ಕಾರ್ಕಳ: ನಾರಿಶಕ್ತಿ ಜಾಗೃತಿ ಸಮಾವೇಶ, ಸಾಧಕಿಯರಿಗೆ ಸನ್ಮಾನ

ಕಾರ್ಕಳ: ಮಹಿಳಾ ಸಬಲೀಕರಣ ಎಂದರೆ ಕೇವಲ ಹಕ್ಕುಗಳಿಗಾಗಿ ಸದ್ದು ಮಾಡುವುದಲ್ಲ. ಬದಲಿಗೆ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯಯುತ ಅವಕಾಶಗಳನ್ನು ಪಡೆದುಕೊಳ್ಳುತ್ತಲೇ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಮುನ್ನಡೆಯುವುದಾಗಿದೆ ಎಂದು ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುರಭಿ ಹೊಡಿಗೆರೆ ಪ್ರತಿಪಾದಿಸಿದರು. ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ನಾರಿಶಕ್ತಿ ಸಾಧಕ ಮಹಿಳೆಯರ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಆಧುನಿಕ ಸಮಾಜದಲ್ಲಿ ಮಹಿಳೆಗೆ ಕೇವಲ ಸುರಕ್ಷತೆ ಅಥವಾ ರಕ್ಷಣೆ ನೀಡಿದರೆ ಸಾಲದು. ಅದಕ್ಕಿಂತ ಹೆಚ್ಚಾಗಿ ಆಕೆಗೆ ಸ್ವತಂತ್ರವಾಗಿ…

Read More

ಸೂರಂಬೈಲು ನಿವಾಸಿ,ಮಾಜಿ ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಮಂಜೇಶ್ವರ: ಸೂರಂಬೈಲು ನಿವಾಸಿ, ಮಾಜಿ ಆಟೋ ಚಾಲಕ ಪುರುಷೋತ್ತಮ ಗಟ್ಟಿ (54) ಅವರು ಶನಿವಾರ ಮುಂಜಾನೆ ತಮ್ಮ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ​ಬೆಳಿಗ್ಗೆ ಸುಮಾರು 6:30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಕುಟುಂಬಸ್ಥರು ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಕುಂಬಳೆಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪುರುಷೋತ್ತಮ ಗಟ್ಟಿ ಅವರ ಸಾವಿಗೆ ನಿಖರ ಕಾರಣ…

Read More

ಗ್ರಾಮೀಣ ಭಾಗದ ಆರೋಗ್ಯ ಬಲವರ್ಧನೆಗೆ ಸರ್ಕಾರದ ಮಹತ್ವದ ಹೆಜ್ಜೆ:ಆಸ್ಪತ್ರೆಗಳ ಖಾಸಗೀಕರಣದ ಆರೋಪಕ್ಕೆ ಕಿವಿಗೊಡಬೇಡಿ-ಕೆ.ಹರೀಶ್ ಕುಮಾರ್

ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಮನೆಬಾಗಿಲಿಗೇ ತಲುಪಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿರುವುದು ಶ್ಲಾಘನೀಯ. ಇದರ ಮೂಲಕ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ,…

