Headlines

ಮಾದಕ ದ್ರವ್ಯ ಮಾರಾಟ ಜಾಲದ ಪತ್ತೆ ಹಾಗೂ ಆರೋಪಿಯ ಬಂಧನ

ಮಂಗಳೂರು: ನಗರದಲ್ಲಿ ಮಾದಕ ದ್ರವ್ಯ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 23ರಂದು ಸಂಜೆ ವಿಶ್ವಾಸಾರ್ಹ ಮೂಲಗಳಿಂದ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅರ್ಕುಳ ಜಂಕ್ಷನ್ ಬಳಿಯ ಯಶಸ್ವಿ ಹಾಲ್ ಎದುರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.ಬಂಧಿತನನ್ನು ಬಂಟ್ವಾಳ ತಾಲೂಕಿನ ಮೇರಾಮಜಲು ಗ್ರಾಮದ 36 ವರ್ಷದ ಸುಭಾಷ್ ಎಂದು ಗುರುತಿಸಲಾಗಿದೆ. ಆರೋಪಿಯ ಬಳಿಯಿಂದ ಸುಮಾರು ಒಂದು ಲಕ್ಷದ…

Read More

ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ದಿI .ಯಂ.ರಾಮಕೃಷ್ಣ ರಾವ್ ಅವರ 21ನೇ ಪುಣ್ಯತಿಥಿ ಸಂಸ್ಮರಣೆ

ಮೀಯಪದವು: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ , ಅಧ್ಯಾಪಕರಾಗಿ ಹಾಗೂ ಮೀಯಪದವು ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆನೆಸಿಕೊಂಡಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ದಿI . ಯಂ . ರಾಮಕೃಷ್ಣ ರಾವ್ ಅವರ 21ನೇ ಪುಣ್ಯತಿಥಿ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ನಡೆಯಲಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಮೀಯಪದವು ವಿದ್ಯಾವರ್ಧಕ ಪ್ರೌಢಶಾಲೆಯ ರಂಗ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು…

Read More

ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ನೇಮಕ: ಕಸಂ ವೆಂಕಟೇಶ್ವರಲು ಸಹ-ಉಸ್ತುವಾರಿ

ಬೆಂಗಳೂರು: ಉತ್ತರ ಪ್ರದೇಶದ ಹಿರಿಯ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ಅವರನ್ನು ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ನೇಮಿಸಲಾಗಿದೆ. ಜತೆಗೆ ಅವರಿಗೆ ಬಿಹಾರ ರಾಜ್ಯದ ಪ್ರಭಾರಿಯ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆಂಧ್ರ ಪ್ರದೇಶದ ಕಸಮ್ ವೆಂಕಟೇಶ್ವರಲು ಅವರನ್ನು ಕರ್ನಾಟಕ ಬಿಜೆಪಿ ಸಹ-ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳ ಬಿಜೆಪಿ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬುಧವಾರ ಪಟ್ಟಿ ಪ್ರಕಟಿಸಿದ್ದಾರೆ. ದಕ್ಷಿಣ ಭಾರತದ…

Read More

ಉಪಜಿಲ್ಲಾ ಸಮ್ಮೇಳನ‌ ಹಾಗೂ ದಸರಾ ನಾಡಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ( ರಿ) ಕಾಸರಗೋಡು ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಉಪಜಿಲ್ಲಾ ಸಮ್ಮೇಳನ ಮತ್ತು ದಸರಾ ನಾಡಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮುಳಿಂಜ ಶಾಲೆಯಲ್ಲಿ ಜರಗಿತು . ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಪ್ರಸ್ತುತ ಟ್ರಸ್ಟಿನ ಸದಸ್ಯರಾದ ಶ್ರೀ ಟಿ ಡಿ ಸದಾಶಿವ ರಾವ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ಕನ್ನಡ ಸಂಘಟನೆಯು ಸುದೀರ್ಘವಾದ ಹೋರಾಟದ…

