ಗಣರಾಜ್ಯೋತ್ಸವದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ‘ಶುಚಿತ್ವ ಮಂಜೇಶ್ವರ’ ಟೌನ್ ಕ್ಲೀನಿಂಗ್ ಅಭಿಯಾನಕ್ಕೆ ಚಾಲನೆ

ಮಂಜೇಶ್ವರ :ಗಣರಾಜ್ಯೋತ್ಸವದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ‘ಶುಚಿತ್ವ ಮಂಜೇಶ್ವರ’ ಟೌನ್ ಕ್ಲೀನಿಂಗ್ ಅಭಿಯಾನಕ್ಕೆ ಚಾಲನೆ ದೊರಕಿತು.ಜನಪ್ರತಿನಿಧಿಗಳು, ಪಂಚಾಯತು ಅಧಿಕಾರಿಗಳು, ರಾಜಕೀಯ ನೇತಾರರು, ಯುವಜನ ಸಂಘಟನೆಗಳು, ಫ್ಲ್ಯಾಟ್ ಅಸೋಸಿಯೇಷನ್‌ಗಳು, ಸ್ವಯಂಸೇವಕ ಸಂಘಟನೆಗಳು, ಹಸಿರು ಕರ್ಮಸೇನೆ, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಕುಟುಂಬಶ್ರೀ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿಯಾನಕ್ಕೆ ಚಾಲನೆ ದೊರಕಿತು. ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಯ್ಯಿದ್ ಸೈಫುಲ್ಲಾ ತಂಙಲ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಬಸೀರ್…

Read More

ಬೈಂದೂರಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟನೆ

ಉಡುಪಿ:ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಬೈಂದೂರಿನಲ್ಲಿ ನಡೆಯಿತು.ಕಾಲದ ಬದಲಾವಣೆಗೆ ತಕ್ಕಂತೆ ಹೈನುಗಾರಿಕೆಯನ್ನು ಮುಂದುವರಿಸಿದರೆ ಲಾಭದಾಯಕವಾಗಿಸಲು ಸಾಧ್ಯವಾಗುತ್ತದೆ.ಬೈಂದೂರು ಉತ್ಸವ ಬೈಂದೂರು ಜನರ ಜೀವನ ಕಟ್ಟಿಕೊಡುವ ಉದ್ದೇಶ ಒಳಗೊಂಡಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ, ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬೈಂದೂರು ಉತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ…

Read More

ಮಧುರೈಯ ‘5 ರೂ ಪರೋಟ’ ಅಭಿಮಾನಿಗೆ ರಜನಿಕಾಂತ್ ಗೌರವ: ಮನೆಗೆ ಆಹ್ವಾನಿಸಿ ಚಿನ್ನದ ಸರ ಉಡುಗೊರೆ

ಚೆನ್ನೈ: ಇತ್ತೀಚೆಗೆ ಮಧುರೈನ ಬೀದಿ ಬದಿಯಲ್ಲಿ ಸಣ್ಣ‌ ಹೊಟೇಲ್ ನಡೆಸುತ್ತಿರುವ ತಮ್ಮ ಕಟ್ಟಾ ಅಭಿಮಾನಿಯೊಬ್ಬರನ್ನು ಭೇಟಿಯಾದ ಸೂಪರ್‌ಸ್ಟಾರ್ ರಜನಿಕಾಂತ್ ಆತನ ಗೌರವಾನ್ವಿತ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.ಕಳೆದ 15 ವರ್ಷಗಳಿಂದ ಮಧುರೈನ ರಸ್ತೆ ಬದಿಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿರುವ ನಟ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ ಶೇಖರ್, 15 ವರ್ಷಗಳ ಹಿಂದೆ ರಜನೀಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು ಅಂದಿನಿಂದ ಇಂದಿನವರೆಗೂ ಅದೇ 5 ರೂಪಾಯಿ ಬೆಲೆಯಲ್ಲಿ…

Read More

ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಸಿನಿಮಾಗಳ ಕಡೆಗಣನೆ: ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಆರೋಪ

ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನ‌ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.ರಾಜ್ಯ ಸರ್ಕಾರವು ತುಳು ಮತ್ತು ಇತರ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ಮತ್ತು ಸಹಾಯಧನ ನೆರವನ್ನು ತುಳು ಚಿತ್ರಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಒಂದು ಪ್ರಾದೇಶಿಕ ಭಾಷಾ ಚಿತ್ರಕ್ಕೆ ಪ್ರಶಸ್ತಿ ನೀಡುತ್ತದೆ. ತ್ರೈಮಾಸಿಕ ಪ್ರಶಸ್ತಿಗಳನ್ನು ಪಡೆಯುವ ಈ ಚಿತ್ರಗಳು ಸ್ವರ್ದಿಸಿವೆ. 16ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದಿದ್ದವು….

Read More

ಕೋಡಿಬೆಂಗ್ರೆ ಸಾಗರದದಲ್ಲಿ ಪ್ರವಾಸಿ ದೋಣಿ ಮುಳುಗಡೆ: ಹಲವು ಮಂದಿ ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ!

