ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ

ಮಂಗಳೂರು: ಕದ್ರಿ ಶ್ರೀ ಮಂಜುನಾಥನ ಜಾತ್ರಾ ಮಹೋತ್ಸವದ ಶುಭಾವಸರದಲ್ಲಿ ರಥೋತ್ಸವದ ಪುಣ್ಯ ದಿನ 21 ರಂದು ಪ್ರಖ್ಯಾತ ಹರಿದಾಸರು, ಸಂಘಟಕರು, ಭಜನಾ ಕೀರ್ತನಕಾರರು , ನಿರೂಪಕರು ಮತ್ತು ಅಂಕಣ ಬರಹಗಾರರಾದ ಶರತ್ ಶೆಟ್ಟಿ ಪಡುಪಳ್ಳಿ ಯವರ ತುಳು ಬರಹಗಳ ಗುಚ್ಚ “ ಕಡ್ಲೆ ಬಜಿಲ್” ಎಂಬ ಪುಸ್ತಕವು ಕದ್ರಿ ದೇವಳದ ರಜಾoಗಣದಲ್ಲಿ ಬಿಡುಗಡೆ ಗೊಂಡಿತು.ಮಲ್ಲಿಕಾ ಕಲಾ ವೃಂದದ ಸಂಚಾಲಕರಾದ ಸುಧಾಕರ್ ರಾವ್ ಪೇಜಾವರ, ಹಿರಿಯ ಲೇಖಕಿ, ಲೇಖಕಿಯರ ವಾಚಕಿಯರ ಸಂಘದ ರೂಪಕಲಾ ಆಳ್ವ, ಪ್ರಸಿದ್ಧ ತುಳು ಸಾಹಿತಿ…

Read More

ಕರಾವಳಿಯಲ್ಲಿ ಹಿಂದೂ ಸಮಾಜ ಏಕತೆಗೆ ಸರಣಿ ‘ಹಿಂದೂ ಸಂಗಮ’: ವಜ್ರದೇಹಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ

ಮಂಗಳೂರು:ಹಿಂದೂ ಸಮಾಜದ ಏಕತೆ ಬಂಧುಗಳ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಬಲಪಡಿಸುವ ಮಹತ್ತರ ಉದ್ದೇಶದಿಂದ ಮಂಗಳೂರು ತಾಲೂಕಿನ ಎಡಪದವು, ಮಳಲಿ, ಗುರುಪುರ, ಪರ್ಮಂಕಿ, ಕೆಂಜಾರು, ಬಜಪೆ, ಎಕ್ಕಾರು: ಮಂಡಲಗಳಲ್ಲಿ ಫೆಬ್ರವರಿ ತಿಂಗಳಲ್ಲಿ ‘ಹಿಂದೂ ಸಂಗಮ’ ಆಯೋಜಿಸಲಾಗಿದ್ದು ಈ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಿಂದು ಸಂಗಮ ಆಯೋಜನ ಸಮಿತಿ ಗುರುಪುರ ಕೈಕಂಬ, ಕಿನ್ನಿಕಂಬಳ ಇದರ ಗೌರವಾಧ್ಯಕ್ಷರಾದ ವಜ್ರದೇಹಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಕದ್ರಿಯಲ್ಲಿರುವ ವಿಶ್ವಹಿಂದೂ ಪರಿಷತ್…

Read More

ಜ.23 ರಿಂದ 25 ರ ತನಕ ಕೊಲ್ಯ ಆದರ್ಶ ಮಿತ್ರ ಮಂಡಳಿಯ ಸುವರ್ಣ ಸಂಭ್ರಮ.

ಉಳ್ಳಾಲ: ಕೊಲ್ಯದ ಆದರ್ಶ ಮಿತ್ರ ಮಂಡಳಿಯ 50ನೇ ವರುಷದ ಸುವರ್ಣ ಸಂಭ್ರಮ ಕಾರ್ಯಕ್ರಮವು ಜ.23 ರಿಂದ ಜ 25 ರ ವರೆಗೆ ಕೊಲ್ಯ ಶ್ರೀ ಶಾರದಾ ಮಂದಿರದಲ್ಲಿ ನಡೆಯಲಿದೆ ಎಂದು ಆದರ್ಶ ಮಿತ್ರ ಮಂಡಳಿಯ ಗೌರವ ಸಲಹೆಗಾರರಾದ ರಾಜೇಶ್ ಕುಮಾರ್ ಕೆ.ಎಸ್ ಹೇಳಿದರು.ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಜ.23 ರ ಶುಕ್ರವಾರ ಸಂಜೆ 4.30 ಗಂಟೆಗೆ ಶ್ರೀ ಶಾರದಾ ಮಹಿಳಾ ಮಂಡಳಿಯವರಿಂದ ಲಲಿತ ಸಹಸ್ರನಾಮ,5.30ಕ್ಕೆ ದೀಪ ಪ್ರಜ್ವಲನೆ,ಭಜನಾ ಕಾರ್ಯಕ್ರಮ,ಸಂಜೆ…

Read More

ಮನರೇಗಾ ಯೋಜನೆ ಬದಲು ವಿ.ಜಿ.ಗ್ರಾಮ್ ಜೀ ಯೋಜನೆ ಮಾಡದಂತೆ ಒತ್ತಾಯಿಸಿ ವಾಪಸ್ಸಾತಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ನಿರ್ಣಯ ಕೈಗೊಳ್ಳುವಂತೆ – ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷ ಕುಳಾಲು ಶ್ರಿ.ಸುಭಾಶ್ಚಂದ್ರ ಶೆಟ್ಟಿ ಕರೆ

