ತಂಡಗಳ ಮಧ್ಯೆ ಮಾರಾಮಾರಿ: 17 ಮಂದಿ ವಿರುದ್ಧ ಕೇಸು ಒಬ್ಬ ವಶಕ್ಕೆ
ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯ ಉದ್ಯಾವರ ಮಾಡ ಎಂಬಲ್ಲಿ ಗುರುವಾರ ಎರಡು ತಂಡಗಳ ಮಧ್ಯೆ ನಡೆದ ಮಾರಾಮಾರಿಗೆ ಸಂಬಂಧಿಸಿ 17 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಗುರುವಾರದಂದು ಉದ್ಯಾವರ ಮಾಡ ಪರಿಸರದಲ್ಲಿ ಎರಡು ತಂಡಗಳ ಮಧ್ಯ ಪರಸ್ಪರ ಘರ್ಷಣೆ ನಡೆದಿದೆ. ಇದು ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಅಲ್ಲಿದ ತಂಡಗಳನ್ನು ಚದುರಿಸಿದ್ದಾರೆ. ಈ ಸಂದರ್ಭ ಉದ್ಯಾವರ ಬಿ.ಎಸ್.ನಗರ ನಿವಾಸಿ ಮೊಹಮ್ಮದ್ ಬಿಲಾಲ್…