ಅಂಬಲಪಾಡಿ ಮಹಾಕಾಳಿ ಸನ್ನಿಧಿಯಲ್ಲಿ ಪುಷ್ಪ ವೈಭವ: ಭಕ್ತರನ್ನು ಸೆಳೆದ ಚಿಕ್ಕಬಳ್ಳಾಪುರದ ಭಕ್ತರ ಸೇವೆ

ಉಡುಪಿ: ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪುಷ್ಪಾಲಂಕಾರ ನೆರವೇರಿದ್ದು, ದೇವಾಲಯವು ವರ್ಣರಂಜಿತ ಹೂವಿನ ಅಲಂಕಾರದಿಂದ ಕಂಗೊಳಿಸಿತು. ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣವನ್ನು ಅಲಂಕರಿಸಲಾಗಿದ್ದು, ಸಾವಿರಾರು ಭಕ್ತರ ಗಮನ ಸೆಳೆಯಿತು. ಚಿಕ್ಕಬಳ್ಳಾಪುರದ ಭಕ್ತವೃಂದವು ಹಲವು ವರ್ಷಗಳಿಂದ ಪ್ರತಿವರ್ಷ ಭಕ್ತಿಭಾವದಿಂದ ಈ ವಿಶೇಷ ಪುಷ್ಪಾಲಂಕಾರ ಸೇವೆಯನ್ನು ಸಲ್ಲಿಸುತ್ತಿದ್ದು, ಈ ಬಾರಿಯೂ ತಮ್ಮ ಕೈಯಾರೆ ದೇವಾಲಯವನ್ನು ಅಲಂಕರಿಸಿದರು. ದೇವಿಯ ಅನುಗ್ರಹದಿಂದ ತಮ್ಮ ಬದುಕಿನಲ್ಲಿ ಶುಭ ಬದಲಾವಣೆಗಳಾಗಿವೆ…

Read More

ರಾಶಿ ರಾಶಿ ಬೂತಾಯಿ ಮೀನು.ಉಳ್ಳಾಲದ ಸಮುದ್ರ ತೀರದವರಿಗೆ ಮೀನಿನ ಸುಗ್ಗಿ

ಉಳ್ಳಾಲ: ಒಂದೇ ಸಮನೆ ಬೂತಾಯಿ ಮೀನಿನ ಸಾಲುಗಳು ದಡಕ್ಕೆ ಅಪ್ಪಳಿಸಿದ್ದು, ಉಳ್ಳಾಲ ಸಮುದ್ರ ತೀರದ ಮಂದಿಗೆ ಬೂತಾಯಿ ಮೀನಿನ ಸುಗ್ಗಿಯಾಗಿದೆ.ದೋಣಿಯೊಂದು ಸಾಗುವ ಸಂದರ್ಭ ಅದರಿಂದ ಕೇಳಿಬಂದ ಸದ್ದಿನಿಂದ ಸಾಲುಸಾಲಾಗಿ ಸಾಗುವ ಬೂತಾಯಿ ಮೀನುಗಳು ಹಾದಿ ಬದಲಿಸಿದ್ದು, ಪರಿಣಾಮ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಮಧ್ಯಾಹ್ನ 11 ರವೇಳೆಗೆ ಅಪ್ಪಳಿಸಿದ ಮೀನಿನ ರಾಶಿಯನ್ನು ಗಮನಿಸಿದ ಸ್ಥಳೀಯರು ನಾಮುಂದು ತಾ ಮುಂದು ಅನ್ನುತ್ತಾ ಅಲೆಗಳ ಅಬ್ಬರದ ನಡುವೆಯೂ ಮೀನನ್ನು ಸಂಗ್ರಹಿಸಿದರು. ಹಲವರು ವ್ಯವಹಾರವನ್ನು ನಡೆಸಿದರೆ, ಇನ್ನು ಕೆಲವರು ಮನೆಯಲ್ಲಿ ಸಾರು ಮಾಡಿದರು….

Read More

ನವೀಕೃತ ಬಂಟ್ವಾಳ ರೈಲ್ವೆ ನಿಲ್ದಾಣ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ: ಕೊಂಕಣ ರೈಲ್ವೆ ಭಾರತ ರೈಲ್ವೆ ಜೊತೆ ವಿನಿಯೋಗವಾಗಲಿ ಸಂಸದ ಕ್ಯಾ. ಚೌಟ

