ಬಜೆಟ್ ನಲ್ಲಿ ಮಂಗಳೂರು ದಸರಾಗೆ 5 ಕೋಟಿ :- ಮುಖ್ಯಮಂತ್ರಿಗಳಿಗೆ ಶಾಸಕ ಕಾಮತ್ ಮನವಿ

ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಮಾಡಿದರು. ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ…

Read More

ಮಾಣೂರು: ಫೆ. 2ರಿಂದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮಂಗಳೂರು: ನೀರುಮಾರ್ಗ ಗ್ರಾಮದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಾಣೂರು ಕ್ಷೇತ್ರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಫೆ.2ರಂದು ಬೆಳಗ್ಗೆ 8.00ಕ್ಕೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ. ರಾತ್ರಿ 7.00ರಿಂದ : ಸ್ಥಳಿಯ ಪ್ರತಿಭೆಗಳಿಂದ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ…

Read More

ವೆನ್ ಲಾಕ್ ಆಸ್ಪತ್ರೆ ನೂತನ OPD ಬ್ಲಾಕ್ ಕಟ್ಟಡ ನಿರ್ಮಾಣ ಸದ್ಯದಲ್ಲಿಯೇ ಪ್ರಾರಂಭ: ದಿನೇಶ್ ಗುಂಡೂರಾವ್

ಬಡ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಬೇಕೆಂಬ ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು 70 ಕೋಟಿ ರೂಗಳ ವೆಚ್ಚದಲ್ಲಿ ಎರಡು ಹಂತದಲ್ಲಿ ವಿಸ್ತರಿಸಲಾಗುವುದು. ಮೊದಲನೇ ಹಂತದಲ್ಲಿ 35 ಕೋಟಿ ವೆಚ್ಚದಲ್ಲಿ ನೂತನ ಎರಡು ಅಂತಸ್ತಿನ OPD ವಿಭಾಗವನ್ನು ನಿರ್ಮಾಣ ಮಾಡಲು ಸದ್ಯದಲ್ಲಿಯೇ ಟೆಂಡರ್ ಗೆ ಆಹ್ವಾನ ನೀಡಲಾಗುವುದು. ಈ ಕಟ್ಟಡದಲ್ಲಿ ಸೌರವಿದ್ಯುತ್ ಘಟಕವೂ ಇರಲಿದ್ದು, ಸಿಸಿ ಟಿವಿ ಅಳವಡಿಸಲಾಗುವುದು. ವೆನ್ಲಾಕ್ ಆಸ್ಪತ್ರೆಯನ್ನು ಒಂದು ರೀತಿಯ ಮಾದರಿ ಆಸ್ಪತ್ರೆಯಾಗಿ ನಿರ್ಮಾಣ ಮಾಡುವುದು ಆರೋಗ್ಯ ಇಲಾಖೆಯ ಗುರಿಯಾಗಿದ್ದು, ಎಲ್ಲ ರೀತಿಯ ಸೌಲಭ್ಯ…

Read More

ಮಾದಕ ವ್ಯಸನದ ವಿರುದ್ಧ ವಿದ್ಯಾರ್ಥಿಗಳ ಜನಜಾಗೃತಿ

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು, ಮಂಗಳೂರು ನಗರ ಪೊಲೀಸ್ ಹಾಗೂ ರೋಶಿನಿ ನಿಲಯ ವಿದ್ಯಾಸಂಸ್ಥೆ ಮಂಗಳೂರು ಇದರ ಸಹಯೋಗದಲ್ಲಿ ಮಾದಕ ದ್ರವ್ಯ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಬಸ್ಸು ನಿಲ್ದಾಣ ಸ್ಟೇಟ್ ಬ್ಯಾಂಕ್ ಬಳಿ ನಡೆಯಿತು. ರೋಶನಿ ನಿಲಯ ವಿದ್ಯಾಸಂಸ್ಥೆಯ ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಾರಿಕ್ ಅಂಕಿತ ಹಾಗೂ ಅವರ ವಿದ್ಯಾರ್ಥಿಗಳಿಂದ ‘ಜನ ಜಾಗೃತಿ’ ಬೀದಿ ನಾಟಕ ಕಾರ್ಯಕ್ರಮ ನಡೀತು.

