾಗಗಳವರೆಗಿನ ವಿವಿಧ ಶೈಲಿಯ ವೈವಿಧ್ಯಮಯ ಹಾಗೂ ರುಚಿಕರ ಆಹಾರ ಭಕ್ಷ್ಯಗಳ ಪರಿಚಯ ಮತ್ತು ಪ್ರದರ್ಶನಗಳು ಎಲ್ಲರ ಗಮನ ಸೆಳೆದಿದೆ.


​”ನಮ್ಮ ಆಹಾರ, ನಮ್ಮ ಸಂಸ್ಕೃತಿ” ಎಂಬ ಧ್ವ್ಯೇಯದೊಂದಿಗೆ ಆಯೋಜಿಸಲಾಗಿರುವ ಈ ಮೇಳವು ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

​ನಾಡಿನ ವೈವಿಧ್ಯಮಯ ಸವಿರುಚಿಗಳನ್ನು ಸವಿಯಲು ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಸಂಭ್ರಮದ ವಾತಾವರಣ ನೆಲೆಸಿದೆ.

“ಸವಿದು, ಅನುಭವಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿ…” ಎಂಬ ಸಂದೇಶದೊಂದಿಗೆ ಈ ರುಚಿಯ ಹಬ್ಬವು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

SHARE
Loading spinner

One thought on “ಮಂಜೇಶ್ವರ ಸರ್ಕಾರಿ ಕಾಲೇಜಿನಲ್ಲಿ ಸಂಭ್ರಮದ ಆಹಾರ ಮೇಳ : ವಿಭಿನ್ನ ರುಚಿಗಳ ಸವಿಯೂಟ”

Leave a Reply

Your email address will not be published. Required fields are marked *

error: Content is protected !!