ಬಂಟ್ವಾಳ ರೈಲ್ವೆ ನಿಲ್ದಾಣವೂ ಸೇರಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಮರುಅಭಿವೃದ್ಧಿಗೊಂಡ ರಾಷ್ಟ್ರದ 75 ರೈಲ್ವೆ ನಿಲ್ದಾಣಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್ ನ ಜಲಂಧರ್ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬಂಟ್ವಾಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಹಾಕಲಾದ ಬೃಹತ್ ಎಲ್.ಇ.ಡಿ. ಪರದೆಯಲ್ಲಿ ಈ ದೃಶ್ಯವನ್ನು ನೇರಪ್ರಸಾರದ ಮೂಲಕ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಹಿತ ಪ್ರಮುಖರು ವೀಕ್ಷಿಸಿದರು. ನೈಋತ್ಯ ರೈಲ್ವೆಯ ಮೈಸೂರು…

Read More

ರೈಲ್ವೇ ಮುತ್ತಪ್ಪ ಸನ್ನಿಧಿಯಲ್ಲಿ ಭಕ್ತಿಭಾವದ ರಾಮಾಯಣ ಮಾಸ ಆಚರಣೆ

ಮಂಗಳೂರು:ಆಷಾಢ ಮಾಸವನ್ನು ರಾಮಾಯಣ ಮಾಸವಾಗಿ ಆಚರಿಸುವ ಸಂಪ್ರದಾಯಕ್ಕೆ ಅನುಗುಣವಾಗಿ ನಗರದ ರೈಲ್ವೇ ಮುತ್ತಪ್ಪ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಗಸ್ಟ್ 16ರವರೆಗೆ ರಾಮಾಯಣ ಮಾಸದ ಆಚರಣೆಗಳು ಭಕ್ತಿಭಾವದಿಂದ ನಡೆಯಲಿವೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಆಷಾಢ ಮಾಸವನ್ನು ರಾಮಾಯಣ ಮಾಸವೆಂದು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಮನೆಗಳು ಹಾಗೂ ದೇವಾಲಯಗಳಲ್ಲಿ ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸರ ರಾಮಚರಿತಮಾನಸ ಪಾರಾಯಣ ನಡೆಸುವುದು ಸಂಪ್ರದಾಯವಾಗಿದೆ. ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಹನುಮಂತರ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತಿದ್ದು,…

Read More

ವ್ಯಾಯಾಮ ಶಾಲೆಯ ಬೀಗ ಮುರಿದು ಕಳವು; ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

​ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ​ಇಂದು ಶನಿವಾರ ಸಂಜೆ ನಡೆಯಲಿರುವ ವಿಶೇಷ ಪೂಜೆಯ ಸಿದ್ಧತೆಗಾಗಿ ವ್ಯಾಯಾಮ ಶಾಲೆಯ ಪದಾಧಿಕಾರಿಯೊಬ್ಬರು ಇಂದು ನಸುಕಿನ ಜಾವ 5 ಗಂಟೆಗೆ ಸ್ಥಳಕ್ಕೆ ಆಗಮಿಸಿದಾಗ ಕಳವು ನಡೆದ ವಿಷಯ ಬೆಳಕಿಗೆ ಬಂದಿದೆ. ದುಷ್ಕರ್ಮಿಯು ವ್ಯಾಯಾಮ ಶಾಲೆಯ ಬಾಗಿಲನ್ನು ಮುರಿದು ಒಳನುಗ್ಗಿ, ಕಾಣಿಕೆ ಡಬ್ಬಿಯನ್ನು ದೋಚಿದ್ದಾನೆ. ಬಳಿಕ ಹಣವನ್ನು ದೋಚಿದ ಕಳ್ಳ, ಖಾಲಿ ಡಬ್ಬಿಯನ್ನು ವ್ಯಾಯಾಮ…

Read More

ಸೌದಿಯಿಂದ ಕನ್ನಡಿಗನ ಸುವರ್ಣ ಸಾಧನೆ: NEET–2026 ವಿದೇಶಿ ವಿಭಾಗದ ರಾಜ್ಯ ಟಾಪರ್ ಆಯಾನ್ ಯೂಸುಫ್

ಅಲ್ ಜುಬೈಲ್ (ಸೌದಿ ಅರೇಬಿಯಾ), ಜುಲೈ 2026: ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವೊಂದನ್ನು ಕನ್ನಡಿಗ ವಿದ್ಯಾರ್ಥಿ ಮೊಹಮ್ಮದ್ ಆಯಾನ್ ಯೂಸುಫ್ ಕೊಳ್ನಾಡು ನಿರ್ಮಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 16ರಂದು ಪ್ರಕಟಿಸಿದ ಪರಿಷ್ಕೃತ NEET UG–2026 ಫಲಿತಾಂಶದಲ್ಲಿ ಆಯಾನ್ 99.9253 ಪರ್ಸೆಂಟೈಲ್ ಅಂಕ ಗಳಿಸಿ, ವಿದೇಶಿ ವಿಭಾಗದ ರಾಜ್ಯವಾರು ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.ಆಯಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮ ಮೂಲದ…