ಮನರೇಗಾ ಯೋಜನೆಯನ್ನು ಹಂತ ಹಂತವಾಗಿ ಮೊಟಕುಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದ ವಿರುದ್ಧ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ರಾಜಕೀಯ ನೋಡದೆ ಪಕ್ಷಾತೀತವಾಗಿ ಖಂಡನ ನಿರ್ಣಯ ಕೈಗೊಳ್ಳಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಗ್ರಹಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯತಿಗಳಿದ್ದಲ್ಲಿ ವಿಶೇಷ ಸಭೆ ಕರೆದು ಆದರೂ ಈ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯು.ಪಿ.ಎ ಸರ್ಕಾರ ಜಾರಿಗೆ ತಂದ ಮನರೇಗಾ ಕಾನೂನು…

Read More

ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಎಸ್‌ಡಿಪಿಐ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮೊಹಮ್ಮದ್ ಶಫಿ ರಾಜಸ್ಥಾನ್ ಭೇಟಿ

ಉಳ್ಳಾಲ: ಎಸ್ ಡಿ ಪಿಐ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಶಫಿ ರಾಜಸ್ಥಾನ್ ರವರು ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಗೈದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ಎಸ್ ಡಿ ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮೊಹಮ್ಮದ್ ಶಫಿ ರಾಜಸ್ಥಾನ್ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮೊಹಮ್ಮದ್ ಶಫಿ ರಾಜಸ್ಥಾನ್ ಮಾತನಾಡಿ ಇಸ್ಲಾಂ ಧರ್ಮ ಇಂದು ಉಳಿದಿರಲು ನಮ್ಮ ಪೂರ್ವಜರ ಕೊಡುಗೆ ಅಪಾರ ಆ ನಿಟ್ಟಿನಲ್ಲಿ ಅವರನ್ನು ಸ್ಮರಣೆ ಮಾಡುವುದು…

Read More

ರಾಜಕೀಯ ತೆವಳಿಗೋಸ್ಕರ , ಮುಸ್ಲಿಂ ಮತಗಳ ಓಲೈಕೆಗಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಹಿಂದೂ ನಂಬಿಕೆಗೆ ಘಾಸಿ ಉಂಟು ಮಾಡಿದ್ದಾರೆ :ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್

ಮಂಗಳೂರು:ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಿಸಿರುವುದನ್ನು ಖಂಡನೆ ಮಾಡುವ ಮೂಲಕ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹಿಂದೂಗಳಿಗೆ ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ತರುವ ಪ್ರಯತ್ನ ಮಾಡಿದ್ದಾರೆ . ಅವರು ಕೂಡಲೇ ಈ ವಿಚಾರವಾಗಿ ಕ್ಷಮೆ ಕೇಳುವಂತೆ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್ ಆಗ್ರಹಿಸಿದರು . ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಅವರಂತಹ ಹಿರಿಯ ರಾಜಕಾರಣಿಯಿಂದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷೆ…

Read More

ಡಾ.ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಜನವರಿ 31 ಮತ್ತು ಫೆಬ್ರವರಿ1 ರಂದು ‘ಆಯುಷ್ ಹಬ್ಬ 2026’

ಮಂಗಳೂರು:ಜನವರಿ 31 ಮತ್ತು ಫೆಬ್ರವರಿ1 ರಂದು ನಗರದ ಡಾ.ಟಿ.ಎಂ.ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ ‘ಆಯುಷ್ ಹಬ್ಬ 2026’ ವಿವಿಧ ಆಯುಷ್ ಕಾಲೇಜುಗಳು , ಸಂಘಟನೆಗಳು ಮತ್ತು ವೃತ್ತಿ ನಿರತ ವೈದ್ಯರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಆಯುಷ್ ಹಬ್ಬ ಸಮಿತಿ 2026 ಇದರ ಗೌರವಾಧ್ಯಕ್ಷರಾದ ಡಾ ಆಶಾ ಜ್ಯೋತಿ ಮಾಲಾಡಿ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಭಾರತೀಯ ವೈದ್ಯ ಪದ್ಧತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ…

Read More

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯನ ಬಂಧನ

ಮಂಗಳೂರು:1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯನನ್ನು ಮಂಗಳೂರು ಪೊಲೀಸ್ರು ಬಂಧಿಸಿದ್ದಾರೆ.ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಕಲಂ 460, 396, 400 ಐಪಿಸಿ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ…

Read More

ಪುತ್ತೂರು ನ್ಯಾಯಾಲಯದ ಒಳಗಡೆ ವ್ಯಕ್ತಿಯಿಂದ ವಿಷ ಸೇವನೆ: ಆತ್ಮಹತ್ಯೆ ಯತ್ನ, ಮಂಗಳೂರಿಗೆ ರವಾನಿಕೆ

ಕೋರ್ಟ್ ಒಳಗಡೆ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನ್ಯಾಯಾಲಯದಲ್ಲಿ ನಡೆದಿದೆ.ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾಡ್ನೂರು ಗ್ರಾಮದ ನಿವಾಸಿ ರವಿ ಎಂದು ಗುರುತಿಸಲಾಗಿದೆ.ನಿನ್ನೆ ಪುತ್ತೂರು ಕಾವು ಮಾಡ್ನೂರು ಗ್ರಾಮದ ನಿವಾಸಿ ರವಿ ಎಂಬವರ ವಿರುದ್ದ ಇವರ ಪತ್ನಿಯೇ ವೈವಾಹಿಕ ಮನಸ್ತಾಪದ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ರವಿರವರು ಪುತ್ತೂರು ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಿ ನ್ಯಾಯಾಲಯದ ಒಳಗೆ…

Read More

ನಾಪತ್ತೆಯಾದ ಮದ್ರಾಸ್ ಹುಡುