ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಬಂಧನ

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ. ಬೆಳ್ತಂಗಡಿ ಮಾಲಾಡಿ ಗ್ರಾಮದಲ್ಲಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಇವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಆಳವಡಿಸಿದ್ದರು. ದಿನಾಂಕ:9/11/2025 ರ ಬೆಳಿಗ್ಗೆ ಪ್ರೇಮಾರವರ ಮಗಳು ದೂರುದಾರರಾದ ನಿವಾಸಿ ಪ್ರಕಾಶ್‌ ಶೆಟ್ಟಿ (53) ಎಂಬವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿ.ಸಿ ಟಿ.ವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿದ್ದಾರೆ. ತಕ್ಷಣ ದೂರುದಾರರು ಪ್ರೇಮರ ಮನೆಯ…

Read More

ಕುಲಾಲ ವೇದಿಕೆ ಮಂಜೇಶ್ವರ-ಉಚಿತ ವೈದ್ಯಕೀಯ, ಶಿಬಿರ ಹೃದಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

ಮಂಜೇಶ್ವರ: ಕುಲಾಲ ವೇದಿಕೆ ಮಂಜೇಶ್ವರ ಹೊಸಬೆಟ್ಟು ಮಂಜೇಶ್ವರ ಇದರ ವತಿಯಿಂದ ಕುಲಾಲ ವೇದಿಕೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿ. ಜಯಂತಮಾಸ್ಟರ್ ಮೀಯಪದವು ಹಾಗೂ ದಿ.ಸೋಮಶೇಖರ ಬಡಾಜೆ ಇವರ ಸ್ಮರಣಾರ್ಥದಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಹಾಗು ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ , ಹೃದಯ ತಪಾಸಣಾ ಶಿಬಿರ ಬಿಪಿ , ಶುಗರ್ ಹೃದಯ ತಪಾಸಣೆ, ಇಸಿಜಿ , ಸಾಮಾನ್ಯ ಔಷದಿಯ ವಿಭಾಗ ಅರೋಗ್ಯ ಕಾರ್ಡ್ ಹಾಗು ಬಡ ರೋಗಿಗಳ…

Read More

ನವೆಂಬರ್ 14 ರಿಂದ 16ರ ವರೆಗೆ ಫಾದರ್ ಮುಲ್ಲರ್ ಕನ್ವೆಸ್ಷನ್ ಸೆಂಟರ್ ನಲ್ಲಿ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳ- 2025

ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್‌ ಕಾಲೇಜು (FMHMC) ಮತ್ತು ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಪಿಯೋಪಥಿ ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಸಹಯೋಗದಲ್ಲಿ, ಎಕ್ಸ್‌ ಪ್ಲೋರಾ 2025 ಸಂಶೋಧನಗಳ ಏಕೀಕರಣ ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 2025 ಕಾರ್ಯಕ್ರವು ನವೆಂಬರ್ 14 ರಿಂದ 16ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಮಂಗಳೂರು ಇದರ ನಿರ್ದೇಶಕರಾದ ರೆವರೆಂಡ್…

Read More

ರಾಷ್ಟ್ರಗೀತೆಗೆ ಅಪಮಾನ ಆರೋಪ; ಮಾಜಿ ಸ್ಪೀಕ‌ರ್ ಕಾಗೇರಿ ವಿರುದ್ಧ ಗುಡುಗಿದ ಮಾಜಿ ಸಚಿವ ಬಿ ರಮಾನಾಥ ರೈ .

