ಕರ್ನಾಟಕದಲ್ಲಿ ಕೆ ಎಸ್ ಆರ್ ಟಿ ಸಿ ಬಂದ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಸರಕಾರೀ ಬಸ್ ಸಂಚಾರ

ಮಂಗಳೂರು: ಕರ್ನಾಟಕದಲ್ಲಿ ಕೆ ಎಸ್ ಆರ್ ಟಿ ಸಿ ಬಂದ್ ಬಿಸಿ ಏರುತ್ತಿತ್ತದರು ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಸರಕಾರೀ ಬಸ್ ಸಂಚಾರ ನಡೆಸುತ್ತಿದೆ . ಹಿಂಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಯನ್ನು ಮುಂದಿಟ್ಟು ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳ ಸುಮಾರು ಒಂದುವರೇ ಲಕ್ಷ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು . ಕರ್ನಾಟಕದ ಇತ್ತರೆ ಭಾಗಗಳಿಗೆ ಪ್ರತಿಭಟನೆಯ ಕಾವು ಮುಟ್ಟಿದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ಸ್ಗಳು ಸುಗಮ ಸಂಚಾರ ನಡೆಸುತ್ತಿದೆ…

Read More

ಪ್ರಶಾಂತಿ ವಿದ್ಯಾಕೇಂದ್ರ ಬಾಯಾರಿನಲ್ಲಿ ಆಟಿದ ವನಸ್ ಆಷಾಡದ ಸವಿಯೂಟ

ಬಾಯಾರು:ಆಷಾಡ ಮಾಸದ ಮಹತ್ವವನ್ನು ಮಕ್ಕಳಿಗಾಗಿ ತಿಳಿಸುವ ನಿಟ್ಟಿನಲ್ಲಿ 04.08.2025 ಸೋಮವಾರ ಪ್ರಶಾಂತಿ ವಿದ್ಯಾ ಕೇಂದ್ರ ದ ರಜತಾಂಗಣ ದಲ್ಲಿ “ಆಟಿದ ವನಸ್”ಎಂಬ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ರಾದ ಶ್ರೀ ಮಂಜುನಾಥ ಭಾಗವಹಿಸಿ ತುಳುನಾಡಿನ ಆಷಾಡ ಮಾಸದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಪ್ರಶಾಂತಿ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಆಷಾಡ ಮಾಸದ ಆಹಾರ ಪದ್ಧತಿಯ ವಿಶೇಷತೆ ಮತ್ತು ಆಚರಣೆಯ ನೈಜ ವೈಜ್ಞಾನಿಕ ವಿಚಾರವನ್ನು…

Read More

ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಜನಮನ ರಂಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮ

ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜುಲೈ 27 ಆದಿತ್ಯವಾರ ಬೆಳಿಗ್ಗೆ ಕೋಳ್ಯೂರು ಆಡಿಟೋರಿಯಂನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆನೇಕಲ್ಲು ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಎನ್. ಟಿ. ರೈ ನಾಣಿಲ್ತಡಿಯವರು ಕಾರ್ಯಕ್ರಮ ಉದ್ಧಾಟಿಸಿದರು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಆಟಿಯ ದಿನದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಾಥ್ ಕೊಂಡೆ ಚಕ್ರಕೋಡಿ , ಸುಧೀಶ್ಚಂದ್ರ…

Read More

ಬಾಡೂರು ಪದವು ಶ್ರೀ ಕೃಷ್ಣ ಮಂದಿರದಲ್ಲಿ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ 15 ರಂದು

ಕುಂಬಳೆ : ಬಾಡೂರು ಪದವು ಶ್ರೀ ಕೃಷ್ಣ ಮಂದಿರದಲ್ಲಿ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಅಗೋಸ್ಟ್ 15 ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ನಡೆಯಲಿದೆ. ಜನ್ಮಾಷ್ಟಮಿಯ ಅಂಗವಾಗಿ ತಾರೀಕು 10-8-2025 ಆದಿತ್ಯವಾರ ಬೆಳಗ್ಗೆ 9ಗಂಟೆಗೆ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ12:30 ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ, ಹಾಗು 2ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣಾ ವೇಷಧಾರಿಗಳ ಶೋಭಾಯಾತ್ರೆ…

Read More

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ (ಕುಲಶೇಖರ ಉಪವಿಭಾಗ) ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ನೌಕರರ ಪಿಂಚಣಿ ಹಾಗೂ ಗ್ರಾಚುಟಿಗೆ ನಮ್ಮ ವಿರೋಧವಿಲ್ಲ, ಖಂಡಿತವಾಗಿಯೂ ಅವರಿಗೆ ನೀಡಲೇಬೇಕು. ಅದು ರಾಜ್ಯ ಸರ್ಕಾರದ…

