81 ದಿನಗಳ ಹೋರಾಟಕ್ಕೆ ಜಯ: ನಾಲ್ವರು ಮಹಿಳಾ ಕಾರ್ಮಿಕರ ಮರುನೇಮಕಕ್ಕೆ HPCL ಒಪ್ಪಿಗೆ

ಸುರತ್ಕಲ್:ಸುರತ್ಕಲ್‌ನ HPCL ಘಟಕದಲ್ಲಿ ಉದ್ಯೋಗ ಕಳೆದುಕೊಂಡಿದ್ದ ನಾಲ್ವರು ಮಹಿಳಾ ಗುತ್ತಿಗೆ ಕಾರ್ಮಿಕರ 81 ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್ ಹಾಗೂ ಸುವರ್ಣ ಪಾಟೀಲ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು HPCL ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಮಂಗಳೂರು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 2ರ ಮುಂದಿನ ಮಾತುಕತೆಗೂ ಮುನ್ನ ನಾಲ್ವರು ಮಹಿಳೆಯರ ಮರುನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ…

Read More

ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ಲಿಟ್ಲ್ ಕೈಟ್ಸ್ ಘಟಕದ ಉದ್ಘಾಟನೆ

ಕಳಿಯೂರು: ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ಲಿಟ್ಲ್ ಕೈಟ್ಸ್ ಘಟಕದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 17ರಂದು ಮಂಗಳವಾರ ನಡೆಯಿತು. ಮೀಂಜ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ ಶ್ರೀಮತಿ ಸೌಮ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ, ಸೃಜನಶೀಲತೆ ಹಾಗೂ ಡಿಜಿಟಲ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಇಂತಹ ಘಟಕಗಳ ಮಹತ್ವವನ್ನು ಅವರು ತಿಳಿಸಿದರು. ಶಾಲೆಯ ಲಿಟಲ್ ಕೈಟ್ ಮಾಸ್ಟರ್ ಅಧ್ಯಾಪಕರಾದ ಶ್ರೀ ರಾಜೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವo ಫಾ…

Read More

ಮಂಜೇಶ್ವರ ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳಿಂದ ಸಂಭ್ರಮದ ಶೈಕ್ಷಣಿಕ ಪ್ರವಾಸ

​ಮಂಜೇಶ್ವರ: ಮಂಜೇಶ್ವರದ ಪೀಸ್ ಕ್ರಿಯೇಟಿವ್ ಶಾಲೆಯ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಪ್ರವಾಸಿ ತಾಣಗಳಿಗೆ ಅತ್ಯಂತ ಸಡಗರ ಹಾಗೂ ಸಂಭ್ರಮದ ಶೈಕ್ಷಣಿಕ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ತರಗತಿಗಳ ವಯೋಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಕೃತಿಯ ಮಡಿಲಿಗೆ ಕರೆದೊಯ್ಯಲಾಯಿತು. ಶಾಲೆಯ ಪುಟಾಣಿ ಮಕ್ಕಳಾದ ಕೆ.ಜಿ ವಿಭಾಗದಿಂದ 3ನೇ ತರಗತಿ ತನಕದ ವಿದ್ಯಾರ್ಥಿಗಳನ್ನು ಕಾಸರಗೋಡು ಜಿಲ್ಲೆಯ ತ್ರಿಕರಿಪ್ಪುರದಲ್ಲಿರುವ ಆಕರ್ಷಕ ‘ವಿ-ಲ್ಯಾಂಡ್’ ಮನರಂಜನಾ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಬಣ್ಣಬಣ್ಣದ ಆಟಿಕೆಗಳು, ಜಲಕ್ರೀಡೆಗಳು ಹಾಗೂ ಮಕ್ಕಳ…

Read More

ರೈಲುಗಳ ಸಮಯಪಾಲನೆಯಲ್ಲಿ ಭಾರೀ ಕುಸಿತ: ಮಂಗಳೂರು, ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳ ಸಮಯನಿಷ್ಠೆ ಶೇ. 25ಕ್ಕಿಂತ ಕಡಿಮೆ!

ಮುಂಬೈ: ದೇಶದಲ್ಲಿ ರೈಲುಗಳ ಸಮಯಪಾಲನೆ ಗಣನೀಯವಾಗಿ ಕುಸಿದಿರುವುದನ್ನು ಭಾರತೀಯ ರೈಲ್ವೆ ಒಪ್ಪಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಮಯನಿಷ್ಠೆ ಶೇ. 90ರಿಂದ ಶೇ. 77ಕ್ಕೆ ಇಳಿದಿದ್ದರೆ, ಪ್ಯಾಸೆಂಜರ್ ರೈಲುಗಳ ಸಮಯಪಾಲನೆ ಶೇ. 88ರಿಂದ ಶೇ. 67ಕ್ಕೆ ಕುಸಿದಿದೆ. ರೈಲುಗಳು ನಿರಂತರವಾಗಿ ವಿಳಂಬವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (RTI) ರೈಲ್ವೆ ಇಲಾಖೆಯಿಂದ ಮಾಹಿತಿ ಕೋರಲಾಗಿತ್ತು. ಇದಕ್ಕೆ ಉತ್ತರಿಸಿರುವ ರೈಲ್ವೆ ಇಲಾಖೆ, ವರ್ಷದಿಂದ ವರ್ಷಕ್ಕೆ ರೈಲುಗಳ ಸಮಯಪಾಲನೆ…

