Headlines

ಕೈಯಲ್ಲಿ ಮಚ್ಚು ಹಿಡಿದು ಮೊಬೈಲ್ ಅಂಗಡಿಗೆ ನುಗ್ಗಿದ ಯುವಕ; ಪೊಲೀಸರ ವಶಕ್ಕೆ

ಮೂಡಬಿದ್ರೆ, ಜುಲೈ 20: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಖಾಸಗಿ ಬಸ್ ನಿಲ್ದಾಣದಲ್ಲಿ ಯುವಕನೋರ್ವ ಕೈಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಯುವಕನನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಹಾಡಹಗಲೇ ಕೈಯಲ್ಲಿ ಮಚ್ಚು ಹಿಡಿದು ಬಸ್ ನಿಲ್ದಾಣಕ್ಕೆ ಬಂದ ರಾಜೇಶ್, ಅಲ್ಲಿನ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ ಸಿಬ್ಬಂದಿಗೆ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ಹೊರಬಂದು ಮಚ್ಚನ್ನು ಬೆನ್ನಿನ ಭಾಗದಲ್ಲಿ ಇರಿಸಿಕೊಂಡು ಬಸ್ ನಿಲ್ದಾಣದಲ್ಲೇ ಕುಳಿತಿದ್ದಾನೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು….

Read More

ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ, ಜುಲೈ 20: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮಹಾಸಭೆಯು ನಿನ್ನೆ ಸಂಜೆ 4 ಗಂಟೆಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಕಳೆದ ಸಾಲಿನ ವರದಿ ವಾಚನ, 45ನೇ ವರ್ಷದ ಲೆಕ್ಕಪತ್ರ ಮಂಡನೆ ಹಾಗೂ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕಾಗಿ ನೂತನ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆ ನೆರವೇರಿತು. 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಯಾದವ ಬಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಕಮಲಾಕ್ಷ ತೂಮಿನಾಡು ಹಾಗೂ ಕೋಶಾಧಿಕಾರಿಯಾಗಿ ಅಶೋಕ್…

Read More

ಗ್ರಾಹಕರ ಪರ ಐತಿಹಾಸಿಕ ತೀರ್ಪು: ಹಣ ಮರುಪಾವತಿಸಿ ಪರಿಹಾರ ನೀಡಲು ಸೌತ್ ಇಂಡಿಯನ್ ಬ್ಯಾಂಕ್‌ಗೆ ಗ್ರಾಹಕ ಆಯೋಗದ ಆದೇಶ

ಕಾಸರಗೋಡು: ಗ್ರಾಹಕರ ಖಾತೆಯಿಂದ ಕಡಿತಗೊಳಿಸಿದ ಹಣವನ್ನು ಮರುಪಾವತಿಸುವುದರ ಜೊತೆಗೆ, ಉಂಟಾದ ಮಾನಸಿಕ ವೇದನೆ ಹಾಗೂ ಅನಾನುಕೂಲತೆಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆಗೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ಆದೇಶ ನೀಡಿದೆ.ಈ ಆದೇಶವು ಸೌತ್ ಇಂಡಿಯನ್ ಬ್ಯಾಂಕ್, ಸೀತಾಂಗೋಳಿ ಶಾಖೆ ವಿರುದ್ಧ ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು ದಾಖಲಿಸಿದ್ದ ದೂರಿನ ವಿಚಾರಣೆಯ ಬಳಿಕ ಹೊರಬಿದ್ದಿದೆ. ದೂರಿನ ಪ್ರಕಾರ, ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು 2022ರಲ್ಲಿ ಸೌತ್ ಇಂಡಿಯನ್ ಬ್ಯಾಂಕ್‌ನ…

Read More

ವೃತ್ತಿಪರ ಸೌಂದರ್ಯ ತರಬೇತಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬ್ಯೂಟಿ ಸ್ಕಿಲ್ಸ್ ಮಾಸ್ಟರ್‌ಕ್ಲಾಸ್

