ರಾಜ್ಯ ಕಂಬಳ ಅಸೋಸಿಯೇಶನ್ (ರಿ.) ನಿಂದ 25 ಕಡೆಗಳಲ್ಲಿ ಮೇಳೈಸಲಿದೆ ಕಂಬಳ

ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಇದೀಗ ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆ ಪಡೆದಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಪ್ರಾಧಿಕಾರವು ಕಂಬಳ ಕ್ರೀಡೆಯ ಪರಂಪರೆ, ವೈಶಿಷ್ಟ್ಯತೆ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ (ರಿ.)ಗೆ ಅಧಿಕೃತ ಮಾನ್ಯತೆ ನೀಡಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳವು ತಿಳಿಸಿದರು. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಂಬಳ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸಾಂಪ್ರದಾಯಿಕ…

Read More

ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ಥಿ -ಕೂಡಲೇ ಸಂಚಾರ ಯೋಗ್ಯ ಮಾಡಲು ಬಿಜೆಪಿ ಅಗ್ರಹ

ಮಂಜೇಶ್ವರ: ಸಜಂಕಿಲ -ಬಾಯರ್ ರಸ್ತೆ, ಕುರುಡಪದವು ಲಾಲ್ ಬಾಗ್ ರಸ್ತೆ, ಹೊಸಂಗಡಿ- ಮಜೀಬೈಲ್ ಕಂಗುಮೆ ರಸ್ತೆ ವರ್ಕಾಡಿ ದೈಗೋಳಿ, ಗುವೇದಪಡ್ಪುರಸ್ತೆ ಮಂಜೇಶ್ವರ ಕೆದುoಬಾಡಿ ರಸ್ತೆ ಗಳನ್ನು ಸಂಚಾರ ಯೋಗ್ಯಗೊಳಿಸಬೇಕು, ಮತ್ತು ಕಾಮಗಾರಿ ಕೂಡಲೇ ಪೂರ್ಣ ಮಾಡಬೇಕೆಂದು ಬಿಜೆಪಿ ಮಂಡಲ ಸಮಿತಿ ಅಗ್ರಹಿಸಿದೆ. ಮಂಜೇಶ್ವರ ಶಾಸಕರ ಹಾಗೂ ಲೋಕಪಯೋಗಿ ಇಲಾಖೆಯ ಬೇಜವಾಬ್ದಾರಿ ಮತ್ತು ಸ್ಥಳೀಯ ಪಂಚಾಯತ್ ಆಡಳಿತದ ನಿಕ್ರಿಯತೆ ಇದಕೆಲ್ಲ ಕಾರಣ.ಜನರ ಸಮಸ್ಯೆಗೆ ಪರಿಹಾರ ಕಾಣದ ಶಾಸಕರು ವಿದೇಶ ಸುತ್ತುವುದು ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಬಿಜೆಪಿ ಮಂಜೇಶ್ವರ…

Read More

ಆಟೋ ರಿಕ್ಷಾದಲ್ಲಿ ಸಾಗಿಸಲಾಗುತಿದ್ದ 22.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣ : ಆರೋಪಿಗಳಿಗೆ 10 ವರ್ಷ ಕಠಿಣ ಸಜೆ ಹಾಗೂ ದಂಡ

ಕಾಸರಗೋಡು : ಆಟೋ ರಿಕ್ಷಾದಲ್ಲಿ ಸಾಗಿಸಲಾಗುತಿದ್ದ 22.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ನಂತೆ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕಾಸರಗೋಡು ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಧ್ವಿ) ನ್ಯಾಯಾಧೀಶೆ ಕೆ ಪ್ರಿಯಾ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ನೆಲ್ಲಿಕಟ್ಟೆ ಹಮೂಸ್ ನಗರದ ಅಬ್ದುಲ್ ರಹ್ಮಾನ್ (55), ಪೆರುಂಬಳ ಕಡವ್ ನಿವಾಸಿ ಸಿ ಎ ಆಹ್ಮದ್ ಕಬೀರ್ (43) ಹಾಗೂ ಆದೂರು ನಿವಾಸಿ ಕೆ…

Read More

ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವಲ್ಲ – ಕಾರ್ಮಿಕ ಸಚಿವ ಸಂತೋಷ್ ಲಾಡ್

ಮಂಗಳೂರು: 2014ರ ವರೆಗೆ ದೇಶದ ಸಾಲ 53 ಲಕ್ಷ ಕೋಟಿ ಇತ್ತು. ನರೇಂದ್ರ ಮೋದಿ ಪ್ರಧಾನಿ ಆದ 10 ವರ್ಷಗಳಲ್ಲಿ ದೇಶದ ಸಾಲ 185 ಲಕ್ಷ ಕೋಟಿಗೆ ಏರಿಕೆಯಾಗಿದೆ. ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಬಳಿಕ ಅವರು ಮಾತನಾಡುತ್ತಿದ್ದರು. ಬಿಜೆಪಿಗರು ಚುನಾವಣೆ ಸಂದರ್ಭ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ…

Read More

ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥ ನಾಶಪಡಿಸಿದ ಪೊಲೀಸರು.

