ಕೊಡ್ಲಮೊಗರು ಶಾಲೆಯಲ್ಲಿ ಲಿಟಲ್ ಕೈಟ್ಸ್ ಹಂತ 2ರ ಶಿಬಿರ

ಕೊಡ್ಲಮೊಗರು: ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ, ಕೊಡ್ಲಮೊಗರು ಇಲ್ಲಿ ಲಿಟಲ್ ಕೈಟ್ಸ್ ಘಟಕದ ಹಂತ 2ರ ಶಿಬಿರವು ಅಕ್ಟೋಬರ್ 15ರಂದು ಗುರುವಾರ ನಡೆಯಿತು.

ಪ್ರೋಗ್ರಾಮಿಂಗ್ ಮತ್ತು ಅನಿಮೇಷನ್ ವಿಷಯಗಳಿಗೆ ಸಂಬಂಧಿಸಿದ ಈ ಶಿಬಿರವನ್ನು ಕಡಂಬಾರು ಶಾಲೆಯ ಲಿಟಲ್ ಕೈಟ್ಸ್ ಮಾರ್ಗದರ್ಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೀತಾ ಎಂ ಅವರು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣವೇಣಿ ಬಿ ಅವರು ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷರಾದ ಮೋಹನ ಮಾಸ್ಟರ್ ಅವರು ಅಧ್ಯಕ್ಷತೆ ವಹಿಸಿದ್ದರು. ಲಿಟಲ್ ಕೈಟ್ಸ್ ಮಾರ್ಗದರ್ಶಕಿ ಪುಷ್ಪಲತಾ ವಿ ಅವರು ಸ್ವಾಗತಿಸಿದರು. ಶ್ರೀ ಮಧುಶ್ಯಾಮ್ ಅವರು ಧನ್ಯವಾದ ಸಮರ್ಪಿಸಿದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್ ಮತ್ತು ಅನಿಮೇಷನ್ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಪರಿಚಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ವೃದ್ಧಿ ಹಾಗೂ ಸೃಜನಶೀಲ ಕೌಶಲಗಳ ಬೆಳವಣಿಗೆಗೆ ಶಿಬಿರ ಸಹಕಾರಿಯಾಯಿತು.

ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡ ಈ ಶಿಬಿರವು ಯಶಸ್ವಿಯಾಗಿ ನಡೆಯಿತು.

SHARE
Loading spinner

2 thoughts on “ಕೊಡ್ಲಮೊಗರು ಶಾಲೆಯಲ್ಲಿ ಲಿಟಲ್ ಕೈಟ್ಸ್ ಹಂತ 2ರ ಶಿಬಿರ”

Leave a Reply

Your email address will not be published. Required fields are marked *

error: Content is protected !!