ಬ್ಯೂಟಿ ಪ್ಲಾನೆಟ್ ಸಂಸ್ಥೆಯು ನೇಚರ್ಸ್ ಎಸೆನ್ಸ್ ಪ್ರೊಫೆಷನಲ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಿದ್ದ ಸೌಂದರ್ಯ ತರಬೇತಿ ಮಾಸ್ಟರ್‌ಕ್ಲಾಸ್ ಜುಲೈ 14ರಂದು ಮಂಗಳೂರಿನ ಹೋಟೆಲ್ ಸಾಫ್ರನ್‌ನಲ್ಲಿ ನಡೆಯಿತು. ಮೇಕಪ್, ಕೇಶವಿನ್ಯಾಸ, ಸೀರೆ ಧರಿಸುವ ಕಲೆ ಹಾಗೂ ಹೈಡ್ರಾ ಫೇಶಿಯಲ್ ತಂತ್ರಗಳ ಕುರಿತು ತಜ್ಞರಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಎಡ್ನಾ ಜಾಥನ್, ಐಶ್ವರ್ಯ ಚಂದ್ರಶೇಖರ್, ಅನ್ವಿತಾ, ಲತಾ ಶಿವಮೊಗ್ಗ ಶ್ರೀಮತಿ ಪ್ರಿಯಾಂಕಾ, ಅಮಿತ್, ಶ್ರೀಮತಿ ಫ್ಲೇವಿ ಗ್ಲಾಡಿಸ್ ಡಿ’ಮೆಲ್ಲೋ ಹಾಗೂ ಶ್ರೀಮತಿ ಲತಾ ಹರೀಶ್ ಉದ್ಘಾಟಿಸಿದರು. ತಜ್ಞರಾದ ESME…

Read More

ಮಾಜೀ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅನುಸ್ಮರಣೆ ಹಾಗೂ ರಕ್ತದಾನ ಶಿಬಿರ

ಮಂಜೇಶ್ವರ : ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿಯವರ ತೃತೀಯ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ ಮಜೀರ್ ಪಳ್ಳದಲ್ಲಿ ಜರುಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರುಗಿದ ಅನುಸ್ಮರಣಾ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸೋಮಪ್ಪ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದು ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಮುಖ್ಯ ಅತಿಥಿಗಳಾಗಿ…

Read More

ಮಸೀದಿಯ ಕಾಣಿಕೆ ಹುಂಡಿ ಕಳ್ಳತನ : ಆರೋಪಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾಸರಗೋಡು : ​ಹೊಸದುರ್ಗದ ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಸಮೀಪವಿರುವ ಬದ್ರಿಯಾ ಮಸೀದಿಯಲ್ಲಿ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಸೀದಿಯಲ್ಲಿ ಇರಿಸಲಾಗಿದ್ದ ಕಾಣಿಕೆ ಹುಂಡಿಯನ್ನು ದುಷ್ಕರ್ಮಿಯೊಬ್ಬ ಕೆಡವಿ, ಅದಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಯ ದೃಶ್ಯವನ್ನು ಪೊಲೀಸರು ಇದೀಗ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ಈ ವ್ಯಕ್ತಿಯ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತರೆ,…

Read More

ಬಂಗ್ರಮಂಜೇಶ್ವರದಲ್ಲಿ ಭೂಕುಸಿತ, ಮನೆ-ಬಾವಿ ನಾಶ: ಕುಟುಂಬ ಸ್ಥಳಾಂತರ

​ಮಂಜೇಶ್ವರ: ಬಂಗ್ರಮಂಜೇಶ್ವರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದು, ಕನಿಲ ಭಂಡಾರ ನಿಲಯದ ಪುರುಷೋತ್ತಮ ಅವರ ಮನೆಗೆ ಭಾರಿ ಹಾನಿಯಾಗಿದೆ. ಶುಕ್ರವಾರ ಮಣ್ಣು ಕುಸಿದು ಬಾವಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದರೆ, ಶನಿವಾರ ಮುಂಜಾನೆ ಮತ್ತೆ ಗುಡ್ಡ ಕುಸಿದು ಮನೆಯ ಅಡುಗೆಕೋಣೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಆತಂಕಗೊಂಡ ಎಂಟು ಮಂದಿಯ ಕುಟುಂಬವನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಸುತ್ತಮುತ್ತಲಿನ ಮನೆಗಳಿಗೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಮತ್ತು…

