ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಷನ್ ಸೆಂಟರ್‌ನಲ್ಲಿ ಬೆಂಕಿ ಅವಘಡ – 2 ಬಿಎಂಡಬ್ಲ್ಯು ಕಾರುಗಳಿಗೆ ಹಾನಿ
ಮಂಗಳೂರು: ನಗರದ ಫಳ್ನೀರ್ ಸಮೀಪದ ಟೋಪಾಜ್ ಕಾರ್ ಸೆಂಟರ್‌ನಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎರಡು ಬಿಎಂಡಬ್ಲ್ಯು ಕಾರುಗಳು ಹಾನಿಗೊಳಗಾಗಿ ಅಪಾರ ಸ್ವತ್ತು ನಾಶವಾಗಿದೆ. ಇಂದು ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬೆಂಕಿ ತೀವ್ರತೆಯಿಂದ ಸೆಂಟರ್‌ನಲ್ಲಿ ಇದ್ದ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಈ ಸಂಸ್ಥೆ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ತಂಗಿಯ ಮಗ ಸಿಯಾಜ್ ಅವರಿಗೆ ಸೇರಿದ್ದಾಗಿದೆ.ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದು, ಹೆಚ್ಚಿನ ಹಾನಿಯನ್ನು…