Read More

ಮಂಜೇಶ್ವರ : ಉದ್ಯಾವರ ಪರಿಸರದಲ್ಲಿ ಸರಣಿ ಕಳ್ಳತನ: ಗಸ್ತು ಹೆಚ್ಚಿಸಲು ಸಾರ್ವಜನಿಕರ ಆಗ್ರಹ

​ಮಂಜೇಶ್ವರ: ಉದ್ಯಾವರ ಪರಿಸರದಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಸಹಸ್ರಾರು ಮೌಲ್ಯದ ಸೊತ್ತು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ. ​ಉದ್ಯಾವರದ ಬಿ.ಎಸ್. ನಗರದಲ್ಲಿರುವ ತುಕರಾಂ ಎಂಬುವವರ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಡ್ರಾವರ್‌ನಲ್ಲಿದ್ದ 3,000 ರೂಪಾಯಿ ನಗದು ಹಣ ಮತ್ತು ಬೆಲೆಬಾಳುವ ಸಿಗರೇಟ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ​ಇಷ್ಟಕ್ಕೇ ನಿಲ್ಲದ ಕಳ್ಳರ ಸರಣಿ ಕೃತ್ಯ, ಅದೇ ಪರಿಸರದಲ್ಲಿರುವ ಯುನೈಟೆಡ್ ಬಿ.ಎಸ್. ಕ್ಲಬ್, ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಸಾದಿಕ್ ಎಂಬುವವರ ರೇಡಿಯೇಟರ್ ರಿಪೇರಿ ಅಂಗಡಿ…

Read More

ಕಳೆದುಹೋದ ಮೂರು ಪವನ್ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಶಶಿ

​ ಮಂಜೇಶ್ವರ: ಕಳೆದುಹೋದ ಮೂರು ಪವನ್ ತೂಕದ ಚಿನ್ನದ ಸರವನ್ನು ಪತ್ತೆಹಚ್ಚಿ, ಅದನ್ನು ಮೂಲ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಶಶಿ ಎಂಬುವವರು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ​ ಹೊಸಂಗಡಿ ಬಳಿ ಆರಿಮಲ ನಿವಾಸಿಯೊಬ್ಬರ 3 ಪವನ್ ಚಿನ್ನದ ಸರ ಕಳೆದುಹೋಗಿತ್ತು. ಈ ಸರ ಶಶಿ ಅವರಿಗೆ ಸಿಕ್ಕಿದ್ದು, ಯಾವುದೇ ಸ್ವಾರ್ಥವಿಲ್ಲದೆ ತಕ್ಷಣವೇ ಮಾಲೀಕರನ್ನು ಪತ್ತೆಹಚ್ಚಿ ಹಿಂತಿರುಗಿಸಲು ಮುಂದಾಗಿದ್ದಾರೆ. ​ಸಮದ್ ಅರಿಮಲ ಸಾನಿಧಿ ಕಡಂಬಾರ್ ಅವರ ಸಮ್ಮುಖದಲ್ಲಿ ಈ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು….

Read More

ಬೈಕ್‌ನಲ್ಲಿ ಬಂದು ಮಹಿಳೆಯ ಸರ ಕಳವು ಮಾಡಿದ್ದ ಪ್ರಕರಣದ ಎರಡನೇ ಆರೋಪಿ ಬಂಧನ

​ಮಂಜೇಶ್ವರ: ಬೈಕ್‌ನಲ್ಲಿ ಬಂದು ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಳಿವಿನಲ್ಲಿದ್ದ ಎರಡನೇ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ​ಕುಂಬಳೆ ಬಂಬ್ರಾಣದ ಇಂದು ಗುರಿ ನಿವಾಸಿ ಚಂದ್ರಹಾಸ್ ಅವರ ಪುತ್ರ ಸುಧೀಶ್ ಬಂಧಿತ ಆರೋಪಿ. ​ಕಳೆದ ಜೂನ್ 22ರಂದು ಸಂಜೆ ಮಂಜೇಶ್ವರದ ಹೊಸಂಗಡಿ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ಮೊದಲನೇ ಆರೋಪಿ ಕುಂಬಳೆ ಬಂಬ್ರಾಣ ನಿವಾಸಿ ಸಂದೀಪ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಸುಧೀಶ್‌ನನ್ನು ಸೆಪ್ಟೆಂಬರ್…

