ಫೆ14 ಮತ್ತು 15ರಂದು ಜಪ್ಪಿನಮೊಗರಿನಲ್ಲಿ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಜಾತ್ರೆ

ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕ್ಕೆನ್ನುವ ಉದ್ದೇಶದಿಂದ ಜಯ-ವಿಜಯಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಇವರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ ೧೪ ಮತ್ತು ೧೫ ರಂದು ನಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮಿತಿಯಯ ಗೌರವಾಧ್ಯಕ್ಷರಾದ…

Read More

ಬೈಕ್ ಕಳ್ಳತನ ಆರೋಪ: ಮರಕ್ಕೆ ಕಟ್ಟಿ ಇಬ್ಬರಿಗೆ ಹಲ್ಲೆ

ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ವ್ಯಕ್ತಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಾ-ಮುಗ್ಗ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ದಿನಾಂಕ 20-01-2026 ರಂದು ಬೆಳಗ್ಗಿನ ಜಾವ 02.10 ರಿಂದ 02.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ…

Read More

ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ, 2026.ಫೆಬ್ರವರಿ 22ಕ್ಕೆ

ಡಾ| ವಾವನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ “ಸೀತಮ್ಮ ಪುರುಷ ನಾಯಕ ಸ್ಮಾರಕ” ಕನ್ನಡ ಭವನ ಗ್ರಂಥಾಲಯ(ರಿ.223/2008) ಇದರ ಅಂಗ ಸಂಸ್ಥೆಯಾದ, ಡಾ| ಮಾನಸ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಕರ್ನಾಟಕ ಸರಕಾರ ಇವರಿಂದ 2.2.2025 ರಂದು ಉದ್ಘಾಟನೆಗೊಂಡ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವ ದ ಅಂಗವಾಗಿ ಆಯೋಜಿಸಲಿರುವ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026 ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ”ಚುಟುಕು ಯುಗಾಚಾರ್ಯ ಡಾ| ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ 22.02.2026…

Read More

ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ – ಸಮಾರೋಪ ಸಮಾರಂಭ

ಪಟ್ಲ ಫೌಂಡೇಶನ್ (ರಿ) ಮಂಗಳೂರು, ವಿಟ್ಲ ಘಟಕದ ವತಿಯಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಯಕ್ಷದ್ರುವ ಯಕ್ಷ ಶಿಕ್ಷಣ – ಯಕ್ಷಗಾನ ಅಭ್ಯಾಸ ತರಗತಿಯ ಸಮಾರೋಪ ಸಮಾರಂಭ ದಿನಾಂಕ 23-01-2026 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶಾಲಾ ಸಭಾಂಗಣದಲ್ಲಿ ಜರುಗಿತು. ಅತಿಥಿಗಳಾಗಿ ಭಾಗವಹಿಸಿದ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, “ಅವಕಾಶ ವಂಚಿತ ಸರಕಾರಿ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿರುವ ಯಕ್ಷದ್ರುವ ಯಕ್ಷ ಶಿಕ್ಷಣವು ಯಕ್ಷಗಾನದ ಅರಿವಿನ ಜೊತೆಗೆ ಸಂಸ್ಕಾರ ಭರಿತ ಜೀವನವನ್ನು ಕಟ್ಟಿಕೊಡುವುದರಲ್ಲಿ…

Read More

ಪುಷ್ಪ ಕಾಶಿ ಕದ್ರಿ ಉದ್ಯಾನವನದಲ್ಲಿ ಕಣ್ಮನ ಸೆಳೆಯುವ ವಂದೇ ಭಾರತ್ ರೈಲಿನ ಪ್ರತಿಕೃತಿ … …? ಏನಿದೆ ಬೇರೆ ಬೇರೆ ವಿಶೇಷ

ದ.ಕ. ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನದಲ್ಲಿ ಜ.23 ರಿಂದ 26ತನಕ ಪುಷ್ಪ ಮೇಳ ನಡೆಯಲಿದ್ದು ಅದಕ್ಕೆ ನಿನ್ನೆ ಚಾಲನೆ ಸಿಕ್ಕಿತ್ತು . ಈ ಬಾರಿ ಬಗೆಬಗೆಯ ಹೂವುಗಳಿಂದ ತಯಾರಿಸಲಾದ ವಂದೇ ಭಾರತ್ ರೈಲಿನ ಪ್ರತಿಕೃತಿ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.ಈ ರೈಲು 3 ಬೋಗಿಗಳನ್ನು ಹೊಂದಿದ್ದು, 24 ಅಡಿ ಉದ್ದ ಇದೆ. ರೈಲಿನ ಹಳಿ…