Read More

ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಲು ಪಾಸ್‌ಪೋರ್ಟ್ ಅಡ್ಡಿ; ಹೊಸ ಪಾಸ್‌ಪೋರ್ಟ್ ನೀಡಲು ನಿರಾಕರಿಸಿದ ಬಾಂಗ್ಲಾದೇಶ

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಾಯ್ನಾಡಿಗೆ ಮರಳುವ ಪ್ರಯತ್ನಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ. ಅವರಿಗೆ ಹೊಸ ಪಾಸ್‌ಪೋರ್ಟ್ ನೀಡಲು ಬಾಂಗ್ಲಾದೇಶ ನಿರಾಕರಿಸಿದೆ. ಶೇಖ್ ಹಸೀನಾ ಅವರ ವಾಪಸಾತಿಗೆ ತಡೆ ಉಂಟುಮಾಡುವ ಪ್ರಯತ್ನದ ಭಾಗವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ಪಡೆಯಲು ಶೇಖ್ ಹಸೀನಾ ಅವರ ವಕೀಲರು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೆಲವು ಲೋಪಗಳಿವೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು…

Read More

ಆಡಳಿತ ಹೇಗೆ ಇರಬಾರದು ಎಂಬುದಕ್ಕೆ ಯುಡಿಎಫ್ ಸರ್ಕಾರವೇ ಉದಾಹರಣೆ: ಪಿಣರಾಯಿ ವಿಜಯನ್ ವಾಗ್ದಾಳಿ

ತಿರುವನಂತಪುರಂ: ಒಂದು ಸರ್ಕಾರ ಹೇಗೆ ಕಾರ್ಯನಿರ್ವಹಿಸಬಾರದು ಎಂಬುದಕ್ಕೆ ಯುಡಿಎಫ್ ಸರ್ಕಾರವೇ ಉತ್ತಮ ಉದಾಹರಣೆ ಎಂದು ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.ಸಚಿವ ಸಂಪುಟದಲ್ಲಿ ಪರಸ್ಪರ ನಂಬಿಕೆ ಕಳೆದುಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಅಧಿಕಾರಿಗಳನ್ನು ಶತ್ರುಗಳಂತೆ ಸರ್ಕಾರ ಪರಿಗಣಿಸುತ್ತಿದೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಬಾರದು ಎಂದು ಅವರು ಹೇಳಿದ್ದಾರೆ. ಸರ್ಕಾರದ ಪರವಾಗಿ ಕೆಲಸ ನಿರ್ವಹಿಸುವವರೇ ಸರ್ಕಾರಿ ನೌಕರರು. ಅವರು ಸರ್ಕಾರದ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿ ಸರ್ಕಾರವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ…

Read More

ಮಂಜೇಶ್ವರ : ಆರೋಗ್ಯವಂತ ಮಹಿಳೆ, ಸದೃಢ ಸಮಾಜ: ಗಿಳಿವಿಂಡುವಿನಲ್ಲಿ ಎರಡು ದಿನಗಳ ಮಹಿಳಾ ಆರೋಗ್ಯ ಶಿಬಿರ ನ.23 ಹಾಗೂ 24 ರಂದು

​ ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಹಾಗೂ ಬಿ.ಎಫ್.ಹೆಚ್.ಸಿ. ಮಂಜೇಶ್ವರ ವತಿಯಿಂದ ಹದಿನಾಲ್ಕನೇ ಪಂಚವಾರ್ಷಿಕ ಯೋಜನೆ (2022–2027) ಮತ್ತು 2026–27ನೇ ವಾರ್ಷಿಕ ಯೋಜನೆಯ ಅಡಿಯಲ್ಲಿ ವಿಶೇಷ ಮಹಿಳಾ ರೋಗನಿರ್ಣಯ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಬಶೀರ್ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್ ಅವರು ಉದ್ಘಾಟಿಸಲಿದ್ದಾರೆ.​ಶಿಬಿರವು 2026 ನವೆಂಬರ್ 23 ಮತ್ತು 24 (ಸೋಮವಾರ ಮತ್ತು ಮಂಗಳವಾರ) ಬೆಳಿಗ್ಗೆ 9:30ರಿಂದ ಮಂಜೇಶ್ವರದ ಗಿಳಿವಿಂಡುವಿನಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ…

