ಮಜಿಬೈಲ್ : ಹೊಸ ಮನೆಯ ಕಾಮಗಾರಿ ವೇಳೆ ದುರಂತ: 49ರ ಹರೆಯದ ಕಾರ್ಮಿಕ ಸಾವು

ಮಂಜೇಶ್ವರ: ಮುಜಿಬೈಲ್‌ನಲ್ಲಿ ನಡೆದ ದುರಂತವೊಂದರಲ್ಲಿ ಸೆಂಟ್ರಿಂಗ್ ಕೆಲಸಗಾರರೊಬ್ಬರು ಕಟ್ಟಡದ ಮೇಲಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಕಿದೂರು ಪಾಡೆಕಲ್ಲು ನಿವಾಸಿ ಬಾಬು ಪೂಜಾರಿ ಅವರ ಪುತ್ರ ಸುರೇಶ್ (49) ದುರ್ಘಟನೆಗೆ ಬಲಿಯಾದ ದುರ್ದೈವಿ.

​ಮುಜಿಬೈಲ್‌ನಲ್ಲಿ ಹೊಸ ಮನೆಯ ಕಾಮಗಾರಿಗಾಗಿ ಹಲಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಹೊಸಂಗಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!