ಮಂಗಳೂರು: ನಾವು ಪ್ರಾಥಮಿಕ ಶಿಕ್ಷಣ ಪಡೆದಾಗಿನಿಂದಲೂ ಜನಗಣಮನ ರಾಷ್ಟ್ರ,ಗಾನವಾಗಿ ಪ್ರತಿಯೊಬ್ಬರೂ ಗೌರವಿಸುವ ವಿಚಾರ ತಿಳಿದಿದೆ. ದೊಡ್ಡ ವ್ಯಕ್ತಿಯಾಗಿದ್ದರೂ ವಂದೇ ಮಾತರಂ ಮತ್ತು ಜನಗಣಮನಕ್ಕೆ ಬೇಧಭಾವವನ್ನು ಹುಟ್ಟಿಸುವಂತಹ ಹೇಳಿಕೆ ನೀಡುವುದು ತಪ್ಪು. ರವೀಂದ್ರನಾಥ ಠಾಗೋರರು ಜನಗಣಮನ ಗೀತೆ ರಚಿಸಿ ಬಿಡುಗಡೆ ಮಾಡಿದ್ದು 1911 ಡಿಸೆಂಬರ್ 11ಕ್ಕೆ. ಇದನ್ನು ಬ್ರಿಟಿಷರ ಸ್ವಾಗತ ಗೀತೆ ಅಂತಾರಲ್ಲ.ಇದು ಮಾಜಿ ಸ್ಪೀಕ‌ರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರಗೀತೆಗೆ ಮಾಡಿದ ಅಪಮಾನವೇ ಸರಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಗುಡುಗಿದರು . ಅವರು…

Read More

ನವೆಂಬರ್ 14ರಂದು ರಾಜ್ಯಾದ್ಯಂತ ತುಳು-ಕನ್ನಡ ಚಿತ್ರ ‘ಜೈ’ ರಿಲೀಸ್

ರೂಪೇಶ್ ಶೆಟ್ಟಿ ನಿರ್ದೇಶನ ,ಅಭಿನಯದ ಹೊಸ ತುಳು , ಕನ್ನಡ ಚಿತ್ರ ಜೈ ನವೆಂಬರ್ 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.ಬಾಲಿವುಡ್ ನ ಸುನಿಲ್ ಶೆಟ್ಟಿ ಪ್ರಪಥಮ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ,ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಿಗ್ ಬಜೆಟ್ ನ ಈ ಸಿನಿಮಾ ಮಂಗಳೂರು ಹಾಗೂ ಸುತ್ತು ಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಿದ್ದಾರೆ. ಬಿಡುಗಡೆಗೂ ಮುನ್ನ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆದಿತ್ಯವಾರ ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ…

Read More

ಕಾಸರಗೋಡು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ಕಾಸರಗೋಡು ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಪರಮ ಪೂಜ್ಯ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತ್ರ ಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಿನ್ನೆ ವನಿತ ಭವನ ಕೂಡ್ಲುನಲ್ಲಿ ನಡೆಯಿತು . ಕೂಡ್ಲು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ರವರು ಪ್ರಗತಿ ನಿಧಿ ಬೇಡಿಕೆ…

Read More

ಎ ಎಚ್ ಎಸ್ ತಂಡದ ಏಳನೇ ಸೀಸನ್ ‘ಮಂಜೇಶ್ವರ ಬೀಚ್ ಉತ್ಸವ’

ಮಂಜೇಶ್ವರ: ಮಂಜೇಶ್ವರ ಜನತೆಗೆ ಮತ್ತೊಮ್ಮೆ ಮನರಂಜನೆಯನ್ನು ನೀಡಲು ಎ ಎಚ್ ಎಸ್ ತಂಡದ ಏಳನೇ ಸೀಸನ್ ಮಂಜೇಶ್ವರ ಬೀಚ್ ಉತ್ಸವ ಸ್ಥಳೀಯ ನಿವಾಸಿಗಳಾದ ಶಾನವಾಸ್, ಶೆರೀಫ್ ಹಾಗೂ ಇರ್ಫಾನ್ ಎಂಬಿವರ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಕುಂಡು ಕೊಳಕೆ ಬೀಚ್ ನಲ್ಲಿ ಮನರಂಜನೆಗೆ ಸಿದ್ದವಾಗಿದೆ. ಕಳೆದ 6 ಸೀಸನ್ ಗಳಲ್ಲೂ ನಷ್ಟದ ಹಾದಿಯಲ್ಲೇ ಸಾಗಿ ಕೈ ಸುಟ್ಟುಕೊಂಡಿರುವ ಈ ತಂಡ ನಾಡಿನ ಅಭಿವೃದ್ಧಿಗಾಗಿ ಈ ಸಲ ಕೂಡಾ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಪ್ರವೇಶದೊಂದಿಗೆ ಉತ್ತಮ ಮನರಂಜನೆ ಹಾಗೂ ಆಗಮಿಸುವವರಿಗೆ…