Read More

ಮಂಜೇಶ್ವರದಲ್ಲಿ ಮುಂದುವರಿದ ಕಳ್ಳರ ಹಾವಳಿ: ದರ್ಗಾ ಶರೀಫ್ ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ದೋಚಿದ ದುಷ್ಕರ್ಮಿಗಳು

​ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕಳ್ಳರು ಧಾರ್ಮಿಕ ಕೇಂದ್ರವೊಂದಕ್ಕೆ ಕನ್ನ ಹಾಕಿದ್ದಾರೆ. ವಾಮಂಜೂರು ಅಬಕಾರಿ ತಪಾಸಣಾ ಕೇಂದ್ರದ ಹಿಂಭಾಗದಲ್ಲಿರುವ ಕಡವತ್ ದರ್ಗಾ ಶರೀಫ್ ಮಸೀದಿಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಎಂದಿನಂತೆ ಮಸೀದಿಗೆ ಬೀಗ ಹಾಕಿ ತೆರಳಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಬಂದು ನೋಡಿದಾಗ ಮಸೀದಿಯ ಮುಂಭಾಗದ ಬಾಗಿಲಿನ…

Read More

‎ಅಂದಿನ ಆಸೆಗಳು… ಇಂದಿನ ಜವಾಬ್ದಾರಿಗಳು… ನಾಳೆಯ ಕನಸುಗಳು…

‎ಚಿಕ್ಕವರಿದ್ದಾಗ ಬಣ್ಣ ಬಣ್ಣದ ಪೆನ್ಸಿಲ್‌ಗಳಿಗಾಗಿ ಹಾತೊರೆದ ದಿನಗಳೆಷ್ಟೋ…!‎ಅಂದು ಕೇಳಿದ ತಕ್ಷಣ ತೆಗೆದುಕೊಡುವವರು ತುಂಬಾ ಕಡಿಮೆ. ಕೇಳಿ ಪಡೆದುಕೊಳ್ಳುವುದಕ್ಕಿಂತ ಬಡತನವೇ ಬೆನ್ನಟ್ಟುತ್ತಿದ್ದ ದಿನಗಳವು. ‎‎ಅಂಗಡಿಗೆ ಹೋಗಬೇಕೆಂದರೆ ಅಜ್ಜಿಯ ಕೈಯಿಂದ ಒಂದೆರಡು ರೂಪಾಯಿಗಳನ್ನು ಲಪಟಾಯಿಸಿ, ಅವುಗಳನ್ನು ನಿಧಾನವಾಗಿ ಕೂಡಿಡುತ್ತಿದ್ದೆವು. ಡಬ್ಬಿ ತುಂಬಿದಾಗ ಆ ನಾಣ್ಯಗಳನ್ನೆಲ್ಲ ಎಣಿಸಿ, ಶಾಲೆಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಸಿಗುತ್ತಿದ್ದ ಸಂಭ್ರಮವೇ ಬೇರೆ! ‎‎ಆದರೆ ಇಂದು…‎ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ. ಕೈಯಲ್ಲಿ ಒಂದಿಷ್ಟು ಹಣವೂ ಇದೆ. ಮನಸ್ಸಿಗೆ ಬೇಕಾದಷ್ಟು ಪುಸ್ತಕ, ಪೆನ್ನು, ಬಣ್ಣದ ಪೆನ್ಸಿಲ್‌ಗಳನ್ನು ಕೊಂಡುಕೊಳ್ಳುವ…

Read More

ವಿದ್ಯಾರ್ಥಿನಿ ಅಪಹರಣ ಪ್ರಕರಣ ಗಂಭೀರವಾಗಿ ಪರಿಗಣಿಸಿ: ವೇದವ್ಯಾಸ ಕಾಮತ್

ಹಾಡಹಗಲೇ ಮಂಗಳೂರಿನ ಕಾಲೇಜು ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿರುವುದು ಆಘಾತಕಾರಿ ಮಾತ್ರವಲ್ಲ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಪ್ರಶ್ನೆ ಹುಟ್ಟು ಹಾಕಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಕಳವಳ ವ್ಯಕ್ತಪಡಿಸಿದರು. ಅಪಹರಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳು ಸಾರ್ವಜನಿಕವಾಗಿ ಯುವತಿಯ ಮೇಲೆ ಮೃಗೀಯ ವರ್ತನೆ ತೋರಿ ಕಾನೂನಿನ ಭಯವೇ ಇಲ್ಲದಂತೆ ವರ್ತಿಸಿದ್ದಾರೆ. ಪೋಷಕರೇ ಆಗಿರಲಿ, ಯಾರೇ ಆಗಿರಲಿ, ವಯಸ್ಕ ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುವುದನ್ನು ಸುಪ್ರೀಂ…

Read More
error: Content is protected !!