Read More

ನಡೆದಾಡುವ ದಾರಿಯಿಲ್ಲದೆ ನರಕಯಾತನೆ ಅನುಭವಿಸುತ್ತಿರುವ ಬಾವುಟಿ ಮೂಲೆ ಸುರುಮತ್ತೋಡ್ ನಿವಾಸಿಗಳು

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 17ನೇ ವಾರ್ಡ್‌ನ ಬಾವುಟಿ ಮೂಲೆ ಸುರುಮತ್ತೋಡ್ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 10 ಕುಟುಂಬಗಳ ಬದುಕು ಇಂದು ಆಡಳಿತದ ನಿರ್ಲಕ್ಷ್ಯದ ಸಂಕೇತವಾಗಿ ಮಾರ್ಪಟ್ಟಿದೆ. ಮೂಲಭೂತ ಸೌಲಭ್ಯವೆನಿಸುವ ನಡೆಯಲು ಸರಿಯಾದ ದಾರಿಯೇ ಇಲ್ಲದ ಸ್ಥಿತಿಯಲ್ಲಿ ಈ ಕುಟುಂಬಗಳು ದಿನನಿತ್ಯದ ಜೀವನವನ್ನು ಕಳೆಯುವಂತಾಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಜೀವ ಪಣಕ್ಕಿಡಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ಗರ್ಭಿಣಿಯರು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ತೆರಳುವುದು ಅಸಾಧ್ಯಕ್ಕೆ ಸಮಾನವಾಗಿದ್ದು, ವೃದ್ಧರು ಹಾಗೂ ಭಿನ್ನಚೇತನರು ಮನೆಯೊಳಗೆ…

Read More

ಲೇಬರ್ ಕೋಡ್ ಹೆಸರಿನಲ್ಲಿ ಕಾರ್ಪೊರೇಟ್ ಕೋಡ್ ಜಾರಿ – ಸುನಿಲ್ ಕುಮಾರ್ ಬಜಾಲ್

ಕೇಂದ್ರ ಸರಕಾರವು ದೇಶದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಭಾಧ್ಯತೆಗಳನ್ನು ನಾಶ ಮಾಡಲು, ಕಾರ್ಮಿಕ ಚಳುವಳಿಯನ್ನೇ ಹತ್ತಿಕ್ಕಲು ಹಾಗೂ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡಲು ದೇಶದ ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ರೂಪಿಸಿ ತಕ್ಷಣದಿಂದಲೇ ಜಾರಿಯಾಗುವಂತೆ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದೆ.ಆದ್ದರಿಂದ ಇದು ಕೇವಲ ಲೇಬರ್ ಕೋಡ್ ಅಲ್ಲ ಬದಲಾಗಿ ಕಾರ್ಪೊರೇಟ್ ಕೋಡ್ ಆಗಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು…

Read More

ಮಂಜೇಶ್ವರ: ಸುರೇಂದ್ರನ್ ಸಕ್ರಿಯತೆ ಹೆಚ್ಚಳ – ಬಿಜೆಪಿ ಅಧ್ಯಕ್ಷೆ ಅಶ್ವಿನಿಯ ಅವಕಾಶಕ್ಕೆ ಸವಾಲು?