Read More

ಕಲಾಭಿವಂದನೆಯ ಹಾದಿಯಲ್ಲಿ ಮತ್ತೊಂದು ಹೊಂಬೆಳಕು : ಬಾಲಪ್ರತಿಭೆ ಯತಿರಾಜ್ ರೈ

​”ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ |ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ ||”​ರಾಜ ಪದವಿ ಮತ್ತು ವಿದ್ವತ್ತು ಎಂದಿಗೂ ಸಮಾನವಲ್ಲ; ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ದೊರೆತರೆ, ವಿದ್ವತ್ಪೂರ್ಣ ಕಲಾವಿದನು ಜಗದಗಲಕ್ಕೂ ಪೂಜಿಸಲ್ಪಡುತ್ತಾನೆ. ಇಂತಹ ಉನ್ನತ ಹಾದಿಯಲ್ಲಿ, ಕಲೆಯನ್ನೇ ಉಸಿರಾಗಿಸಿಕೊಂಡು ಬಾಲ್ಯದಲ್ಲೇ ಮಹತ್ಸಾಧನೆಯ ಕನಸು ಹೊತ್ತಿರುವ ಸವ್ಯಸಾಚಿ ಪ್ರತಿಭೆಯೇ ಯತಿರಾಜ್ ರೈ. ಸಾಂಸ್ಕೃತಿಕ ಪರಂಪರೆಯ ಗಣಿಯಾಗಿರುವ ನಮ್ಮ ಮಣ್ಣಿನಲ್ಲಿ, ಪ್ರತಿಭೆಗಳು ಜನ್ಮಜಾತ ಕಲಾ ಸಂಸ್ಕಾರದೊಂದಿಗೆ ಅರಳುತ್ತವೆ ಎಂಬುದಕ್ಕೆ ಈ ಯುವ…

Read More

ಹಳೆ ಡಿಸಿ ಕಚೇರಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಸಿದ್ಧತೆ:ಐವನ್ ಡಿ’ಸೋಜಾ ವಿಶ್ವಾಸ

ಮಂಗಳೂರು:ಮಂಗಳೂರಿನಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಅಥವಾ ಶಾಶ್ವತ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಕೇವಲ ವಕೀಲರದ್ದಲ್ಲ, ಇಡೀ ಕರಾವಳಿ ಭಾಗದ ಸಾರ್ವಜನಿಕರ ನ್ಯಾಯಸಮ್ಮತ ಹಕ್ಕಿನ ಬೇಡಿಕೆಯಾಗಿದ್ದು ಇದಕ್ಕೆ ಮನ್ನಣೆಯನ್ನು ರಾಜ್ಯದ ಮುಖ್ಯ ಮಂತ್ರಿಗಳು ನೀಡಿದ್ದು ಅಕ್ಟೋಬರ್ ತಿಂಗಳ ಒಳಗಾಗಿ ನಗರದ ಹಳೆ ಡಿಸಿ ಕಚೇರಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರಾದ ಐವನ್ ಡಿ’ಸೋಜಾ ತಿಳಿಸಿದರು . ನಗರದ ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ಮಂಗಳೂರು: ಕಾರಿನಲ್ಲಿ ಜಾನುವಾರು ಸಾಗಾಟ – ಇಬ್ಬರು ಬಂಧನ

ಮಂಗಳೂರು: ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಬಿದ್ರೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಈ ಕಾರ್ಯಾಚರಣೆ ನಡೆದಿದೆ. ಮೂಡಬಿದ್ರೆ ಹಂಡೇಲು ನಿವಾಸಿ ಮಹಮ್ಮದ್ ಆರಿಫ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳು. ಇವರಿಂದ ಮಾರುತಿ ಬ್ರೀಜಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬ್ರೀಜಾ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಆರೋಪಿಗಳು…

Read More

ರಮೇಶ್ ಚೆನ್ನಿತ್ತಲಗೆ ಗೃಹ ಸಚಿವರಾಗುವ ಸಾಧ್ಯತೆ? ವಿ.ಡಿ. ಸತೀಶನ್ ಸಂಪುಟದಲ್ಲಿ ಚೆನ್ನಿತ್ತಲಗೆ ಮಹತ್ವದ ಸ್ಥಾನ?