Read More

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯುವತಿಯರು ಠಾಣೆಗೆ ಹೋಗಲು ಹೆದರುತ್ತಿದ್ದಾರೆ : ಸತೀಶ್‌ ಕುಂಪಲ

ಉಳ್ಳಾಲ: ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪುತ್ತೂರಿನ ಯುವತಿ ಪ್ರಕರಣದಲ್ಲಿ ಮನೆಯವರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಯುವತಿಯರು ಪೊಲೀಸ್‌ ಠಾಣೆಗೆ ಹೋಗುವ ಧೈರ್ಯವನ್ನೇ ಕಳೆದುಕೊಂಡಿದ್ದಾರೆ. ಪ್ರಿಯಾಂಕ್‌ ಖರ್ಗೆ ರಾಜ್ಯದ ಗೃಹಖಾತೆಯನ್ನು ಸರಿಯಾಗಿ ನಿಭಾಯಿಸುವ ಅವಶ್ಯಕತೆಯಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಹತ್ಯೆಯಾದ ಲಾವಣ್ಯಳ ಶೌಮಹಜರು ನಡೆಯುತ್ತಿದ್ದ ದೇರಳಕಟ್ಟೆಯ ಕೆ.ಎಸ್‌ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದ ಜತೆಗೆ ಮಾತನಾಡಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉಂಟಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ತಿಂಗಳ…

Read More

ಇರಾನ್ ಮೇಲೆ ಅಮೆರಿಕ ದಾಳಿ ತೀವ್ರ: ಸೇತುವೆ, ರೈಲು ನಿಲ್ದಾಣಗಳ ಧ್ವಂಸ

ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಗಳು ಮತ್ತಷ್ಟು ತೀವ್ರಗೊಂಡಿದ್ದು, ಸತತ ಆರು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಗುರುವಾರ ರಾತ್ರಿ ಸೇತುವೆಗಳು, ರೈಲು ನಿಲ್ದಾಣಗಳು, ವಿದ್ಯುತ್ ಘಟಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆಗ್ನೇಯ ಇರಾನ್‌ನ ಖಮೀರ್ ಕೌಂಟಿಯಲ್ಲಿ ಬಂದರ್ ಅಬ್ಬಾಸ್–ಶಿರಾಜ್ ಸಂಪರ್ಕ ಕಲ್ಪಿಸುವ ಗೆಬೈಲ್ ಹಾಗೂ ಕಪೂರೆಸ್ತಾನ್ ಸೇತುವೆಗಳು ದಾಳಿಯಲ್ಲಿ ಧ್ವಂಸಗೊಂಡಿವೆ ಎನ್ನಲಾಗಿದೆ. ಇದೇ ವೇಳೆ ರಸ್ತೆ, ರೈಲು ಮಾರ್ಗಗಳು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೂ ಅಮೆರಿಕ…

Read More

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು. ಲಯನ್ಸ್ ಜಿಲ್ಲೆ 317 ಡಿ ಜಿಇಟಿ (GET) ಸಂಯೋಜಕರಾದ ಲಯನ್ ಜಗದೀಶ್ ಎಡಪಡಿತಾಯ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ, ನೂತನ ಅಧ್ಯಕ್ಷೆ ಶ್ವೇತಾ ರವಿಕುಮಾರ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ತಂಡಕ್ಕೆ ಶುಭ ಹಾರೈಸಿ, ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಚಾರ್ಟರ್…

Read More

ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿಯ ಮಾಸಿಕ ಸಭೆ ರಾಜ್ಯ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಭಾಗಿ – ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾದ ರಹಿಮಾನ್ ಬೋಳಿಯಾರ್‌ಗೆ ಸನ್ಮಾನ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಮಂಗಳೂರು ನಗರ ಜಿಲ್ಲಾ ಸಮಿತಿಯ ಮಾಸಿಕ ಸಭೆಯು ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಎಸ್.ಡಿ.ಟಿ.ಯು ಕರ್ನಾಟಕ ರಾಜ್ಯ ಉಪಾಧ್ಯಕ್ಷರು ಹಾಗೂ ನೂತನ ಜಿಲ್ಲಾ ಉಸ್ತುವಾರಿಯಾದ ವಿಕ್ಟರ್ ಮಾರ್ಟಿಸ್ ಅವರು ವೀಕ್ಷಕರಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ವತಿಯಿಂದ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಮಾತನಾಡಿದ ವಿಕ್ಟರ್ ಮಾರ್ಟಿಸ್, ಸಂಘಟನೆಯ ಬಲವರ್ಧನೆ, ಅಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆ,…

Read More
error: Content is protected !!