Headlines

ನಾಗರಕಟ್ಟೆ ಡಿಸೆಂಬರ್ 4 , 5 ರ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಕಾಸರಗೋಡು ಕೋಟೆಯ ಪೂರ್ವ ಮುಂಭಾಗದಲ್ಲಿ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಶ್ರೀ ಶ್ರೀ ಡಾ. ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳವರಿಂದ ಸ್ಥಾಪಿಸಲ್ಪಟ್ಟ ಶ್ರೀ ಶಾರದಾ ಭಜನಾಶ್ರಮದ ಜೀರ್ಣೋದ್ದಾರ ಹಾಗೂ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ನೂತನ ಕಟ್ಟೆ ಗಳಲ್ಲಿ ವೇದಾಚಾರ್ಯ ಶ್ರೀ ಶ್ರೀ ಉಚ್ಚಿಲ್ಲತಾಯ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಡಿಸೆಂಬರ್ 4 ಹಾಗೂ 5.ರಂದು ನಡೆಯಲಿರುವ ಬ್ರಹ್ಮ ಕಲಶ ಮತ್ತು 4ರಂದು ಸಂಜೆ 5ಗಂಟೆಗೆ ಮಾಜಿ ಮಂತ್ರಿ ಕೃಷ್ಣ ಜೆ. ಪಾಲೇಮಾರ್ ಅದ್ಯಕ್ಷತೆಯಲ್ಲಿ, ನಡೆಯುವ ಕ್ಷಾತ್ರ…

Read More

ಕೊಳತ್ತಮಜಲು ಅವರಿಗೆ ಕದ್ರಿ ಕಂಬಳ ಗುತ್ತು ಪ್ರಶಸ್ತಿ

ಮಂಗಳೂರು: ಪಾವಂಜೆ ಮೇಳದ ಕಲಾವಿದ, ಪ್ರಬಂಧಕ “ಯಕ್ಷ ರಾಮ ” ಬಿರುದಾಂಕಿತ ಮಾಧವ ಬಂಗೇರ ಕೊಳತ್ತಮಜಲು ಅವರಿಗೆ ಕದ್ರಿ ದೇವಸ್ಥಾನದಲ್ಲಿ ನಡೆದ ಕದ್ರಿ ಯಕ್ಷ ಬಳಗದ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಿ ಸನ್ಮಾನಿಸ ಲಾಯಿತು.ಹಿರಿಯ ವೈದ್ಯ ಡಾ. ಜಯಶಂಕರ್ ಮಾರ್ಲ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ ಕುಮಾರ್ ಮೊಯ್ಲೊಟ್ಟು, ಸಂಜಯ್ ಕುಮಾರ್ ಗೋಣಿಬೀಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು….

Read More

ನವೆಂಬರ್ 28 ರಂದು ಬಹ್ರೈನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025’ ಕಾರ್ಯಕ್ರಮ

ಮಂಗಳೂರು: ನವೆಂಬರ್ 28 ರಂದು ಸಂಜೆ 5 ಗಂಟೆಗೆ ಬಹ್ರೈನ್‌ನ ಇಂಡಿಯನ್ ಕ್ಲಬ್ ಓಪನ್ ಗ್ರೌಂಡ್ ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025’ ಕಾರ್ಯಕ್ರಮ ನಡೆಯಲಿದೆ ಎಂದು NRI ಬಹ್ರೈನ್‌ ಫೋರಮ್ ಇದರ ಅಧ್ಯಕ್ಷರಾದ ರಾಜ್ ಕುಮಾರ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , NRI ಫೋರಮ್ ನನ್ನು ಕರ್ನಾಟಕ- ಬಹ್ರೈನ್‌ ಮೂಲಕ ಆಯೋಜಿಸಲಾದ ಈ ಸಾಂಸ್ಕೃತಿಕ ಉತ್ಸವವು ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಕಲೆಯ ಭವ್ಯ ಪ್ರದರ್ಶನವಾಗಿದ್ದು, ಸಾಂಪ್ರದಾಯಿಕ…

