ಇತಿಹಾಸ ನಿರ್ಮಿಸಿದ ಮಂಜೇಶ್ವರ ಮತದಾನ – 13.5 ಗಂಟೆಗಳ ಹೊಸ ದಾಖಲೆ
ಮಂಜೇಶ್ವರ: ಕೇರಳದ ಒಂದನೇ ವಿಧಾನಸಭಾ ಕ್ಷೇತ್ರವಾದ ಮಂಜೇಶ್ವರದಲ್ಲಿ ಈ ಬಾರಿ ನಡೆದ ಚುನಾವಣೆ ಕೇವಲ ಮತದಾನವಾಗಿ ಉಳಿಯದೆ, ಒಂದು ಚಾರಿತ್ರಿಕ ದಾಖಲೆಯಾಗಿ ಹೊರಹೊಮ್ಮಿದೆ. ಎಂದೂ ಕಾಣದ ಆವೇಶ, ಮತದಾರರ ಅದಮ್ಯ ಉತ್ಸಾಹ ಮತ್ತು ತಾಂತ್ರಿಕ ಸವಾಲುಗಳ ನಡುವೆ ನಡೆದ ಈ ಬಾರಿಯ ಮತಸಮರದಲ್ಲಿ ಬರೋಬ್ಬರಿ ಶೇ. 81.04 ಮತದಾನವಾಗುವ ಮೂಲಕ ಫಲಿತಾಂಶದ ಕುತೂಹಲವನ್ನು ಶಿಖರಕ್ಕೇರಿಸಿದೆ. ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ…
