ಮಂಜೇಶ್ವರ: ಅರಿಕ್ಕಾಡಿ ಟೋಲ್ ಗೇಟ್‌ನಲ್ಲಿ ಪೊಲೀಸ್ ದೌರ್ಜನ್ಯ ಆರೋಪ—ಡಿಜಿಪಿ ತನಿಖೆಗೆ ಆದೇಶ

ಮಂಜೇಶ್ವರ: ಅರಿಕ್ಕಾಡಿ ಟೋಲ್ ಗೇಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸುತಿದ್ದಂತೆ ಟೋಲ್ ಪ್ಲಾಜಾದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಆರೋಪಗಳು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಕುಳತ್ತೂರು ಜೈಸಿಂಗ್ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ, ರಾಜ್ಯ ಡಿಜಿಪಿ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಮಾನವ ಹಕ್ಕು ಆಯೋಗವು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.ಟೋಲ್ ಪ್ಲಾಜಾದಲ್ಲಿ ಬೋವಿಕಾನ ಆಲೂರು ನಿವಾಸಿಯೊಬ್ಬರನ್ನು ಪೊಲೀಸರು ಕಾರಿನಿಂದ ಬಲವಂತವಾಗಿ ಎಳೆದೊಯ್ಯುವ…

Read More

ತ್ರಾಸಿ ರಾಜು ದೇವಾಡಿಗ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ: ಮಂಜುನಾಥ ಭಂಡಾರಿ

ಕುಂದಾಪುರ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತ್ರಾಸಿ ರಾಜು ದೇವಾಡಿಗ ಅವರು ನಿಧನರಾಗಿದ್ದು ಇದರಿಂದ ಪಕ್ಷ ಮತ್ತು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಮಂಜುನಾಥ ಭಂಡಾರಿ ಅವರು ಕಂಬನಿ ಮಿಡಿದಿದ್ದಾರೆ. ತ್ರಾಸಿ ರಾಜು ದೇವಾಡಿಗ ಅವರ ಜನಸೇವೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರ ಅಗ್ರಗಣ್ಯ ಸಾಧನೆ ಗಮನಾರ್ಹವಾಗಿದೆ. ಆಸ್ಕರ್ ಫೆರ್ನಾಂಡಿಸ್ ಅವರು ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅವರೊಂದಿಗೆ ಪಕ್ಷದ ಕೆಲಸ ಮಾಡಿದ ನೆನಪು…

Read More

ಮೂಲ್ಕಿಯ ಯುವ ರಾಜಕೀಯ-ಸಾಮಾಜಿಕ ನೇತಾರ ಅಶೋಕ್ ಪೂಜಾರ್ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಆಯ್ಕೆ

ಮಂಗಳೂರು : ಮೂಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷ ಯುವ ನಾಯಕರಾಗಿರುವ ಅಶೋಕ್ ಪೂಜಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಂಘಟನೆಯನ್ನು ಬಲಗೊಳಿಸುವ ಹಿನ್ನಲೆಯಲ್ಲಿ ಹಾಗೂ ಸಂಘಟನೆಯನ್ನು ರಾಜ್ಯದಾದ್ಯಂತ ಸಕ್ರಿಯಗೊಳಿಸಲು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಟ್ ರವರ ನಿರ್ದೇಶನದ ಮೇರೆಗೆ ಹಾಗೂ ಅಖಿಲ ಭಾರತ ಯುವ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ…

Read More

ಮಂಗಳೂರು: ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಅತ್ತೆ ಪುಷ್ಪಾವತಿ ಕಾರಂದೂರು ನಿಧನ

ಮಂಗಳೂರು: ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ಅತ್ತೆ (ಪತ್ನಿಯ ತಾಯಿ) ಪುಷ್ಪಾವತಿ ಕಾರಂದೂರು (96) ವಯೋಸಹಜ ಅಸೌಖ್ಯದಿಂದ ಬುಧವಾರ (ಫೆ.4) ಮುಂಜಾನೆ ನಿಧನರಾದರು. ಪುತ್ರರಾದ ವಕೀಲ ರಮಾನಾಥ ಕಾರಂದೂರು, ಡಾ.ದೇವದಾಸ್ ಕಾರಂದೂರು, ಉದ್ಯಮಿ ಸತೀಶ್ ಕಾರಂದೂರು, ಪುತ್ರಿಯರಾದ ಮಾಲತಿ ಜೆ. ಪೂಜಾರಿ, ಜಾನಕಿ ವಿಶ್ವನಾಥ್, ವಿಜಯ ಪ್ರಕಾಶ್ (ಶೀಲಾ), ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಫೆ.4ರಂದು ಸಂಜೆ 5.30ಕ್ಕೆ ಮಚ್ಚಿನ ಕಾರಂದೂರು ಮನೆಯಲ್ಲಿ ನಡೆಯಲಿದೆ.

