ಮಂಜೇಶ್ವರ: ಬೈಕ್ನಲ್ಲಿ ಬಂದು ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಳಿವಿನಲ್ಲಿದ್ದ ಎರಡನೇ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆ ಬಂಬ್ರಾಣದ ಇಂದು ಗುರಿ ನಿವಾಸಿ ಚಂದ್ರಹಾಸ್ ಅವರ ಪುತ್ರ ಸುಧೀಶ್ ಬಂಧಿತ ಆರೋಪಿ.
ಕಳೆದ ಜೂನ್ 22ರಂದು ಸಂಜೆ ಮಂಜೇಶ್ವರದ ಹೊಸಂಗಡಿ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ಮೊದಲನೇ ಆರೋಪಿ ಕುಂಬಳೆ ಬಂಬ್ರಾಣ ನಿವಾಸಿ ಸಂದೀಪ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಸುಧೀಶ್ನನ್ನು ಸೆಪ್ಟೆಂಬರ್ 23 ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ವಿಷ್ಣುಪ್ರಸಾದ್ ನೇತೃತ್ವದಲ್ಲಿ ಎಸ್ಐ ಶಬರಿ ಕೃಷ್ಣನ್, ಎಎಸ್ಐ ಅಜಿತ್ ಹಾಗೂ ಸಿಪಿಒ ಬಿನೀಶ್ ಅವರಿದ್ದ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿ ಕಾಸರಗೋಡು ಜಿಲ್ಲಾ ಜೈಲಿಗೆ ರವಾನಿಸಲಾಗಿದೆ.