ತಿರುವನಂತಪುರಂ:ರಮೇಶ್ ಚೆನ್ನಿತ್ತಲ್ ಅವರು ವಿ.ಡಿ.ಸತೀಸನ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗುವ ಸಾಧ್ಯತೆಯಿದೆ. ನಿಯೋಜಿತ ಮುಖ್ಯಮಂತ್ರಿ ವಿ.ಡಿ.ಸತೀಸನ್ ಹಾಗೂ ರಮೇಶ್ ಚೆನ್ನಿತ್ತಲ ನಡುವೆ ಮಾತುಕತೆ ನಡೆದ ಬಳಿಕ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಇದೇ ವೇಳೆ,ವಿ. ಡಿ. ಸತೀಶನ್ ಅವರ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಸ್ಥಾನವನ್ನು ವಿ. ಡಿ. ಸತೀಶನ್ ಅವರಿಗೆ ನೀಡುವಂತೆ ಹೈಕಮಾಂಡ್ ಘೋಷಿಸಿದ ಬಳಿಕ ರಮೇಶ್ ಚೆನ್ನಿತ್ತಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ….

Read More

ಬಂಟ್ವಾಳ: ಸ್ಕೂಟರ್ ಸ್ಕಿಡ್ – ಸವಾರ ಮೃತ್ಯು

ಬಂಟ್ವಾಳ: ಸ್ಕೂಟರ್ ಸ್ಕಿಡ್ ಆಗಿ ನಡೆದ ಅಪಘಾತದಲ್ಲಿ ಸವಾರನೋರ್ವ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಾಮಲ್ ಕಟ್ಟೆ ಟೋಲ್ ಗೇಟ್ ಸಮೀಪ ನಡೆದಿದೆ. ಪಿ.ಸೋಮನಾಥ ಪ್ರಭು( 65) ಎಂಬವರು ಮೃತಪಟ್ಟ ವ್ಯಕ್ತಿ.ಅವರು ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುವ ಸಂದರ್ಭದಲ್ಲಿ ರಾಮಲ್ ಕಟ್ಟೆ ಟೋಲ್ ಗೇಟ್ ಸಮೀಪ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಇವರಿಗೆ…

Read More

ಮಂಗಳೂರು: ಹಿಜಾಬ್ ವಿಚಾರಕ್ಕೆ ರಾಜಕೀಯ ಬಣ್ಣ – ಐವನ್ ಡಿ’ಸೋಜ

ಮಂಗಳೂರು:ಹಿಜಾಬ್ ಧರಿಸುವುದು ಹೊಸ ಪದ್ಧತಿಯಲ್ಲ. ಅದು ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯ ಭಾಗವಾಗಿದ್ದು, ಅದಕ್ಕೆ ರಾಜಕೀಯ ಬಣ್ಣ ಬಳೆಯುತ್ತಿರುವುದು ಬಿಜೆಪಿಯ ಸಣ್ಣತನ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜ ಕಟುವಾಗಿ ರಾಜ್ಯ ಬಿಜೆಪಿ ಸರಕಾರವನ್ನು ಟೀಕಿಸಿದರು . ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸುವ ಪದ್ಧತಿ ಬಾಲ್ಯದಿಂದಲೇ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವಾಗಿದೆ. ಸಿಖ್ ಸಮುದಾಯದವರು ಪೇಟ ಧರಿಸುವಂತೆ, ಮುಸ್ಲಿಂ ಮಹಿಳೆಯರೂ ತಮ್ಮ ಧರ್ಮದ ಸಂಸ್ಕೃತಿಯ ಭಾಗವಾಗಿ…

Read More

ಮಂಗಳೂರು: ಇಂಧನ ದರ ಏರಿಕೆ ಕೇಂದ್ರದ ವೈಫಲ್ಯ – ಐವನ್ ಡಿ’ಸೋಜ

ಮಂಗಳೂರು: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರಗಳನ್ನು ಏರಿಸಲಾಗಿದೆ. ಜನರ ಸಂಕಷ್ಟಗಳನ್ನು ನಿವಾರಿಸುವ ಬದಲು ಕೇಂದ್ರ ಸರ್ಕಾರ ಬೆಲೆ ಏರಿಕೆಯ ಹೊರೆ ಜನರ…

Read More
error: Content is protected !!