ಕಡಬದಲ್ಲಿ ಅಕ್ರಮ ಕೋಳಿ ಅಂಕ: ಪ್ರಕರಣ ದಾಖಲು

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಗಾನದ ಕೊಟ್ಯದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಕುರಿತು ಬಂದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ. ದಾಳಿಯ ವೇಳೆ ಕೆಲವರು ಕೋಳಿಗಳ ಕಾಲಿಗೆ ಬಾಳ್ ಕತ್ತಿ ಕಟ್ಟಿ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆಗಮಿಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉಮೇಶಗೌಡ (ಬಂಟ್ರ ಗ್ರಾಮ) ಹಾಗೂ ವಿನಯ ಸಿ (ಐತ್ತೂರು ಗ್ರಾಮ) ಸೇರಿದಂತೆ…

Read More

ಕಾಸರಗೋಡು ಪೇಟೆಯಲ್ಲಿ ಮುಷ್ಕರ ಬೆಂಬಲಿಸಿ ಎಡ ಕಾರ್ಮಿಕರ ಮೆರವಣಿಗೆ; ಸಾರ್ವಜನಿಕ ಸಭೆ

ಕಾಸರಗೋಡು : ಪೇಟೆಯಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಎಡ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಎಡಪಂಥೀಯ ಕಾರ್ಮಿಕರು ಮತ್ತು ಕಾರ್ಯಕರ್ತರು ಪೇಟೆಯಲ್ಲಿ ಮೆರವಣಿಗೆ ನಡೆಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲ್ ಶಾಸಕ, ಸಿಐಟಿಯು ನಾಯಕರಾದ ಟಿ.ಕೆ. ರಾಜನ್, ಮಣಿ ಮೋಹನನ್, ಗಿರಿ ಕೃಷ್ಣನ್ ಮೊದಲಾದವರು ಭಾಗವಹಿಸಿದ್ದರು.ಹೊಸ ಬಸ್‌ ನಿಲ್ದಾಣದಿಂದ ಪ್ರಾರಂಭವಾದ ಮೆರವಣಿಗೆ ಹಳೆಯ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು. ಈ ಸಂದರ್ಭ ಸಾರ್ವಜನಿಕ ಸಭೆಯೂ ನಡೆಯಿತು.

Read More

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ 12.640 ಕೆಜಿ ಗಾಂಜಾ ವಶ; ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕ ಬಂಧನ

ಮಂಜೇಶ್ವರ: ವಾಹನ ತಪಾಸಣೆ ವೇಳೆ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ 12.640 ಕೆ.ಜಿ ಗಾಂಜಾವನ್ನು ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರುದಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಪ್ರಯಾಣಿಕನಾಗಿದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಪ್ರಕಾಶ್ ಡೋಂಗ್ರಾ (37) ಎಂಬಾತನ ಬಳಿಯಿಂದ ಗಾಂಜಾ ಪತ್ತೆಯಾಗಿದೆ. 13 ಪ್ಯಾಕೆಟ್‌ಗಳಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸಲಾಗುತ್ತಿದ್ದ ಗಾಂಜಾವನ್ನು ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿಲ್ ಕುಮಾರ್ ಹಾಗೂ ಅವರ ತಂಡ ಪ್ರಕರಣ ದಾಖಲಿಸಿಕೊಂಡಿದೆ.ತಪಾಸಣೆ…

Read More

ತೂಮಿನಾಡು ಹಿಲ್‌ಟಾಪ್ ದ್ವಿಕೋಲೆ ಪ್ರಕರಣ – ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರ್

ಮಂಜೇಶ್ವರ: ಮಂಜೇಶ್ವರ ತೂಮಿನಾಡು ಹಿಲ್‌ಟಾಪ್‌ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಸಂಭವಿಸಿದ ದ್ವಿಕೋಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಉಮ್ಮರ್‌ನನ್ನು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕರೆತಂದು ಮಹಜರ್ ನಡೆಸಿ ಸಾಕ್ಷ್ಯ ಸಂಗ್ರಹಿಸಿದರು. ತನಿಖೆಯ ಭಾಗವಾಗಿ ಆರೋಪಿಯಿಂದ ಘಟನೆಯ ಪುನರ್ ನಿರ್ಮಾಣ ಮಾಡಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗೆ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ಜುಮ್ಲಾ ತಂದೆಯ ಇರಿತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ…

Read More

ರೈಲ್ವೇ ಜಾಗದಲ್ಲಿ ಅಕ್ರಮ ಮರ ಕಟಾವು: ಉಪ್ಪಳದ ನಾಲ್ವರು ಆರ್‌ಪಿಎಫ್ ಬಲೆಗೆ

ಮಂಜೇಶ್ವರ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಜಾಗದಿಂದ ತೇಗು ಸೇರಿದಂತೆ 11 ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳದ ನಾಲ್ಕು ಮಂದಿಯನ್ನು ಆರ್‌ಪಿಎಫ್ ಬಂಧಿಸಿದೆ. ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಣಿ ಹಾಗೂ ರಾಜೇಶ್ ಬಂಧಿತರು. ಮಂಗಳೂರು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕಟಾವು ಮಾಡಿದ ಮರಗಳು, ಸಾಗಾಣಿಕೆ ವಾಹನ ಮತ್ತು ಕತ್ತರಿಸುವ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರೈಲ್ವೇ ಜಾಗಕ್ಕೆ ಹೊಂದಿಕೊಂಡಿರುವ ಆರೋಪಿಗಳ ಭೂಮಿಯಿಂದ ಕಡಿಯುವ ನೆಪದಲ್ಲಿ ರೈಲ್ವೇ ಭೂಮಿಯಲ್ಲೂ ಮರಗಳನ್ನು ಕಡಿದಿರುವುದು…

Read More

ಕಾಸರಗೋಡು ನಗರಸಭೆಯ ಪ್ರಥಮ ವಾರ್ಡು ಸಭೆ. ಮಾದರಿ ನಗರಸಭೆಯ ನಿರ್ಮಾಣ- ಶಾಹಿನಾ ಸಲೀಂ.

