ಕೂದಲೆಳೆ ಅಂತರದಲ್ಲಿ ತಪ್ಪಿದ ಬಾಲಕಿಯರ ಸಾಮೂಹಿಕ ಅತ್ಯಾಚಾರ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ … !

ಮೂಡಬಿದ್ರೆ: ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಸಮಯಪ್ರಜ್ಞೆಯಿಂದ ಸಾಮೂಹಿಕ ಅತ್ಯಾಚಾರ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಿದ್ದು, ಇಬ್ಬರು ಹದಿಹರೆಯದ ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ. ನಿಡೋಡಿ ಕಲ್ಲಕುಮೇರ್ ನಿವಾಸಿ ಮಹೇಶ್, ಕಟೀಲು ಕೊಂಡೆಮೂಲ ನಿವಾಸಿ ಯಜ್ಞಶ್, ಮೂಲ್ಕಿ ನಡುಗೋಡು ನಿವಾಸಿ ದಿಲೀಪ್ ಯಾನ ದೀಪು ಹಾಗೂ ಕೊಂಡೆಮೂಲ ನಿವಾಸಿ ಶ್ರೀಕಾಂತ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಎ1 ಆರೋಪಿ ನಿಡೋಡಿ ಕಲ್ಲಕುಮೇರ್ ನಿವಾಸಿ ಮಹೇಶ್ ಒಬ್ಬಳು ಬಾಲಕಿಯನ್ನು ಅತ್ಯಾಚಾರ ನಡೆಸಿದ್ದು, ಈತನ…

Read More

CPIM ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿ ಕಾಂ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಅಕ್ಟೋಬರ್ 19 ರಂದು ಉದ್ಘಾಟನೆ.

ಕೊಡ್ಲಮೊಗರು: ವರ್ಕಾಡಿ ಪಂಚಾಯತ್ ನಲ್ಲಿ ಸಿಪಿಐಎಂ ಪಕ್ಷದ ಸಂಘಟನೆಗಾಗಿ ಹಗಲಿರುಳೆನ್ನದೆ ದುಡಿದು, ತನ್ನ ಜೀವನವನ್ನೇ ಕಾರ್ಮಿಕ ವರ್ಗದ ಹಿತಕ್ಕಾಗಿ ಮುಡಿಪಾಗಿಸಿದ, ಹಲವಾರು ವರ್ಷಗಳ ಕಾಲ ಲೋಕಲ್ ಸಮಿತಿ ಕಾರ್ಯದರ್ಶಿಯಾಗಿ ಸೇವೆಗೈದ ಕಾಂ. ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವಾದ ಸಿಪಿಐಎಂ ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿಯ ಉದ್ಘಾಟನೆಯನ್ನು ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಮಾಸ್ಟರ್ ನಿರ್ವಹಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯರಾದ, ಕೆ. ಪಿ. ಸತೀಶ್ ಚಂದ್ರನ್,…

Read More

ಜೆಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಉತ್ಸವ

ಮಂಗಳೂರು ;ಜಿಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಅ. 18 ಮತ್ತು 19 ರಂದು ಮಂಗಳೂರಿನ ಸ್ವಸ್ತಿಕ ವಾಟರ್‌ಫ್ರಂಟ್ ನಲ್ಲಿ ಜಿಸಿಐ ಮಂಗಳೂರು ಸಾಮ್ರಾಟ್ ಘಟಕದ ಅತಿಥ್ಯದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದು ಘಟಕಾಧ್ಯಕ್ಷರಾದ ಜೆಸಿ ಯತೀಶ್ ಕೆ ಎಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ…

Read More

ಉಡುಪಿ: ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಯಲ್ಲಿ ಕಳ್ಳತನ; 1ಕೆ.ಜಿ. ಅಧಿಕ ಚಿನ್ನ ದೋಚಿ ಪರಾರಿ

ಉಡುಪಿ: ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಕಳ್ಳರು 1 ಕೆಜಿ ಅಧಿಕ ಚಿನ್ನದ ಗಟ್ಟಿ ಕಳ್ಳತನ ಮಾಡಿರುವ ಘಟನೆ ಉಡುಪಿ‌ ಗುಂಡಿಬೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆರ್ಯ ಗೋಲ್ಡ್ ಮಾಲೀಕ ಅಜಯ್ ಜಾಧವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಗುಂಡಿಬೈಲಿನ ಮನೆಗೆ ನುಗ್ಗಿದ ಕಳ್ಳರು ಒಂದು ಕೆಜಿಗೂ‌ ಅಧಿಕ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ‌.

Read More

ಜಿಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಉತ್ಸವ

ಮಂಗಳೂರು ; ಜಿಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಅ. 18 ಮತ್ತು 19 ರಂದು ಮಂಗಳೂರಿನ ಸ್ವಸ್ತಿಕ ವಾಟರ್‌ಫ್ರಂಟ್ ನಲ್ಲಿ ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಅತಿಥ್ಯದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದು ಘಟಕಾಧ್ಯಕ್ಷರಾದ ಜೆಸಿ ಯತೀಶ್ ಕೆ ಎಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ…

