ರಿಕ್ಷಾ, ನಿಲ್ದಾಣಗಳ ನಡವಳಿಯಲ್ಲಿ ಕೆಲವು ಬದಲಾವಣೆಗೆ ಅಗತ್ಯಕ್ಕೆ ಆಟೋ ಯೂನಿಯನ್ ಆಗ್ರಹ

ಉಡುಪಿ: ಜಿಲ್ಲೆ ಮತ್ತು ನಗರದ ಆಟೋ ರಿಕ್ಷಾ ಮತ್ತು ಆಟೋ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಅ.1ರಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಹೊಸ ನಡವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಆಶ್ರಯ ಆಟೋ ಯೂನಿಯನ್ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರು, ವಲಯ-1 ಪರ್ಮಿಟ್ ಅಳವಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ನಗರ ಪರವಾನಿಗೆ ಹೊಂದಿರುವ ಆಟೋ ಚಾಲಕನಿಗೆ ಒಂದು ಆಟೋ ಸ್ಟ್ಯಾಂಡ್ ನಲ್ಲಿ ಮಾತ್ರ ಸದಸ್ಯತ್ವ ನೀಡಬೇಕು. ಎರಡು ಕಡೆ…

Read More

ಅಜ್ಞಾತರಿಂದ ಗಲ್ಫ್ ನಿವಾಸಿಯ ಮನೆಗೆ ಗುಂಡು ಹಾರಾಟ

ಮಂಜೇಶ್ವರ : ಉಪ್ಪಳ ಹಿದಾಯತ್ ಬಜಾರಿನ ಕೊಲ್ಲಿ ಉದ್ಯೋಗಿಯೊಬ್ಬರ ಮನೆಗೆ ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಉಪ್ಪಳ ಹಿದಾಯತ್ ಬಜಾರಿನಲ್ಲಿ ವಾಸವಾಗಿರುವ ಅಬೂಬಕ್ಕರ್ ಎಂಬವರ ಮನೆಗೆ ಗುಂಡು ಹಾರಿಸಿರುವ ಬಗ್ಗೆ ದೂರಲಾಗಿದೆ. ಗುಂಡು ಹಾರಾಟದಿಂದ ಮನೆಯ ಕಿಟಿಕಿಯ ಗಾಜುಗಳು ಪುಡಿಯಾಗಿದೆ. ಅಬೂಬಕ್ಕರ್ ಕತಾರ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಈತನ ಪತ್ನಿ ಹಾಗೂ ಪುತ್ರಿ ಮನೆಯಲ್ಲಿದ್ದರೆಂದು ಹೇಳಲಾಗಿದೆ.ಕಾರಿನಲ್ಲಿ ಆಗಮಿಸಿದ ತಂಡ ಗುಂಡು ಹಾರಿಸಿ ತಕ್ಷಣ ಅಲ್ಲಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ.ಮಾಹಿತಿ…

Read More

ಕಡಬದಲ್ಲಿ 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕಡಬ, ನ.6: ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕ ಗಗನ್ (14) ಸ್ಥಳೀಯ ಶಾಲೆಯ ವಿದ್ಯಾರ್ಥಿಯಾಗಿದ್ದು, ಪೋಷಕರಾದ ತಂದೆ-ತಾಯಿ ಹಾಗೂ ಇಬ್ಬರು ಸಹೋದರ-ಸಹೋದರಿಯರೊಂದಿಗೆ ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯಲ್ಲಿ ವಾಸವಾಗಿದ್ದನು. ನ.6ರಂದು ಪೋಷಕರು ಶಾಲೆಗೆ ತೆರಳಿ ಮಗನ ವಿದ್ಯಾಭ್ಯಾಸದ ಪ್ರಗತಿ ಕುರಿತು ವಿಚಾರಿಸಿದಾಗ, ಆತನ ಕಲಿಕಾ ಪ್ರಗತಿ ತೃಪ್ತಿಕರವಾಗಿಲ್ಲವೆಂಬ ಮಾಹಿತಿ ದೊರೆತಿತ್ತು. ಸಂಜೆ ಮನೆಗೆ ಮರಳಿದ ಬಾಲಕ ಆಟವಾಡಿ ಬಳಿಕ…

Read More

ಜಂಟಿ ಸರ್ವೇಗೆ ನಡೆಸಿ ವರದಿ ನೀಡುವಂತೆ ಸೂಚನೆ : ನವೆಂಬರ್ ೧೦ ರಿಂದ ಸರ್ವೆ: ಸುಧೀರ್ ಕುಮಾರ್ ಹೇಳಿಕೆ

