ಹೊಸಂಗಡಿ: ಬಸ್ ಇಳಿಯುವಾಗ ವೃದ್ಧೆಯ ಚಿನ್ನದ ಸರ ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆ ಸೆರೆ
ಕಾಸರಗೋಡು:ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದ ವೃದ್ಧೆಯೊಬ್ಬರ ಮೂರು ಪವನ್ ಚಿನ್ನದ ಸರವನ್ನು ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯೊಬ್ಬಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾಳೆ.ತಮಿಳುನಾಡಿನ ಮಧುರೈ ಮೂಲದ ಮುತ್ತಾತ್ತ (40) ಎಂಬಾಕೆಯನ್ನು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ಮೂಲದ 77 ವರ್ಷದ ಪ್ರೇಮಾ ಎಂಬವರ ಸರವನ್ನು ಈಕೆ ಎಗರಿಸಲು ಯತ್ನಿಸಿದ್ದಳು.ಪ್ರೇಮಾ ಅವರು ಮಂಗಳೂರಿನಲ್ಲಿ ಸಂಬಂಧಿಕರೊಬ್ಬರ ವಿವಾಹ ಆರತಕ್ಷತೆ ಮುಗಿಸಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊಸಂಗಡಿಗೆ ಹಿಂತಿರುಗುತ್ತಿದ್ದರು.ಹೊಸಂಗಡಿಯಲ್ಲಿ ಬಸ್…
