ಯೆನೆಪೋಯ ವರ್ಲ್ಡ್ ಸ್ಕೂಲ್ನಲ್ಲಿ ಪ್ರೀಮಿಯರ್ ಅಂತರ್-ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ …. !
ಮಂಗಳೂರು ಕ್ವಿಜಿಂಗ್ ಫೌಂಡೇಶನ್ ಸಹಯೋಗದೊಂದಿಗೆ, ಯೆನ್‌ಕ್ವಿಝ್ 2025 ಸ್ಪರ್ಧೆಯು ನವೆಂಬರ್ 14 ಮತ್ತು 15 ರಂದು ಯೆನೆಪೋಯ ವರ್ಲ್ಡ್ ಸ್ಕೂಲ್ ಜೆಪ್ಪಿನಮೊಗರಿನ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಯೆನೆಪೋಯ ವರ್ಲ್ಡ್ ಸ್ಕೂಲ್ ಇದರ ಪ್ರಾಂಶುಪಾಲರಾದ ಅಂಥೋನಿ ಜೋಸೆಫ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ವಿದ್ಯಾರ್ಥಿಗಳಲ್ಲಿ ಕೌತುಕ ಹುಟ್ಟುಹಾಕಲು, ಶೈಕ್ಷಣಿಕ ಅರಿವು ಮತ್ತು ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಈ ಅಂತರ್-ಶಾಲಾ ರಸಪ್ರಶ್ನೆ ಸ್ಪರ್ಧೆಯು ಸಹಕಾರಿ ಯಾಗಲಿದೆ…