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 9 ಕಿಲೋ 937 ಗ್ರಾಂ ತೂಕದ ಅಂದಾಜು ಮೌಲ್ಯ ರೂಪಾಯಿ 7,12,963/- ಬೆಲೆಯ ಗಾಂಜಾ, 345 ಗ್ರಾಂ ಎಂ.ಡಿ.ಎಂ.ಎ. ಅಂದಾಜು ಮೌಲ್ಯ ರೂಪಾಯಿ 8,08,464/- ಹಾಗೂ ಮೌಲ್ಯರಹಿತ 61 ಗ್ರಾಂ 430 ಮಿಲಿಗ್ರಾಂ ಬಿಳಿ ಪೌಡರ್‌ನ್ನು ಪಡುಬಿದ್ರಿ ಠಾಣಾ ಸರಹದ್ದಿನ ಆಯುಷ್‌ ಎನ್‌ವಿರೋಟೆಕ್‌ ಪ್ರೈ. ಲಿ. ಎಂಬಲ್ಲಿ ನಾಶಪಡಿಸಲಾಯಿತು.ನಾಶಪಡಿಸಿದ ಮಾದಕ ದ್ರವ್ಯದ ಒಟ್ಟು ಅಂದಾಜು ಮೌಲ್ಯ ರೂಪಾಯಿ 15,21,427/- ಆಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆಯ…

Read More

ಪಿಣರಾಯಿ ಸರಕಾರಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ- ಕಾಂಗ್ರೆಸ್

ದೈವ ದೇವರುಗಳನ್ನು ಧಿಕ್ಕರಿಸಿ ರಾಜಕೀಯ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪಿಣರಾಯಿ ನೇತೃತ್ವದ ಸಿಪಿಎಂ ಸರಕಾರ ತನ್ನ ಅಂಧಾ ದರ್ಬಾರ್ ದೆಸೆಯಿಂದ ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ದೈವ ದೇವರುಗಳ ಮೊರೆ ಹೋಗುವ ಮೂಲಕ ಆಸ್ತಿಕರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ. ಅವಸರದ ಕಳ್ಳರಂತೆ ಕಂಡ ಕಂಡ ದೇವಸ್ಥಾನಗಳ ಹುಂಡಿಗೆ ಕೈ ಹಾಕುವುದು ಮಾತ್ರವಲ್ಲದೆ ಶಬರಿಮಲೆ ಕ್ಷೇತ್ರದ ಬಾಗಿಲು, ದಾರಂದ ಮತ್ತಿತರ ಸ್ವರ್ಣಲೇಪಿತ ಪೂಜನೀಯ ವಸ್ತುಗಳನ್ನು ಕದ್ದೊಯ್ಯುವ ನಿರ್ಲಜ್ಜ ಹಗಲು ದರೋಡೆಗೆ ಇಳಿದಿದೆ. ಈ ಆಟವು…

Read More

ಕೋಟೆ ಮನೆ ವೆಂಕಟರಮಣ ಆಚಾರ್ಯರವರ ಶತ ಸಂಭ್ರಮ

ಮಂಜೇಶ್ವರ : ಮಂಜೇಶ್ವರ ಹೊಸಂಗಡಿಯ ಹೆಸರಾಂತ ಕಾಸ್ಟ ಶಿಲ್ಪಿ ಕೋಟೆ ಮನೆ ವೆಂಕಟರಮಣ ಆಚಾರ್ಯರವರ 100 ನೇ ಹುಟ್ಟುಹಬ್ಬವನ್ನು ಇತ್ತೀಚಿಗೆ ಸಂಭ್ರಮದಿಂದ ಆಚರಿಸಲಾಯಿತು. ಹಲವು ವರ್ಷಗಳಿಂದ ಶ್ರೀ ಮತ್ ಅನಂತೇಶ್ವರ ದೇವಸ್ಥಾನದ ಬಳಿಯಿರುವ ಕಟ್ಟಡದಲ್ಲಿ ಮರದ ಕೆಲಸವನ್ನು ನಿರ್ವಹಿಸುತ್ತಿರುವ ಇವರು 5 ನೇ ತರಗತಿ ಪೂರೈಸಿದ ಬಳಿಕ ತಂದೆಯ ಕೆಲಸವನ್ನು ಮುಂದುವರಿಸಿದ್ದರು. 1951 ರಲ್ಲಿ ಶಾರದಾ ರವರನ್ನು ವಿವಾಹವಾಗಿ ಇಬ್ಬರು ಗಂಡು ಮಕ್ಕಳು ಮತ್ತು ಐವರು ಹೆಣ್ಣುಮಕ್ಕಳಿರುವ ಸಂತೃಪ್ತ ಕುಟುಂಬ ಇವರದ್ದುಹಿರಿಯ ಪುತ್ರ ಹರಿಶ್ಚಂದ್ರ ಆಚಾರ್ಯ ಹೆಸರಾಂತ…