Read More

ದೆಹಲಿ ಮೂಲದ ಅಂತರರಾಷ್ಟ್ರೀಯ ಎಂಡಿಎಂಎ ಜಾಲ ಭೇದಿಸಿದ ಪೊಲೀಸರು

​ಕಾಸರಗೋಡು: ದೆಹಲಿಯಲ್ಲಿ ಎಂಡಿಎಂಎ ತಯಾರಿಸಿ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೂರೈಸುತ್ತಿದ್ದ ಅಂತರರಾಷ್ಟ್ರೀಯ ಮಾದಕದ್ರವ್ಯ ಜಾಲವನ್ನು ಕಣ್ಣೂರು ಸಿಟಿ ಪೊಲೀಸರು ಭೇದಿಸಿದ್ದಾರೆ. ನೈಜೀರಿಯಾದ ಬೆನೆಲೊ ಲಿಲಿಯನ್ ಹಾಗೂ ಕ್ಯಾಮರೂನ್‌ನ ಫಿಲೋಮೆನ ಚೌನ್‌ಸೆಲಿನ್ ಬಂಧಿತ ವಿದೇಶಿ ಮಹಿಳೆಯರು. ​ನ್ಯೂಮಾಹಿಯಲ್ಲಿ 0.6 ಗ್ರಾಂ ಎಂಡಿಎಂಎ ಜೊತೆ ಸಿಕ್ಕಿಬಿದ್ದ ಆರೋಪಿಯ ಸುಳಿವು ಆಧರಿಸಿ, ಹಂತ-ಹಂತವಾಗಿ ತನಿಖೆ ನಡೆಸಿದ ಪೊಲೀಸರು ಹಲವು ಮಧ್ಯವರ್ತಿಗಳನ್ನು ಬಂಧಿಸಿದ್ದರು. ಈ ವೇಳೆ ದೆಹಲಿ ಮೂಲದ ಉತ್ಪಾದನಾ ಜಾಲದ ಮಾಹಿತಿ ಲಭಿಸಿತ್ತು. ತಲಶ್ಶೇರಿ ಎಎಸ್‌ಪಿ ಡಾ. ಎಂ. ನಂದಗೋಪಾಲ್…

Read More

ಪೊಯಿನಾಚಿಯಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿ ನೇಣಿಗೆ ಶರಣು

ಕಾಸರಗೋಡು: ಯೂತ್ ಕಾಂಗ್ರೆಸ್ ಉದುಮ ವಿಧಾನಸಭಾ ಮಂಡಲ ಕಾರ್ಯದರ್ಶಿ ಹರಿಕೃಷ್ಣ (32) ಪೊಯಿನಾಚಿಯಲ್ಲಿರುವ ತಮ್ಮ ಸ್ವಂತ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ​ಶಿಕ್ಷಣ ರಿಕ್ರೂಟಿಂಗ್ ಏಜೆನ್ಸಿ ನಡೆಸುತ್ತಿದ್ದ ಇವರು ಮೊನ್ನೆ ಸಂಜೆಯಿಂದ ನಾಪತ್ತೆಯಾಗಿದ್ದರು. ಬೆಳಿಗ್ಗೆಯಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಮೇಲ್ಪರಂಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾಗಲೇ, ಹರಿಕೃಷ್ಣ ಕಚೇರಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ​ವಿಷಯ ತಿಳಿಯುತ್ತಿದ್ದಂತೆ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲು…

Read More

ಆದೂರು ಮಣಿಯೂರಿನಲ್ಲಿ ಯುವಕನ ಶಂಕಾಸ್ಪದ ಸಾವು

​ಕಾಸರಗೋಡು: ಆದೂರು ಮಣಿಯೂರು ಚೆನ್ನಯ್ಯಮೂಲೆಯಲ್ಲಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ಹಳೆಯ ಮನೆಯೊಂದರಲ್ಲಿ ಶಂಕಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ​ಸ್ಥಳೀಯ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಶೋಭಿತ್ (26) ಸಾವನ್ನಪ್ಪಿದ ದುರ್ದೈವಿ. ಬೆಳಿಗ್ಗೆ ತಂದೆಯೊಡನೆ ಕೆಲಸಕ್ಕೆ ತೆರಳಿದ್ದ ಈತ, ಬಹಳ ಹೊತ್ತಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಈ ಹಿಂದೆ ಇವರು ವಾಸಿಸುತ್ತಿದ್ದ ಹಳೆಯ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಮುಳ್ಳೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜೀವ ಉಳಿಸಲಾಗಲಿಲ್ಲ. ​ಆತ್ಮಹತ್ಯೆಗೆ…

Read More
error: Content is protected !!