Read More

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

ಹಳೆಯಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಕೇಂದ್ರ ಮಹಿಳಾ ಫಟಕದ ನವಮ ವಾರ್ಷಿಕೋತ್ಸವ ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್ ವಹಿಸಿದ್ದರು.ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಗುತ್ತು ಸತೀಶ್ ಶೆಟ್ಟಿ ಅವರು ಅಸಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್…

Read More

ಉಡುಪಿ: ನಡುರಸ್ತೆಯಲ್ಲಿ ವಿದ್ಯಾರ್ಥಿಗಳ ಪುಂಡಾಟ—ಹೆಜಮಾಡಿ ಟೋಲ್ ಗೇಟ್ ಬಳಿ ಪಟಾಕಿ ಸಿಡಿಸಿ ಹುಚ್ಚಾಟ

ಉಡುಪಿ: ನಡುರಸ್ತೆಯಲ್ಲೇ ವಿದ್ಯಾರ್ಥಿಗಳು ಕುಣಿದು, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ. ಕೇರಳದಿಂದ ಉಡುಪಿ ಕಡೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಆಗಮಿಸಿದ್ದರು. ಈ ವೇಳೆ ಟೋಲ್ ಗೇಟ್ ಬಳಿ ಬಸ್‌ಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳು ರಸ್ತೆಯ ಮಧ್ಯದಲ್ಲೇ ಕುಣಿದು, ಪಟಾಕಿ ಸಿಡಿಸಿ ಹುಚ್ಚಾಟ ನಡೆಸಿದರು. ಈ ಕಾರಣದಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದುದಾಗಿ ತಿಳಿದು ಬಂದಿದೆ. ವಿದ್ಯಾರ್ಥಿಗಳ ಈ ಪುಂಡಾಟದ ದೃಶ್ಯಗಳು…

Read More

ಮಂಗಳೂರು: ರಾಜಕೀಯದಲ್ಲಿ ‘ಗ್ಲಾಮರ್’ ಹೇಳಿಕೆ—ಮಾಜಿ ಸಚಿವೆ ಮೋಟಮ್ಮ ಮಾತಿಗೆ ವಿವಾದ

ಮಂಗಳೂರು : ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರ್ಬೇಕು ಅನ್ನೊದು ಹೆಚ್ಚಾಗಿದೆ ಎಂಬ ಮಾಜಿ ಸಚಿವೆ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಹೇಳಿಕೆ ವಿವಾದಕ್ಕೆ ಹಾದಿ ತೆರೆದಿದೆ. ಮಹಿಳಾ ವೈಭವ 2026ರ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ ಆಗಿರುವ ಮೋಟಮ್ಮ ಭಾಷಣ ಮಾಡಿದ್ದರು.ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಯೋಜನೆಯಾದ ಕಾರ್ಯಕ್ರಮದಲ್ಲಿ ರಾಜಕೀಯದಲ್ಲಿ ಮಹಿಳೆಯರು ಚುರುಕಾಗಿರಬೇಕು.ಅದನ್ನು ಬಿಟ್ಟು, ಹೆಣ್ಣುಮಕ್ಕಳು ನಾವು, ಗ್ಲಾಮರಸ್ ಆಗಿ ಇರ್ಬೇಕು. ಎಂಬುದು ಸರಿಯಲ್ಲ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದರು. ‘ರಾಜಕೀಯ ಮುಖಂಡರು ನಮ್ಮನ್ನು ಗುರುತಿಸಬೇಕು.’‘ಅವರಿಗೆ ನಾವು…

Read More

ಕೃಷ್ಣ ನಗರದ ಸಾರ್ವಜನಿಕ ಮೈದಾನ ರಕ್ಷಣೆಗಾಗಿ ಫೆ 06 ರಂದು ಬೃಹತ್‌ ಪ್ರತಿಭಟನೆ : ಹೋರಾಟ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಸಾಲಿಯಾನ್

ಮಂಗಳೂರು: ಮಂಗಳೂರು ತಾಲೂಕು, ಮರಕಡ ಗ್ರಾಮದ, ಕೃಷ್ಣ ನಗರದಲ್ಲಿ 30 ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಾರ್ವಜನಿಕ ಮೈದಾನದ ಜಾಗವು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಸರಕಾರ ಬಿಟ್ಟುಕೊಟ್ಟಿದ್ದ ಜಾಗವನ್ನು ಸಾರ್ವಜನಿಕ ಮೈದಾನಕ್ಕೆ ಕಾದಿರಿಸುವಂತೆ ಎರಡು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಯಾವುದೇ ರೀತಿಯ ಉತ್ತರ ಬಂದಿರುವುದಿಲ್ಲ ಹೀಗಾಗಿ ಸಾರ್ವಜನಿಕ ಮೈದಾನದ ರಕ್ಷಣೆಗಾಗಿ ಊರಿನ ಜನರು ಪಕ್ಷಭೇದ ಮರೆತು ಫೆ 06 ರಂದು ಸಂಜೆ 3.00 ಗಂಟೆಗೆ ಸರಿಯಾಗಿ ಅದೇ ಸಾರ್ವಜನಿಕ ಮೈದಾನದಲ್ಲಿ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಸಾರ್ವಜನಿಕ…

Read More

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ನ್ಯಾಯಾಲಯದ ಪ್ರಕರಣವೊಂದರಲ್ಲಿ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಕ್ಕಚೇರಿ ಉಳ್ಳಾಲ ನಿವಾಸಿ ಮಹಮ್ಮದ್‌ ಸಂಶೀರ್‌ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಆರೋಪಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಉಳ್ಳಾಲದ ಸಮೀಪ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 14 ವರ್ಷಗಳ ಬಳಿಕ ಆರೋಪಿಯ ಬಂಧನವಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Read More

ಮಂಗಳೂರು: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚನೆ ಆರೋಪಿ ಕಂಕನಾಡಿ ಪೊಲೀಸರ ಬಲೆಗೆ

ಮಂಗಳೂರು: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕೇರಳದ ಕೊಲ್ಲಂ ನಿವಾಸಿ ಜಯಚಂದ್ರ (66) ಎಂದು ಗುರುತಿಸಲಾಗಿದೆ. ಆರೋಪಿ ಜಯಚಂದ್ರ ವಿರುದ್ಧ 2019ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆತ ನಾಪತ್ತೆಯಾಗಿದ್ದನು. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು. ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎನ್ನುವ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ…

Read More
error: Content is protected !!