ಮಜೀರ್ಪಳ್ಳ: ವರ್ಕಾಡಿ ಪಂಚಾಯತ್ ನಲ್ಲಿ ಉದ್ಯೋಗಸ್ತರ ನೇಮಕಾತಿ ಯಲ್ಲಿ ಅವ್ಯವಹಾರ ಹಾಗೂ ಸ್ವಜನ ಪಕ್ಷಪಾತ ನಡೆಯುತ್ತಿದ್ದು ಬಿಜೆಪಿ ಕಾನೂನು ಕ್ರಮಕ್ಕೆ ಮುಂದಾಗಿದೆ.ಸರಕಾರದ ಆದೇಶ ಪ್ರಕಾರ ನೂತನ ಎರಡು ವಾರ್ಡ್ ಗಳಿಗೆ ನೇಮಕಾತಿ ಪ್ರಕ್ರಿಯೆ ಅರೋಗ್ಯಧಿಕಾರಿ ಹಾಗೂ ಪಂಚಾಯತ್ ಪೆನಲ್ ನಡೆಸಬೇಕು ಆದರೆ ಪಂಚಾಯತ್‌ನಲ್ಲಿ ಆಶಾ ಕಾರ್ಯಕರ್ತೆಯ ನೇಮಕಾತಿಯು ಆಡಳಿತ ಸಮಿತಿ ಸರಕಾರ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಬಿಜೆಪಿ ಇದರ ವಿರುದ್ಧ ದೂರು ಸಲ್ಲಿಸಿದೆ.


ವಾರ್ಡ್ 16ರಲ್ಲಿನ ಆಶಾ ಕಾರ್ಯಕರ್ತೆ ಹುದ್ದೆಗಾಗಿ, ಅದೇ ವಾರ್ಡ್‌ನ ನಿವಾಸಿಗಳು ಮುಖಮುಖಿ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ, ವಾರ್ಡ್ 16ರ ನಿವಾಸಿಯಲ್ಲದ, ವಾರ್ಡ್ 10ರ ನಿವಾಸಿಯಾದ ರಾಜಕೀಯ ಪಕ್ಷದ ಸ್ಥಳೀಯ ನೇತಾರೆಗೆ ನೇಮಕ ಮಾಡುವ ನಿರ್ಧಾರವು ಸರಕಾರದ ‘ಜಿ ಓ’ ನಿಯಮಗಳ ಉಲ್ಲಂಘನೆ ಎಂದು ಬಿಜೆಪಿ ಆರೋಪಿಸಿದೆ. ನಿಯಮಗಳ ಉಲ್ಲಂಘನೆಯಾಗುವುದಲ್ಲದೆ, ಹೊಸದಾಗಿ ರಚಿಸಲಾದ ವಾರ್ಡ್‌ಗಳಿಗೆ ಮಾತ್ರ ಹೊಸ ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕೆಂಬ ಸರ್ಕಾರದ ನಿರ್ದೇಶನಕ್ಕೂ ವಿರುದ್ಧವಾಗಿದೆ. ಇದಲ್ಲದೆ, ವರ್ಕಾಡಿಯ ವಾರ್ಡ್ 9ರಲ್ಲಿ ಈಗಾಗಲೇ ಒಬ್ಬ ಆಶಾ ಕಾರ್ಯಕರ್ತೆಯು ಸೇವೆ ಸಲ್ಲಿಸುತ್ತಿದ್ದರೂ, ಅಲ್ಲಿ ಮತ್ತೊಬ್ಬ ಆಶಾ ಕಾರ್ಯಕರ್ತೆಯ ನೇಮಕಾತಿಗಾಗಿ ಸಂದರ್ಶನ ನಡೆಸಿರುವುದನ್ನು ಬಿಜೆಪಿ ಎತ್ತಿ ಹಿಡಿದಿದ್ದು ಪಂಚಾಯತ್ ಸಮಿತಿಯ ಹಾಗೂ ಅರೋಗ್ಯ ಅಧಿಕಾರಿಯ ನಿಯಮ ಬಾಹಿರ, ಸ್ವಜನ ಪಕ್ಷಪಾತ ವನ್ನು ವಿರೋಧಿಸಿದೆ.
ವರ್ಕಾಡಿ ಪಂಚಾಯತ್ ಆಡಳಿತ ಮಾಡುವ ಮುಸ್ಲಿಂ ಲೀಗ್ ಉದ್ಯೋಗಸ್ತರ ನೇಮಕದಲ್ಲಿ ಸ್ವಜನ ಪಕ್ಷಪಾತ ಮಾಡುತ್ತಿದೆ ಇದಕ್ಕೆ ಸ್ಥಳೀಯ ಕಮ್ಯುನಿಸ್ಟ್ ಬೆಂಬಲ ನೀಡುತ್ತಿರುವುದು ಹಾಸ್ಯಸ್ಪದ ಎಂದು ಬಿಜೆಪಿ ಲೇವಡಿ ಮಾಡಿದೆ.


ಬಿಜೆಪಿ ಜಿಲ್ಲಾಅಧ್ಯಕ್ಷೆ ಅಶ್ವಿನಿ ಎಂ ಎಲ್, ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಜಿಲ್ಲಾ ಉಪಾಧ್ಯಕ್ಷರು ಮಣಿಕಂಠ ರೈ ಮುಖಂಡರಾದ ಯತೀರಾಜ್ ಶೆಟ್ಟಿ, ವಾರ್ಡ್ ಸದಸ್ಯೆ ತುಳಸಿ ಕುಮಾರಿ, ಚಂದ್ರ ಶೇಖರ, ಆನಂದ ತಚ್ಚಿರೆ, ಭಾಸ್ಕರ ಪೊಯ್ಯೇ ರವಿರಾಜ್, ಮಮತಾ ಮೊದಲದವರು ಅರೋಗ್ಯ ಅಧಿಕಾರಿ ಹಾಗೂ ಪಂಚಾಯತ್ ಕಾರ್ಯದರ್ಶಿ ಯವರಲ್ಲಿ ದೂರು ನೀಡಿದ್ದು.. ಮುಂದಿನ ಕಾನೂನು ಕ್ರಮಕ್ಕಾಗಿ ಕೋರ್ಟು ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದೆ.