Read More

ಗೆಳೆಯರ ಬಳಗ (ರಿ) ಬಲ್ಲಂಗುಡೆಲು ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ…!

ಮಂಜೇಶ್ವರ : ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇದರ ವಾರ್ಷಿಕ ಮಹಾಸಭೆ ಬಲ್ಲಂಗುಡೆಲು ಶ್ರೀ ಕ್ಷೇತ್ರದ ಪರಿಸರದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಾದವ ಉಳಿಯರವರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷರು : ಕಾರ್ತಿಕ್ ಶೆಟ್ಟಿ ಮಜಿಬೈಲು ಕೋಶಾಧಿಕಾರಿ : ಬಶೀರ್ ಮೂಡಂಬೈಲು ಕಾರ್ಯದರ್ಶಿ : ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿಯ ರೂಪೀಕರಣ ನಡೆಯಿತು.ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಉಪಾಧ್ಯಕ್ಷರಾಗಿ…

Read More

ಬಿಜೆಪಿ ಮೀoಜ ಪಂಚಾಯತ್ ಕಚೇರಿ ಉದ್ಘಾಟನೆ

ಬಿಜೆಪಿ ಮೀoಜ ಪಂಚಾಯತ್ ಕಚೇರಿ ಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಸುನಿಲ್ ಪಿ ಆರ್, ಮಾಧು ಒಳಪಿಲ್, ಮಣಿಕಂಠ ರೈ, ಎ ಕೆ ಕಯ್ಯರ್, ಲೋಕೇಶ್ ನೊಂದ, ಕೃಷ್ಣ ನಾವಡ, ಕೃಷ್ಣ ಬೆಜ್ಜ, ನಾರಾಯಣ ನಾಯ್ಕ್, ಕೆ ವಿ ಭಟ್, ಶಾಲಿನಿ, ಜ್ಯೋತಿ, ಸಂತೋಷ್ ದೈಗೋಳಿ ಪದ್ಮನಾಭ ರೈ , ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು. ಚಂದ್ರಹಾಸ ಬೆಜ್ಜ…

Read More

ರಿಕ್ಷಾ, ನಿಲ್ದಾಣಗಳ ನಡವಳಿಯಲ್ಲಿ ಕೆಲವು ಬದಲಾವಣೆಗೆ ಅಗತ್ಯಕ್ಕೆ ಆಟೋ ಯೂನಿಯನ್ ಆಗ್ರಹ

ಉಡುಪಿ: ಜಿಲ್ಲೆ ಮತ್ತು ನಗರದ ಆಟೋ ರಿಕ್ಷಾ ಮತ್ತು ಆಟೋ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಅ.1ರಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಹೊಸ ನಡವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಆಶ್ರಯ ಆಟೋ ಯೂನಿಯನ್ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರು, ವಲಯ-1 ಪರ್ಮಿಟ್ ಅಳವಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ನಗರ ಪರವಾನಿಗೆ ಹೊಂದಿರುವ ಆಟೋ ಚಾಲಕನಿಗೆ ಒಂದು ಆಟೋ ಸ್ಟ್ಯಾಂಡ್ ನಲ್ಲಿ ಮಾತ್ರ ಸದಸ್ಯತ್ವ ನೀಡಬೇಕು. ಎರಡು ಕಡೆ…

Read More
error: Content is protected !!