Read More

ಮನೆಯ ಸಿಟ್ ಔಟ್‌ನಲ್ಲಿ ಪ್ರವಾಸಿ ಯುವಕನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

​ಕಾಸರಗೋಡು : ಚಿತ್ತಾರಿ ಪೋಯ್ಯಕ್ಕರ ಕಲ್ಲಿಂಗಾಲದ ನಿವಾಸಿ ಕೆ.ವಿ. ಕೃಪೇಶ್ (38) ಎಂಬುವವರು ಶನಿವಾರ ಮುಂಜಾನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಗಲ್ಫ್‌ನಿಂದ ಊರಿಗೆ ಮರಳಿದ್ದ ಕೃಪೇಶ್, ಇಂದು ಬೆಳಗಿನ ಜಾವ 5:30 ರ ಸುಮಾರಿಗೆ ಮನೆಯ ಸಿಟ್ ಔಟ್‌ನಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮನೆಯವರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಇನ್‌ಕ್ವೆಸ್ಟ್ ನಡೆಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮಧ್ಯಾಹ್ನ…

Read More

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ!

ಉಪ್ಪಳ : ಜೋಡುಕಲ್ಲುವಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಗುರುಪ್ರಸಾದ್ ಮತ್ತು ತುಳಸಿ ದಂಪತಿಗಳ ಒಂದೂವರೆ ವರ್ಷದ ಪುತ್ರ ರಿತುರಾಜ್ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಶನಿವಾರ ಮಧ್ಯಾಹ್ನ ತಾಯಿ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದಾಗ, ಅನಿರೀಕ್ಷಿತವಾಗಿ ಬಂದ ನಾಯಿ ಮಗುವನ್ನು ಕಚ್ಚಿ ಎಳೆದಾಡಿದೆ. ಮಗುವಿನ ಚೀರಾಟ ಕೇಳಿ ತಾಯಿ ಕೂಡಲೇ ಓಡಿಬಂದಾಗ ನಾಯಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಬೀದಿ…

Read More

ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮಳಿಗೆಗೆ ನುಗ್ಗಿದ ಕಾರು

​ಮಂಜೇಶ್ವರ: ಇಲ್ಲಿಯ ಕಟ್ಟೆ ಬಜಾರ್ ತಿರುವಿನಲ್ಲಿ ಇಂದು ಅನಿರೀಕ್ಷಿತ ಅಪಘಾತವೊಂದು ಸಂಭವಿಸಿದೆ.ಹೊಸಂಗಡಿಯಿಂದ ಮಂಜೇಶ್ವರದತ್ತ ತೆರಳುತ್ತಿದ್ದ ಕಾರಿನ ಒಳಗೆ ಹಠಾತ್ತನೆ ಇಲಿಯೊಂದು ಕಾಣಿಸಿಕೊಂಡಿದ್ದೇ ಚಾಲಕನ ಗಾಬರಿಗೆ ಕಾರಣವಾಯಿತು. ಚಾಲಕನ ಕಾಲಿನ ಬಳಿ ಇಲಿ ಚಲಿಸುತ್ತಿದ್ದಂತೆಯೇ ಕಸಿವಿಸಿಗೊಂಡ ಚಾಲಕ ವಾಹನದ ಮೇಲಿನ ಹಿಡಿತ ಕಳೆದುಕೊಂಡರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು, ತದನಂತರ ಸಮೀಪವಿದ್ದ ಹಳೆಯ ಕಟ್ಟಡದ ಟೈಲರ್ ಅಂಗಡಿಯೊಳಗೆ ನುಗ್ಗಿತು. ಅದೃಷ್ಟವಶಾತ್, ಫೋನ್ ಮಾತನಾಡಲು ದ್ವಿಚಕ್ರ ವಾಹನದಿಂದ ಇಳಿದಿದ್ದ ಸವಾರ ಕ್ಷಣಾರ್ಧದಲ್ಲಿ…

Read More
error: Content is protected !!