Read More

ನವೆಂಬರ್ 9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಶುಕುಮಾ‌ರ್ ತುಳು ಸಾಹಿತ್ಯೋತ್ಸವ – ಪ್ರಶಸ್ತಿ ಪ್ರಧಾನ

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಸಸಿಹಿತ್ಲು ಘಟಕದ ಆತಿಥ್ಯದಲ್ಲಿ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ , ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸಹಯೋಗದಲ್ಲಿ ವಿಶುಕುಮಾ‌ರ್ ತುಳು ಸಾಹಿತ್ಯೋತ್ಸವ ಕಾರ್ಯಕ್ರಮವು ನವೆಂಬರ್ 9 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳ್ಳಿಗೆ 8. ರಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ…

Read More

ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನ- ಮುಂದೂಡಿಕೆ

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ವತಿಯಿಂದ ದಿನಾಂಕ: 9-11-2025 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಬೇಕಿದ್ದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನವನ್ನು ಮುಂದೂಡಲಾಗಿದೆ

Read More

ಉಮೀದ್ ಪೋರ್ಟಲ್ ಮುಖಾಂತರ ವಫ್ಫ್ ಆಸ್ತಿಯನ್ನು ಬೇಗನೆ ನೋಂದಣಿ ಮಾಡಿಕೊಳ್ಳಿ : ಸ್ಪೀಕರ್ ಯುಟಿ ಖಾದರ್

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಜಿಲ್ಲಾ ವಕ್ಫ್ ಇಲಾಖೆಯ ಸಹಯೋಗದಲ್ಲಿ ಉಮೀದ್ ಪೋರ್ಟಲ್-2025 ಈ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ನಗರದ ಪುರಭವನ ಮಿನಿ ಟೌನ್‍ಹಾಲ್‍ನಲ್ಲಿ ನಡೆಯಿತು. ಕರ್ನಾಟಕ ಸ್ಪೀಕರ್ ಯುಟಿ ಖಾದರ್ ಉಮೀದ್ ಪೋರ್ಟಲ್ ಕಾರ್ಯಕಾರದ ಮಾಹಿತಿಯನ್ನು ನೀಡಿ , ಉಮೀದ್ ಪೋರ್ಟಲ್ ಮುಖಾಂತರ ವಫ್ಫ್ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ಆನ್ಲೈನ್ ವೇದಿಕೆ ಆಗಿರುವುದರಿಂದ ಇತರೆಡೆಗಳಲ್ಲಿ ಇದ್ದರೂ ನೋಂದಣಿಗೆ ಅವಕಾಶ ಇದೆ. ಉಮೀದ್ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುವ ಸಾದ್ಯತೆ…

Read More

ಡಾ. ವಾಮನ್ ರಾವ್ ಬೇಕಲ್ ಕುರಿತ ಕೃತಿ ಬಿಡುಗಡೆ

ಕಾಂತಾವರ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಜೀವನ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಯು. ವಿಶ್ವನಾಥ ಶೆಣೈ ಅವರು ಕಾಂತಾವರ ಕನ್ನಡ ಸಂಘದಲ್ಲಿ ಬಿಡುಗಡೆ ಮಾಡಿದರು. ಕಾಸರಗೋಡಿನ ಸಾಹಿತಿ ವಿರಾಜ್ ಅಡೂರು ರಚಿಸಿದ ಈ ಕೃತಿಯು ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ…