ಉಡುಪಿ:ಪ್ರವಾಸಿ ದೋಣಿಯೊಂದು ಸಮುದ್ರ ಮಧ್ಯೆ ಮುಳುಗಿದ ಪರಿಣಾಮ ಇಬ್ಬರು ಗಂಭೀರ ಸೇರಿದಂತೆ ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಸೋಮವಾರ ಬೆಳಿಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ.ರೆಸಾರ್ಟ್ ಲ್ಲಿ ಉಳಿದಿದ್ದ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇದರಲ್ಲಿ ಸುಮಾರು 10-15 ಪ್ರವಾಸಿಗರಿದ್ದರು. ಇವರು ಯಾರು ಕೂಡ ಲೈಫ್ ಜಾಕೆಟ್ ಹಾಕಿಲ್ಲ ಎಂದು ತಿಳಿದುಬಂದಿದೆ. ನೀರಿನಲ್ಲಿ ದೋಣಿ ಅಕಸ್ಮಿಕವಾಗಿ ಮುಳುಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದರೆಂದು ತಿಳಿದುಬಂದಿದೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇದರಲ್ಲಿ ನಾಲ್ವರು…

Read More

ಮನೆಗೆ ನುಗ್ಗಿದ ಕಳ್ಳರು: ಕಪಾಟು ಜಾಲಾಡಿ ಮೊಬೈಲ್, ವಾಚ್ ಕಳವು

ಉಳ್ಳಾಲ:ಕಳ್ಳರು ಮನೆಗೆ ನುಗ್ಗಿ ಕಪಾಟು ಜಾಲಾಡಿ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದ ಘಟನೆ ತಲಪಾಡಿ ಗ್ರಾಮ ಕೆಸಿನಗರ ಪಲಾಹ್ ಸ್ಕೂಲ್ ಬಳಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.ಕೆಸಿನಗರ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ನಡೆದಿದೆ.ಎಲಿಯಾರ್ ಪದವು ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು ಕಳೆದ 25 ವರ್ಷ ಗಳಿಂದ ಸೌದಿ ಅಲ್ ಕೋಬಾರ್ ನಲ್ಲಿ ಉದ್ಯೋಗ ದಲ್ಲಿ ಇದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ ಝೀನತ್ ಪುತ್ರ ಇಝಾಮ್ ಹಾಗೂ ಪುತ್ರಿ ಸಫಾ ಈ ಮನೆಗೆ…

Read More

ಹಾಸನ ಜಿಲ್ಲೆಯ ಹಿಂದೂ ಸಮಾಜೋತ್ಸವದಲ್ಲಿ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗೆ ನಿರ್ಬಂಧ ವಿಧಿಸಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ

ಹಾಸನ : ಶ್ರವಣಬೆಳಗೊಳ ಹಾಗೂ ಅರಸೀಕೆರೆಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಭಾಷಣಕಾರರಾಗಿ ಭಾಗವಹಿಸಬೇಕಿದ್ದ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗೆ ಹಾಸನ ಜಿಲ್ಲಾ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಆದೇಶಿಸಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿರುವ ಸಂಬಂಧ ವಿವಿಧ ಜಿಲ್ಲೆಗಳಲ್ಲಿ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲಾಗಿದು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶರಣ್ ಪಂಪ್‌ವೆಲ್ ಹಾಸನ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Read More

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ : ರಾಷ್ಟ್ರಪತಿಗಳಿಂದ ತ್ರಿವರ್ಣ ಧ್ವಜಾರೋಹಣ

ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಸಿ. ಪಿ. ರಾಧಾಕೃಷ್ಣನ್ ಸಾಥ್ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್…

Read More

ಅಶೋಕ ಚಕ್ರವನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದ ಎಂದು ಬಣ್ಣಿಸಿದ ಗಗನಯಾತ್ರಿ ಶುಭಾಂಶು ಶುಕ್ಲ

ಬೆಂಗಳೂರು : ಭಾರತದ ಎರಡನೇ ಗಗನಯಾತ್ರಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಳಿದುಕೊಂಡ ದೇಶದ ಮೊದಲ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪದಕ ಅಶೋಕ ಚಕ್ರವನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದ ಎಂದು ಬಣ್ಣಿಸಿದ್ದಾರೆ. 77ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸೋಮವಾರ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. ಭಾರತೀಯ ಸೇನೆಯಲ್ಲಿ ಪರಮವೀರ ಚಕ್ರ ಹಾಗೂ ಅಶೋಕ ಚಕ್ರ ಸರ್ವಶ್ರೇಷ್ಠ ಪದಕಗಳಾಗಿವೆ. ಯುದ್ಧಕಾಲದಲ್ಲಿನ ವೀರತೆಗೆ ಪರಮವೀರ ಚಕ್ರ…

Read More

ಬೆಳ್ತಂಗಡಿ ನಡ ಕನ್ಯಾಡಿಯಲ್ಲಿ ಅರಣ್ಯ ಇಲಾಖೆಯ ಬೋನಿಗೆ ಚಿರತೆ ಸಿಲುಕಿ ಸೆರೆ

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ‌ ಬೆಳ್ತಂಗಡಿ ತಾಲೂಕಿನ ನಡ ಕನ್ಯಾಡಿ ಪರಿಸರ ಪ್ರದೇಶದಲ್ಲಿ ನಡೆದಿದೆ.ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿ, ಚಿರತೆ ಹೋಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಬೋನುಗಳನ್ನು ಇಟ್ಟಿತ್ತು. ಇದರ ಫಲವಾಗಿ ಇದೀಗ ಒಂದು ಚಿರತೆ ಬೋನಿಗೆ ಸಿಲುಕಿದೆ. ಈ ಪ್ರದೇಶದಲ್ಲಿ ಚಿರತೆಯ ಓಡಾಟ ತೀವ್ರವಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ, ಹಲವು ಸಾಕು ಪ್ರಾಣಿಗಳ…

Read More
error: Content is protected !!