Read More

ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಶಿವರಾಮ ಕಾಸರಗೋಡು 60ನೇ ಜನ್ಮದಿನೋತ್ಸವ ಪೋಸ್ಟರನ್ನು (ಭಿತ್ತಿ ಪತ್ರ) ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಂದ ಬಿಡುಗಡೆ

ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಬೆಳಿಗ್ಗೆ ಗಂಟೆ 11.00 ರಿಂದ ರಾತ್ರಿ 9.00 ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಪೋಸ್ಟರ್ ರನ್ನು (ಭಿತ್ತಿ ಪತ್ರ) ಶ್ರೀ ಎಡನೀರು ಮಠದ…

Read More

ಪುನರ್‌ ಡಾಮಾರೀಕರಣ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲೇ ಸಂಪೂರ್ಣ ಹದಗೆಟ್ಟ ಕೆದಂಬಾಡಿ ರಸ್ತೆ .

ಮಂಜೇಶ್ವರ : ಅದೆಷ್ಟೋ ನಿರೀಕ್ಷೆಗಳಿಂದ ಕಾಮಗಾರಿ ಪೂರ್ಣಗೊಂಡಿದ್ದ ಮಂಜೇಶ್ವರ ಗೋವಿಂದ ಪೈ – ಕೆದಂಬಾಡಿ ರಸ್ತೆಯ ಪುನರ್‌ಡಾಮಾರೀಕರಣ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು ₹5.24 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಈ ರಸ್ತೆ ಡಾಮಾರೀಕರಣಗೊಂಡಿದ್ದರೂ, ಇದೀಗ ರಸ್ತೆ ಎರಡೂ ಬದಿಗಳು ಸಂಪೂರ್ಣವಾಗಿ ಕುಸಿದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಸುಮಾರು 5.2 ಕಿ.ಮೀ ಉದ್ದದ ಈ ರಸ್ತೆ, ಕಾಮಗಾರಿ ಆರಂಭವಾಗುವ ವೇಳೆಯೇ ಅಗಲದಲ್ಲಿ ಅತಿಯಾದ ಕೊರತೆಯಿದ್ದ ಕಾರಣ ಸ್ಥಳೀಯರು ಭಾರೀ ವಿರೋಧ…

Read More

ಬಿಸಿರೋಡು ಬಸ್ ನಿಲ್ದಾಣದ ರಸ್ತೆ ಹಾಗೂ ರೈಲ್ವೇ ಮೇಲ್ಸೇತುವೆಯ ಗುಂಡಿ ಗಳಿಗೆ ತಾತ್ಕಾಲಿಕ ತೇಪೆ.

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಿಸಿರೋಡು ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಗೂ ರೈಲ್ವೆ ಮೇಲ್ಸೇತುವೆಯ ಭಾಗದಲ್ಲಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದ್ದಿದ್ದ ಬೃಹತ್ ಹೊಂಡಗಳನ್ನು ಇಂದು ಹೆದ್ದಾರಿ ಇಲಾಖೆಯ ಮೊಗರೋಡಿ ಕನ್ಸ್್ಟ್ರಕ್ಸನ್ ಅಧಿಕೃತ ಗುತ್ತಿಗೆ ಸಂಸ್ಥೆಯಿಂದ ಮುಚ್ಚಲಾಯಿತು. ಮಂಗಳೂರಿನಿಂದ ಬಿಸಿರೋಡು ವರೆಗೆ ಹೆದ್ದಾರಿಯ ನಿರ್ವಹಣೆ ವಹಿಸಿಕೊಂಡ ಮೊಗರೊಡಿ ಕಂಪೆನಿಯವರು ಎರಡು ದಿನಗಳಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಬಿಸಿರೋಡು ಬಸ್ ನಿಲ್ದಾಣ ಹಾಗೂ ರೈಲ್ವೇ ಮೇಲ್ಸೇತುವೆಯಲ್ಲಿ ಬಿದ್ದ ಗುಂಡಿಗಳಿಂದ ನಿತ್ಯ ಟ್ರಾಫಿಕ್ ಸಮಸ್ಯೆ…

Read More
error: Content is protected !!