Read More

ವೀ ಒನ್ ಆಕ್ವಾ ಈಜು ತಂಡಕ್ಕೆ ಸಮಗ್ರ ಪ್ರಶಸ್ತಿ*

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ಮಂಗಳ ಈಜು ಸಂಸ್ಥೆಯ ಆಶ್ರಯದಲ್ಲಿ ನಡೆದ ಗಾಲ ,2025 ಈಜುಸ್ಪರ್ಧೆಯಲ್ಲಿ 449 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.ಈ ಸ್ಪರ್ಧೆಯಲ್ಲಿ ಆಯಾಯ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳಿಸಿದ ಈಜುಪಟುಗಳಾದ ರಿಯನ್ನ ದೃತಿ ಫರ್ನಾಂಡಿಸ್, ಸಾನ್ವಿ, ಯಶ್ವಿ ಬಿ ಹೆಚ್, ಅಲೀಟಾ ಡಿಸೋಜ, ರೀಮಾ ಎ ಎಸ್, ಪ್ರದ್ಯುಮ್ನ ಇವರು ವೈಯಕ್ತಿಕ ಚಾಂಪಿಯನ್ ಗಳಾಗಿ ಮೂಡಿ ಬಂದರು .ಒಟ್ಟು 65 ಚಿನ್ನ 24 ಬೆಳ್ಳಿ 23 ಕಂಚಿನ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ….

Read More

ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡುಬಂಟ ಸಂಸ್ಜೃತಿ ಪರಂಪರೆ ಅನಾವರಣ-ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ “ಬಂಟ ಸಂಸ್ಜೃತಿ ಪರಂಪರೆ ಅನಾವರಣ” ದಕ್ಷಿಣ ಕನ್ನಡ ಜಿಲ್ಲಾ ಮಹಾ ಮಂಡಲದ ಪದಗ್ರಹಣ ಸಮಾರಂಭ ಅಕ್ಟೋಬರ್ 19 ರಂದು ಭಾನುವಾರ ಸಂಜೆ 3 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿರುವ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ಸ್ ಹಾಸ್ಟೇಲ್ ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಬಿಡುಗಡೆ ಗೊಂಡಿತು. ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ…

Read More

ಕದ್ರಿ ಉದ್ಯಾನವನದಲ್ಲಿ ಸಸ್ಯೋತ್ಸವ – ರೈತ ಕುಡ್ಲ ಗೌರವ ಪ್ರಶಸ್ತಿ ಪ್ರಧಾನ

ಮಂಗಳೂರು:ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕದ್ರಿ ಉದ್ಯಾನವನ ದಲ್ಲಿ ಅಕ್ಟೋಬರ್ 17ರಿಂದ 19 ವರೆಗೆ “ಕದ್ರಿ ಸಸ್ಯೋತ್ಸವ -ರೈತ ಮೇಳ” ಕಾರ್ಯಕ್ರಮವುಬೆಳಗ್ಗೆ 8ರಿಂದ ರಾತ್ರಿ 8ವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷರಾದ ಭರತ್ ರಾಜ್ ಸೊರಕೆ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಅಕ್ಟೋಬರ್ 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಕಾರ್ಯಕ್ರಮ ಉದ್ಘಾಟಿಸಲ್ಲಿದ್ದು ದಕ್ಷಿಣ ಕನ್ನಡ ಜಿಲ್ಲಾ…

Read More

ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರ

ಮಂಗಳೂರು: ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರವು ಉಡುಪಿ , ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಚಿಕಿತ್ಸಕರ ಸಹಭಾಗಿತ್ವದಲ್ಲಿ ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರಾದ ಡಾ. ಬಸವರಾಜ್ ಕೆ ಮಾರ್ಗದರ್ಶನದಲ್ಲಿ ಸರ್ವ ಮಂಗಳ ಸಭಾಭವನ ಗರೋಡಿಯಲ್ಲಿ ನಡೆಯಲಿದೆ ಎಂದು ಆಶಾ ಜಗದೀಶ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲರ್ ಥೆರಪಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದಾಗಿ ಡಾ. ಬಸವರಾಜ್ ಕೆ…

Read More

ವಿಮಾನದಲ್ಲಿ ಗಾಂಜಾ ಸಾಗಿಸಿ ಸಿಕ್ಕಿಬಿದ್ದ ವ್ಯಕ್ತಿ!

ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಸಿಐಎಸ್ಎಫ್ ಜವಾನರು ವಶಕ್ಕೆ ಪಡೆದು ಘಟನೆ ಮಂಗಳೂರಲ್ಲಿ ನಡೆದಿದೆ. ಬಂಧಿತನನ್ನು ಶಂಕರ್ ನಾರಾಯಣ್ ಪೊದ್ದಾರ್ ಎಂದು ತಿಳಿದು ಬಂದಿದೆ. ಈತ ಸೋಮವಾರ ಸಂಜೆ 6:30ಕ್ಕೆ ಮುಂಬೈನಿಂದ ಮಂಗಳೂರಿಗೆ ಬಂದ ಇಂಡಿಗೋ‌ ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ‌ ಬಂದ ಹಿನ್ನೆಲೆ ವಿಮಾನ‌ ನಿಲ್ದಾಣ ಸಿಬ್ಬಂದಿ ಆಧರಿಸಿ ವಿಮಾನ‌ ನಿಲ್ದಾಣದ ಭದ್ರತಾ ಸಿಬ್ಬಂದಿ‌ ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.ಅದರಂತೆ ಸಂಜೆ ಇಂಡಿಗೋ ವಿಮಾನದಲ್ಲಿ ಬಂದು ಮಂಗಳೂರು ಅಂತರರಾಷ್ಟ್ರೀಯ…

Read More
error: Content is protected !!