ಕಾಸರಗೋಡು: ಕಾಸರಗೋಡು ನಗರಸಭೆಯ 2026- 27ನೇ ವಾರ್ಷಿಕ ಯೋಜನೆಯ ರೂಪೀಕರಣಕ್ಕಾಗಿ 9ನೇ ವಾರ್ಡ್ ನುಳ್ಳಿಪಾಡಿ ( ಅಣoಗೂರು, ಜೆ.ಪಿ ನಗರ, ಕನ್ನಡ ಗ್ರಾಮ) ದ ವಾರ್ಡ್ ಸದಸ್ಯರ ಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಫೆಬ್ರವರಿ 9ರಂದು ಜರುಗಿತು. ವಾರ್ಡ್ ಸಭೆಯನ್ನು ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿದರು. ಅವರು ಕಾಸರಗೋಡು ನಗರ ಸಭೆಯನ್ನು ರಾಜ್ಯದಲ್ಲಿ ಅತ್ಯುತ್ತಮ ನಗರಸಭೆಯನ್ನಾಗಿ ಜನರ ಸಹಕಾರದಿಂದ ರೂಪೀ ಕರಿಸುವುದಕ್ಕಾಗಿ ನಗರಸಭೆಯ ಎಲ್ಲಾ ವಾರ್ಡ್ ಸಭೆಗಳಿಗೆ ಮುಖತ ಭೇಟಿಯಾಗಿ ವಾರ್ಡ್ ಸದಸ್ಯರ…

Read More

ಉಚಿತ ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ – ಫೆ.22ರಂದು

ಮಂಜೇಶ್ವರ: ಪಟ್ಲ ಫ್ರೆಂಡ್ಸ್ ಕ್ಲಬ್ (ರಿ.) ಚೇವಾರು ಪಟ್ಲ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬಾಯಾರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಫೆಬ್ರವರಿ 22, 2026ರಂದು ಆಯೋಜಿಸಲಾಗಿದೆ. ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣು ಆಸ್ಪತ್ರೆ, ಮಂಗಳೂರು ಇವರ ಸಹಕಾರದೊಂದಿಗೆ ನಡೆಸಲಾಗುತ್ತದೆ. ರಕ್ತದಾನ ಶಿಬಿರಕ್ಕೆ ನಿಟ್ಟೆ (Deemed to be University) ಜಸ್ಟಿನ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಸಹಯೋಗ ನೀಡಲಿದೆ….

Read More

ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ – ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ

ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು,ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ,ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ…

Read More

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಲೋಕೇಶ್.ಯು ಮುಂಡಾನ್ ತ್ತಡ್ಕ ಇನ್ನಿಲ್ಲ

ಪುತ್ತಿಗೆ : ಅರ್ಧಿಕ ರಕ್ತದೊತ್ತಡದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದ ಪುತ್ತಿಗೆ ಬಳಿಯ ಮುಂಡಾನ್ ತ್ತಡ್ಕ ನಿವಾಸಿ ದಿl ರಾಮಚಂದ್ರ ಮತ್ತು ಸುಮತಿ ದಂಪತಿಗಳ ಏಕೈಕ ಪುತ್ರರಾದ ಲೋಕೇಶ್. ಯು (48) ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು . ಮೃತ ಇವರು ಶ್ರೀ ರಾಮ ಫೈನಾನ್ಸ್ ಕಂಪೆನಿಯ ಉದ್ಯೋಗದಲ್ಲಿ ತೊಡಗಿ ಕೆಲವು ವರ್ಷಗಳ ಬಳಿಕ ಡಿಸ್ಕ್ ಸಂಬಂಧಿತ ಅನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಮೃತ ಲೋಕೇಶ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರು…

Read More

ಪ್ರೊ. ಬಿ.ಎ. ವಿವೇಕ ರೈ ಇವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ … !

ಮಂಗಳೂರು: ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿ ಬಿಡುಗಡೆ ಸರಣಿ -1 ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆಯು ನಗರದ ಪತ್ರಿಕಾಭವನದಲ್ಲಿ ಇಂದು ನಡೆಯಿತು . ಕೃತಿ ಲೋಕಾರ್ಪಣೆಯ ನಂತರ ಪ್ರೊ. ಬಿ.ಎ. ವಿವೇಕ ರೈ ಪ್ರಾಸ್ತಾವಿಕ ನುಡಿಯನ್ನು ಆಡಿ, ಪತ್ರಿಕಾಭವನದಲ್ಲಿ ಈ ವರ್ಷದ ನನ್ನ ಮೊದಲ ಕೃತಿ ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ . ಇದು ನನ್ನ ಅಸೆ ಕೂಡ ಆಗಿತ್ತು . ಈ ಕೃತಿಯಲ್ಲಿ…

Read More
error: Content is protected !!