ಕಡಬ ತಾಲೂಕಿನ ವ್ಯಾಪ್ತಿಯಲ್ಲಿರುವ ಐನೆಕಿದು, ಸುಬ್ರಮಣ್ಯ, ಬಿಳಿನೆಲೆ, ಶಿರಿಬಾಗಿಲು , ಕೊಂಬಾರು, ಕೊಣಾಜೆ , ಐತ್ತೂರು, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ ಮುಂತಾದ ಹತ್ತು ಗ್ರಾಮಗಳ ಅರಣ್ಯ ಮೀಸಲು ಅರಣ್ಯಗಳ ಜಂಟಿ ಸರ್ವೆ ನಡೆಸಿ ಕ್ರೂಡಿಕೃತ ದಾಖಲೆಗಳನ್ನು ಸಿದ್ದಪಡಿಸಿ ವರದಿ ನೀಡುವಂತೆ ಸರಕಾರ ಆದೇಶ ಮಾಡಿದ್ದು ನವೆಂಬರ್ ೧೦ ರಿಂದ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕಡಬದಲ್ಲಿ…

Read More

ಸಾಮಾಜಿಕ ಪಿಡುಕನ್ನು ಹೋಗಲಾಡಿಸುವ ಕನಕದಾಸರ ಬರವಣಿಗೆ ಇಂದಿಗೂ ಪ್ರಸ್ತುತ : ದ. ಕ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಜಯಂತಿ ಆಚರಣೆಯು ಮಂಗಳೂರಿನ ತುಳುಭವನದಲ್ಲಿ ನಡೆಯಿತು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ದರ್ಶನ್ ಹೆಚ್ ವಿ , ಸಾಹಿತ್ಯವನ್ನು ತಿಳಿಯುವುದು ತುಂಬಾನೇ ಮುಖ್ಯವಾಗಿರುತ್ತದೆ . ಅದರಲ್ಲಿ ನಾನಾ ಪ್ರಕಾರಗಳು ಬರುತ್ತದೆ . ಅವುಗಳಲ್ಲಿ ಒಂದು ಪ್ರಕಾರ ದಾಸ ಸಾಹಿತ್ಯ . ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಲೋಕಕ್ಕೆ…

Read More

ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025ರಲ್ಲಿ ಶೆರಿಲ್ ಡಿಸೋಜಾಗೆ ಬೆಳ್ಳಿ ಪದಕ

ಮಂಗಳೂರು: ಕರ್ನಾಟಕ ರಾಜ್ಯ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಪುರುಷ ಮತ್ತು ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025 (ಕ್ಲಾಸಿಕ್ ಮತ್ತು ಎಕ್ಯುಪ್ಪೆಡ್ ) ವಿಭಾಗದಲ್ಲಿ ಸ್ಪರ್ಧೆಯು ಇತ್ತೀಚಿಗೆ ತೊಕ್ಕೊಟ್ಟುವಿನ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿರುವ ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ವಿಭಾಗವನ್ನು ಪ್ರತಿನಿಧಿಸಿದ ಶೆರಿಲ್ ಡಿಸೋಜಾ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು ಮೆಲ್ವಿನ್ ಡಿಸೋಜಾ ಮತ್ತು ಲೀನಾ ಫೆರ್ನಾಂಡಿಸ್ ಇವರ ಪುತ್ರಿಯಾಗಿದ್ದಾರೆ . ಇವರಿಗೆ ನಾಗುರಿಯ ಗರೋಡಿ…

Read More

ಕ್ಲಾಸಿಕ್ ಜೂನಿಯರ್ 57 ಕೆಜಿ ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025ರಲ್ಲಿ ಮೋಕ್ಷಿತಾ ಬಿ ಗೆ ಬೆಳ್ಳಿ ಪದಕ