Read More

ಆಡಳಿತ ಭಾಷಾ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ

ಕಾಸರಗೋಡು: ಆಡಳಿತ ಭಾಷಾ ಸಪ್ತಾಹಕ್ಕೆ ಸಂಬಂಧಿಸಿದಂತೆ ಕಾಸರಗೋಡು ನೋಂದಣಿ ಇಲಾಖೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮಂಜೇಶ್ವರ ಉಪ-ನೋಂದಣಿ ಕಚೇರಿಯಲ್ಲಿ ದಿನಾಂಕ 04-11-2025 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ನೋಂದಣಾಧಿಕಾರಿ ಶ್ರೀ ಫಿರೋಜ್ ಟಿ.ಎಂ., ಮಲಯಾಳಂ ಭಾಷೆಯಲ್ಲಿ ಆಡಳಿತದ ಮೂಲಕ ಎಲ್ಲಾ ವರ್ಗದ ಜನರು ಆಡಳಿತದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದರು. ಪ್ರಸಿದ್ಧ ನಾಟಕಕಾರ ಮತ್ತು ಬರಹಗಾರ ಶ್ರೀ ಸುರೇಶ್ ಬಿ.ಎನ್. ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರಂ ಉಪ-ನೋಂದಣಿಾಧಿಕಾರಿ ಶ್ರೀ ಅರುಣ್‌ಕುಮಾರ್ ಕೆ. ಶ್ರೀ ರಂಜು ಎಂ.ವಿ….

Read More

ಟಿಪ್ಪು ಸುಲ್ತಾನ್ ಹೆಸರಲ್ಲಿ ಪ್ರಶಸ್ತಿ ನೀಡುವಂತೆ ಹಾಗು ಪಠ್ಯಪುಸ್ತಕಗಳಲ್ಲಿ ಟಿಪ್ಪು ಚರಿತ್ರೆ ಅಳವಡಿಸಿ, ಜನ್ಮದಿನ ಆಚರಣೆಗೆ ಕ್ರಮ ಕೈಗೊಳ್ಳಬೇಕು – ಮುಸ್ಲಿಂ ಲೀಗ್ ಒತ್ತಾಯ

ಮಂಗಳೂರು: ಟಿಪ್ಪು ಸುಲ್ತಾನ್ ಹೆಸರಲ್ಲಿ ಪ್ರಶಸ್ತಿ ನೀಡುವಂತೆ ಹಾಗು ಪಠ್ಯಪುಸ್ತಕಗಳಲ್ಲಿ ಟಿಪ್ಪು ಚರಿತ್ರೆ ಅಳವಡಿಸಿ, ಜನ್ಮದಿನ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಲೀಗ್ ಒತ್ತಾಯ ಮಾಡಿದೆ. ಶಹೀದ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಶಾಲಾ ಕಾಲೇಜುಗಳ ಪುಸ್ತಕಗಳಲ್ಲಿ ಅವರ ಚರಿತ್ರೆಯನ್ನು ಅಳವಡಿಸಬೇಕು. ಸಾಹಸಿಗರಿಗೆ ಅವರ ಹೆಸರಲ್ಲಿ ಪ್ರಶಸ್ತಿಯನ್ನು ಕೊಡಬೇಕು ಎನ್ನುವುದು ಮುಸ್ಲಿಂ ಲೀಗಿನ ಬೇಡಿಕೆಯಾಗಿದೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದರೆ, ಬಿಜೆಪಿ ಹೇಗೆ ಪತನಗೊಂಡಿತೋ ಅದೇ ರೀತಿ ಕಾಂಗ್ರೆಸ್…

Read More

ಉಡುಪಿ: ನ.7ರಂದು ಶೀರೂರು ಪರ್ಯಾಯ ಪೂರ್ವಭಾವಿ ಸಮಾಲೋಚನಾ ಸಭೆ

ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಇದೇ ನ. 7ರಂದು ಸಂಜೆ 4.30ಕ್ಕೆ ಉಡುಪಿಯ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ಶೀರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪರ್ಯಾಯ ಪೂರ್ವಭಾವಿ ಬಗ್ಗೆ ಪ್ರಮುಖರೊಂದಿಗೆ…

Read More
error: Content is protected !!