Read More

ತುಳು ಚಿತ್ರರಂಗದಲ್ಲಿ ಹೊಸ ಧಾಖಲೆ ಬರೆಯಲು ಅಸ್ತ್ರ ಪ್ರೊಡಕ್ಷನ್ “ಕಟ್ಟೆಮಾರ್” ಸಿನೆಮಾ ಇಂದು ಬಿಡುಗಡೆ

ಮಂಗಳೂರು: ಅಸ್ತ್ರ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ ‘ಕಟ್ಟೆಮಾರ್’ ಸಿನಿಮಾದ ಅಧಿಕೃತ ಬಿಡುಗಡೆ ಕಾರ್ಯಕ್ರಮ ಶುಕ್ರವಾರ (ಜ.23) ನಗರದ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಟ್ಟೆಮಾರ್‌ನ ಮಣ್ಣಿನ ಸುವಾಸನೆ ಹಾಗೂ ದೈವಾನುಗ್ರಹದ ಹಿನ್ನೆಲೆಯ ಕಾರಣಿಕತೆಯನ್ನು ಪ್ರತಿಬಿಂಬಿಸುವ ಚಿತ್ರ ಇದಾಗಿದ್ದು, ಯುವ ನಿರ್ದೇಶಕರು ಅತ್ಯಂತ ಸಮರ್ಪಕವಾಗಿ ಸಿನಿಮಾವನ್ನು ರೂಪಿಸಿದ್ದಾರೆ ಎಂದು ಪ್ರಶಂಸಿಸಿದರು. ಕಟ್ಟೆಮಾರ್ ಕ್ಷೇತ್ರದ ಮನೋಜ್ ಕಟ್ಟೆಮಾರ್ ಮಾತನಾಡಿ, ದೈವ ದೇವರ ಅನುಗ್ರಹ ಹಾಗೂ ನಂಬಿಕೆಯ…

Read More

ಕುಂಬಳೆಯಲ್ಲಿ ಯುವ ವಕೀಲೆಯ ಮನೆಗೆ ಭಾರೀ ಕಳ್ಳತನ: ದೇವಸ್ಥಾನ ಕಳ್ಳತನ ಸೇರಿ 25ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಬಂಧನ; ಜಿಲ್ಲೆಯಲ್ಲಿ ಸರಣಿ ಕಳ್ಳತನಗಳ ಹಿಂದಿನ ಸಂಪರ್ಕದ ತನಿಖೆ ಮುಂದುವರಿಕೆ

ಕುಂಬಳೆ: ನಾಯಿಕ್ಕಾಪ್ಪಲ್ಲಿ ಯುವ ವಕೀಲೆಯ ಮನೆಗೆ ನಡೆದ ಭಾರೀ ಕಳ್ಳತನ ಪ್ರಕರಣದಲ್ಲಿ ಆರೋಪಿ ಪೊಲೀಸರಿಂದ ಬಂಧನ. ಜಿಲ್ಲೆಯಲ್ಲಿನ ದೇವಸ್ಥಾನ ಕಳ್ಳತನ ಪ್ರಕರಣಗಳ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿದ್ದ ಕರ್ನಾಟಕ ಮೂಲದ ಕಲಂದರ್ ಇಬ್ರಾಹಿಂ (42)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.2024ರ ನವೆಂಬರ್ 4ರ ಮುಂಜಾನೆ ಮಾನ್ಯದಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಸುಮಾರು ₹6 ಲಕ್ಷ ಮೌಲ್ಯದ ಬೆಳ್ಳಿ ವಿಗ್ರಹ ಹಾಗೂ ರುದ್ರಾಕ್ಷ ಮಾಲೆಯನ್ನು ಕಳವು ಮಾಡಿದ ಪ್ರಕರಣ ಸೇರಿ, ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ಒಟ್ಟು 25ಕ್ಕೂ ಹೆಚ್ಚು…

Read More

ಮಂಗಳೂರಿನ ಮುಕುಟದಂತಿರುವ ಪಂಪ್‌ವೆಲ್‌ನ ಮಹಾವೀರ ವೃತ್ತ ಜ.24 ರಂದು ಲೋಕಾರ್ಪಣೆ … !