Read More

ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ

ಮಂಗಳೂರು: ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಂಗಳೂರಿನ ರಸ್ತೆಯೊಂದರಲ್ಲಿ ನಡೆದ ಹೊಡೆದಾಟ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಟ್ರಾಫಿಕ್ ಜಾಮ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಮಂಗಳೂರಿನ ಪಂಪ್ವೆಲ್ ನಿಂದ ಕಂಕನಾಡಿ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ. ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಅಂಬ್ಯುಲೆನ್ಸ್ ಗೂ ದಾರಿ ನೀಡದೆ ಗುಂಪು…

Read More

ವಿಟ್ಲ ಧಾರ್ಮಿಕ ಶೃದ್ದಾ ಕೇಂದ್ರವೊಂದಕ್ಕೆ ಸೇರಿದ್ದ ಕಾಣಿಕೆ ಡಬ್ಬಿಯಿಂದ ಹಣ ಕಳವು-ಮೂವರು ಆರೋಪಿಗಳು ಪೋಲೀಸರ ವಶಕ್ಕೆ

ಬಂಟ್ವಾಳ: ವಿಟ್ಲ ಧಾರ್ಮಿಕ ಶೃದ್ದಾ ಕೇಂದ್ರವೊಂದಕ್ಕೆ ಸೇರಿದ್ದ ಕಾಣಿಕೆ ಡಬ್ಬಿಯಿಂದ ಹಣ ಕಳವು ಮಾಡಿದ ವಿಚಾರದಲ್ಲಿ ವಿಟ್ಲ ಠಾಣಾ ಪೋಲೀಸರ ತಂಡ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. ವಿಟ್ಲ ಕಸಬಾ ಗ್ರಾಮದವರಾದ ನಿವಾಸಿ ತ್ವಾಹಿದ್ ( 19).ಉಮ್ಮರ್ ಫಾರೂಕ್( 18) ಮತ್ತು ಮೊಹಮ್ಮದ್ ನಬೀಲ್ (18) ಬಂಧಿತ ಆರೋಪಿಗಳು.‌ಜುಲೈ 26 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ದೇಲಂತಬೆಟ್ಟು ಎಂಬಲ್ಲಿ ದೇಲಂತಬೆಟ್ಟು ಡಿ.ನಾರಾಯಣ ರಾವ್ ಅವರ ಅಧ್ಯಕ್ಷರಾಗಿರುವ ಧಾರ್ಮಿಕ ಶೃದ್ದಾ ಕೇಂದ್ರದ ಕಾಣಿಕೆ ಡಬ್ಬಿಯಿಂದ 15 ಸಾವಿರ…

Read More

ಕಾಪು: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಪಲ್ಟಿ; ಏಳು‌ಮೀನುಗಾರರ ರಕ್ಷಣೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ಕಾಪು ತಾಲೂಕಿನ ಲೈಟ್ ಹೌಸ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ದೋಣಿಯಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರಾದ ಪ್ರಶಾಂತ್ ಮತ್ತು ವಿನೋದ್ ರಕ್ಷಣೆ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ದುರಂತ ತಪ್ಪಿದಂತಾಗಿದೆ.

Read More

ಕುಂದಾಪುರ: ಸ್ಕೂಟರ್ ಗೆ ಬಸ್ ಡಿಕ್ಕಿ: ಸಹಸವಾರೆ ಪತ್ನಿ ಮೃತ್ಯು, ಪತಿ ಗಂಭೀರ

ಉಡುಪಿ: ಬಸ್ಸೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ಸಂಗಮ್ ಜಂಕ್ಷನ್ ಸಮೀಪದ ನವಭಾರತ್ ಟಿಂಬರ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಹೊಸಮಠ ಚಾರುಕೊಟ್ಟಿಗೆ ನಿವಾಸಿ ಜಲಜಾ(64) ಎಂದು ಗುರುತಿಸಲಾಗಿದೆ. ಇವರ ಪತಿ ಸ್ಕೂಟರ್ ಸವಾರ ನಾರಾಯಣ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆನಗಳ್ಳಿಯಿಂದ ಚಾರುಕೊಟ್ಟಿಗೆ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದು, ಆಗ ಹಿಂದಿನಿಂದ ಬಂದ ಬಸ್, ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ನಾರಾಯಣ…

Read More

ಮಣಿಪಾಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಚಾಲಕ ಸ್ಥಳದಿಂದ ಪರಾರಿ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಣಿಪಾಲ ಪೊಲೀಸ್ ಠಾಣೆಯ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ. ಬೆಂಗಳೂರು ನೋಂದಣಿಯ ಕಾರು ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂತಿಗಳು ರಸ್ತೆಗೆ ಬಿದ್ದಿದ್ದು, ಮಣಿಪಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿ…

Read More
error: Content is protected !!