ರಾಮಮಂದಿರ ನಿಧಿ ಅವ್ಯವಹಾರ ಆರೋಪ: ಕರ್ನಾಟಕ ಮೂಲದ ಆರ್‌ಎಸ್‌ಎಸ್ ಮುಖಂಡನ ವಿಚಾರಣೆ
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ ನಿಧಿ ಸಂಗ್ರಹದಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಮೂಲದ ಆರ್‌ಎಸ್‌ಎಸ್ ಮುಖಂಡ ಗೋಪಾಲ್ ಅವರನ್ನು ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಗೆ ಒಳಪಡಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ರಾಮಮಂದಿರ ನಿರ್ಮಾಣ ಹಾಗೂ ನಿರ್ವಹಣೆಯ ಉಸ್ತುವಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಗೋಪಾಲ್ ಕಳೆದ ಐದು ವರ್ಷಗಳಿಂದ ಅಯೋಧ್ಯೆಯಲ್ಲೇ ನೆಲೆಸಿದ್ದು, ಈ ಹಿಂದೆ ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಪ್ರಾಂತದಲ್ಲಿ…