ಮಂಗಳೂರು:ಮಂಗಳೂರಿನ ಮುಕುಟದಂತಿರುವ ಪಂಪ್‌ವೆಲ್‌ನ ಮಹಾವೀರ ವೃತ್ತ ಇಂದು ಹೊಸ ಕಾಂತಿಯೊಂದಿಗೆ ಕಂಗೊಳಿಸುತ್ತಿದೆ. ಬರೋಬ್ಬರಿ 9 ವರ್ಷಗಳ ದೀರ್ಘ ನಿರೀಕ್ಷೆಗೆ ತೆರೆ ಎಳೆದಂತೆ, ವೃತ್ತ ಪುನರ್ನಿಮರ್ಾಣಗೊಂಡಿದ್ದು, ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ನವ ಚೈತನ್ಯವನ್ನು ತುಂಬಿದೆ. ಬಹುನಿರೀಕ್ಷಿತ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ ಜ.24 ರಂದು ಸಂಜೆ 5:30ಕ್ಕೆ ನೆರವೇರಲಿದೆ ಎಂದು ಮಂಗಳೂರು ಜೈನ್ ಸೊಸೈಟಿಯ ಅಧ್ಯಕ್ಷ ಪುಷ್ಪರಾಜ್ ಜೈನ್ ಹೇಳಿದರು. ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಜೈನ ಸೊಸೈಟಿ (ರಿ) ಅವರ ಮುಂದಾಳತ್ವದಲ್ಲಿ…

Read More

ಮಂಗಳೂರು ಕನ್ನಡ ಸಾಹಿತ್ಯ ಪರಿಷತ್‌ಗೆ ಅರ್ಧ ಎಕರೆ ಜಾಗ ಮಂಜೂರು – ಕನ್ನಡ ಭವನ ನಿರ್ಮಾಣಕ್ಕೆ ಐತಿಹಾಸಿಕ ಹೆಜ್ಜೆ : ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್

ಮಂಗಳೂರು:2026ರ ಹೊಸ ವರ್ಷದ ಶುಭಾರಂಭದ ಸಂದರ್ಭದ ಡಾ. ಮಂಜುನಾಥ ಎಸ್. ರೇವಣಕರ್ ಅವರ ಷಷ್ಟ್ಯಬ್ದಿ ಸಂಭ್ರಮದ ಶುಭ ಘಳಿಗೆ, ಧರ್ಮಸ್ಥಳದ ಕದ್ರಿಯ ರಥೋತ್ಸವ, ಮಂಗಳೂರು ರಥೋತ್ಸವ ಹಾಗೂ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ರಜತ ರಥೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲೇ ಅಪೂರ್ವ ಸಾಧನೆಯೊಂದಾಗಿ ಮಂಗಳೂರು ತಾಲ್ಲೂಕು ಘಟಕಕ್ಕೆ ಸರ್ಕಾರದಿಂದ ಅರ್ಧ ಎಕರೆ ಜಾಗ ಮಂಜೂರಾಗಿದೆ ಎಂದು ಕಸಾಪ ತಿಳಿಸಿದೆ. ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್….

Read More

ಮುಳುಗು ತಜ್ಞ , ಆಪದ್ಬಾಂಧವ ಈಶ್ವರ ಮಲ್ಪೆಗೆ ಪ್ರಪ್ರಥಮ ‘ಲಯನ್ಸ್ ಅಶೋಕ ಸೇವಾ ರತ್ನ ‘ಪ್ರಶಸ್ತಿ. ಪ್ರಧಾನ…. !

ಮಂಗಳೂರು : ಲಯನ್ಸ್ ಕ್ಲಬ್‌ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದೊಂದಿಗೆ ಸಮಾಜಸೇವೆಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಖ್ಯಾತ ಸಮಾಜಸೇವಕ ಮತ್ತು ಮುಳುಗು ತಜ್ಞ ಈಶ್ವ‌ರ ಮಲ್ಪೆ ಇವರಿಗೆ ಪ್ರಪ್ರಥಮ “ಲಯನ್ಸ್ ಅಶೋಕ ಸೇವಾ ರತ್ನ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮವು ಜನವರಿ 26 ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಳಿಯಿರುವ ಅಶೋಕ ನಗರದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ ಎಂದು ಲಯನ್.ಡಾ|ನವೀನ್ ಶೆಟ್ಟಿಯವರು ಹೇಳಿದರು. ಮಂಗಳೂರಿನ ಪತ್ರಿಕಾಭವನದಲ್ಲಿ…

Read More
error: Content is protected !!