ಮಂಜೇಶ್ವರ: ಮುಂದಿನ ವಿಧಾನಸಭಾ ಚುನಾವಣೆಗೆ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸಕ್ರಿಯರಾಗುತ್ತಿದ್ದಂತೆ, ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿಯ ಅವಕಾಶ ಕುಗ್ಗುತ್ತಿರುವ ಸೂಚನೆಗಳಿವೆ. ಈ ಕ್ಷೇತ್ರದಲ್ಲೇ ತನಗೆ ಅವಕಾಶ ನೀಡಬೇಕೆಂದು ಅಶ್ವಿನಿ ಪಕ್ಷದ ನಾಯಕರಿಗೆ ಈಗಾಗಲೇ ಮನವಿ ಸಲ್ಲಿಸಿದ್ದರು. ಇದೇ ವೇಳೆ, ಸುರೇಂದ್ರನ್ ಅಭ್ಯರ್ಥಿತ್ವಕ್ಕೆ ಪಕ್ಷದ ಒಂದು ವರ್ಗ ವಿರೋಧ ವ್ಯಕ್ತಪಡಿಸಿದೆ. ಮೂರು ಬಾರಿ ಸೋಲು ಕಂಡ ಸುರೇಂದ್ರನ್ ಬದಲಿಗೆ ಈ ಬಾರಿ ಅಶ್ವಿನಿಗೆ ಅವಕಾಶ ನೀಡಬೇಕೆಂದು ಅವರ ಒತ್ತಾಯವಾಗಿದೆ. ಇದನ್ನು ಮನಗಂಡ…

Read More

ಮಂಜೇಶ್ವರ: ಉಪ್ಪಳ–ಬದಿಯಡ್ಕದಲ್ಲಿ ಕಳ್ಳತನ ಅಟ್ಟಹಾಸ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

ಮಂಜೇಶ್ವರ: ಕುಂಬಳೆ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿರುವ ಮಧ್ಯೆ ಉಪ್ಪಳ ಹಾಗೂ ಬದಿಯಡ್ಕದಲ್ಲಿ ಕಳ್ಳರು ನಗ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಹಮ್ಮದ್ ಮಂಜಿಲ್‌ನ ರುಕ್ಸಾನ ಅವರ ಮನೆಯಿಂದ 23.5 ಪವನ್ ಚಿನ್ನಾಭರಣಗಳು ಕಳವಿಗೀಡಾಗಿದೆ. ಜನವರಿ 15ರಿಂದ 21ರ ನಡುವೆ ಕಳವು ನಡೆದಿದ್ದು, ಮಗಳ ಮದುವೆ ದಿನ ಈ ವಿಷಯ ಗೊತ್ತಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.ಬದಿಯಡ್ಕ ಕನ್ಯಪ್ಪಾಡಿಯ ನಿಲೋಫರ್ ಮಹಲ್‌ನಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು 8,300 ರೂ. ನಗದು ಕಳವು ಮಾಡಿದ್ದಾರೆ. ಫಸೀಲ…

Read More

ಮಂಜೇಶ್ವರ: ಪೈವಳಿಕೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಮಂಜೇಶ್ವರ : ಪೈವಳಿಕೆಯಲ್ಲಿ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವನ್ನಪ್ಪಿದ್ದಾನೆ. ಮೂಲತಃ ಕೊಚ್ಚಿ ಆಲುವಾ ನಿವಾಸಿ ಹಾಗೂ ಕಳೆದ 20 ವರ್ಷಗಳಿಂದ ಪೈವಳಿಕೆ ಮರಿಕೆಯಲ್ಲಿ ವಾಸಿಸುತ್ತಿದ್ದ ಬಾಬು ಕೆ.ಯು (46) ಸಾವನ್ನಪ್ಪಿದ ದುರ್ದೈವಿ. ಈ ಹಿಂದೆ ಟೈಲ್ಸ್ ಹಾಸುವ ಕೆಲಸ ಮಾಡುತ್ತಿದ್ದ ಈತ ಬಳಿಕ ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕನಾಗಿದ್ದಾನೆನ್ನಲಾಗಿದೆ. ಈ ತಿಂಗಳ 19ರಂದು ಸಂಜೆ ಪತ್ನಿ ಮನೆಗೆ ಬಂದಾಗ ಕಾಣೆಯಾಗಿದ್ದ ಬಾಬು, ಬಳಿಕ…

Read More

ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ

ಪುತ್ತೂರು: ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆಯಾಗಿದ್ದು 4 ಆರೋಪಿಗಳು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ, ಆರೋಪಿಗಳಾದ ಮುಹಮ್ಮದ್ ಹರ್ಷದ್ (33), ಮುಹಮ್ಮದ್ ಆರೀಶ್ (31),…

Read More
error: Content is protected !!