ಮಂಗಳೂರು: ಕರ್ನಾಟಕ ರಾಜ್ಯ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಪುರುಷ ಮತ್ತು ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025 (ಕ್ಲಾಸಿಕ್ ಮತ್ತು ಎಕ್ಯುಪ್ಪೆಡ್) ವಿಭಾಗದಲ್ಲಿ ಸ್ಪರ್ಧೆಯು ಇತ್ತೀಚಿಗೆ ತೊಕ್ಕೊಟ್ಟಿನ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಕ್ಲಾಸಿಕ್ ಜೂನಿಯರ್ 57 ಕೆಜಿ ವಿಭಾಗವನ್ನು ಪ್ರತಿನಿಧಿಸಿದ ಸೇಂಟ್ ಆಗ್ನೆಸ್ ಕಾಲೇಜಿನ ಮೋಕ್ಷಿತಾ ಬಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ, ಅವರು ದಿವಂಗತ ಸುರೇಶ್ ಮತ್ತು ಮನೋರಮಾ ಬಿ ಇವರ ಪುತ್ರಿಯಾಗಿದ್ದಾರೆ . ಇವರಿಗೆ ನಾಗುರಿಯ ಗರೋಡಿ ಎಕ್ಸೆಲ್ ಮಲ್ಟಿ ಜಿಮ್‌ನ…

Read More

ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿ ರೂಪೀಕರಣ

ವರ್ಕಾಡಿ ::ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿಯನ್ನು ದೈವಸ್ಥಾನದ ವಠಾರದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಸೀನ ಬೋಳದ ಪದವು ಇವರ ಘನ ಅಧ್ಯಕ್ಷತೆಯಲ್ಲಿ ರೂಪೀಕರಣ ಗೊಳಿಸಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಅಡ್ಕ, ಉಪಾಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮುಡಿಮಾರು, ಕೋಶಾಧಿಕಾರಿಯಾಗಿ ಮನೋಜ್ ಶೆಟ್ಟಿ ಭಂಡಾರ ಮನೆ ವರ್ಕಾಡಿ, ಪ್ರಧಾನ ಸಂಚಾಲಕರಾಗಿ ನವೀನ್ ಶೆಟ್ಟಿ ಮಂಗಲ್ಪಾಡಿ, ಆಯ್ಕೆಯಾದರು. ಹಾಗೂ ಗೌರವ…

Read More

ಅನಾರೋಗ್ಯ ಪೀಡಿತ ವಿಧ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳ ಬಂಧನ…. !

ಮಂಗಳೂರು: ಅನಾರೋಗ್ಯ ಪೀಡಿತ ವಿಧ್ಯಾರ್ಥಿ ಮನೆಗೆ ತೆರಳುತ್ತಿದ್ದ ವಿಧ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಹಪಾಠಿ ವಿಧ್ಯಾರ್ಥಿಯೊಬ್ಬ ಅನಾರೋಗ್ಯಪೀಡಿತನಾದ ಕಾರಣ ಆತನ ಆರೋಗ್ಯ ವಿಚಾರಿಸಲು ಮನೆಗೆ ತೆರಳುತ್ತಿದ್ದ ವಿಧ್ಯಾರ್ಥಿಗಳ ಗುಂಪಿನ ಮೇಲೆ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಈ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಬೈಕ್ ಸವಾರ ಮುಸ್ತಫಾ ಮತ್ತು ಸಹಸವಾರ ಮುಸ್ತಫಾ ಪೆರಿಯಡ್ಕ…

Read More

ಡಾ. ಟಿಎಂಎ ಪೈ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನವೆಂಬರ್ 14,15 ಮತ್ತು 16 ರಂದು “ಕಾಜು ಶತಮಾನೋತ್ಸವ ಸಮ್ಮೇಳನ -2025”

ಮಂಗಳೂರು: ಕರ್ನಾಟಕ ಗೋಡಂಬಿ ಸಂಸ್ಕರಣೆಯ 100 ವರ್ಷಗಳ ಸ್ಮರಣಾರ್ಥವಾಗಿ ಕರ್ನಾಟಕ ಗೋಡಂಬಿ ತಯಾರಕರ ಸಂಸ್ಥೆಯಾದ [ಕೆಸಿಎಂಎ] “ಕಾಜು ಶತಮಾನೋತ್ಸವ ಸಮ್ಮೇಳನ -2025″ ಕಾರ್ಯಕ್ರಮವನ್ನು ನವೆಂಬರ್ 14, 15 ಮತ್ತು 16 ರಂದು ಭಾರತದ ಸಂಘಟಿತ ಗೋಡಂಬಿ ಉದ್ಯಮದ ಜನ್ಮಸ್ಥಳವಾದ ಮಂಗಳೂರಿನ ಡಾ. ಟಿಎಂಎ ಪೈ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಸಲಿದೆ ಎಂದು ಕೆ ಸಿ ಎಂ ಎ ಸಂಸ್ಥೆಯ ಅಧ್ಯಕ್ಷರಾದ ಎ ಕೆ ರಾವ್ ತಿಳಿಸಿದರು . ಅವರು ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ…

Read More
error: Content is protected !!