ಐತಿಹಾಸಿಕ ಪ್ರಸಿದ್ಧ ಪಚ್ಚಂಬಳ ಮಖಾಂ ಉರೂಸ್‌ನ ನೋಟಿಸ್ ಬಿಡುಗಡೆ

ಇಚ್ಚಿಲಂಗೋಡು : ಐತಿಹಾಸಿಕ ಪ್ರಸಿದ್ಧ ಇಚ್ಚಿಲಂಗೋಡು ಪಚ್ಚಂಬಳ ಮಖಾಂ ಉರೂಸ್ ನವೆಂಬರ್ 15ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಅಂಗವಾಗಿ ಉರೂಸ್‌ನ ನೋಟಿಸ್ ಬಿಡುಗಡೆ ಮಾಡಲಾಯಿತು.


ಉರೂಸ್ ಕನ್‌ವೀನರ್ ಅಝೀಝ್ ಟಿಂಬರ್ ಅವರು ಜಮಾಅತ್ ಕಾರ್ಯದರ್ಶಿ ಮೊಹಮ್ಮದ್ ಅಬ್ದುಲ್ಲಾ ಪುಣೆ ಅವರಿಗೆ ನೋಟಿಸ್ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಖಜಾಂಚಿ ಮಜೀದ್ ಪಚ್ಚಂಬಳ, ಜಮಾಅತ್ ಉಪಾಧ್ಯಕ್ಷ ಅಶ್ರಫ್ ಪಚ್ಚಂಬಳ, ಹಸನ್ ಬೀರೋಳಿಕ್ಕ, ಜಮಾಅತ್ ಖತೀಬ್ ಜಾಫರ್ ಬುಸ್ತಾನಿ, ಪ್ರಚಾರ ಸಮಿತಿ ಕನ್‌ವೀನರ್ ಜಸೀಲ್ ಹುಬ್ಬಳ್ಳಿ, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.


ಉರೂಸ್ ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದ ಪ್ರಮುಖ ವಿದ್ವಾಂಸರು ಮತ್ತು ಸಾದಾತ್‌ಗಳು ಭಾಗವಹಿಸಲಿದ್ದಾರೆ. ನವೆಂಬರ್ 28ರಂದು ಹತ್ತು ಸಾವಿರಕ್ಕೂ ಅಧಿಕ ಜನರಿಗೆ ಅನ್ನದಾನ ಏರ್ಪಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!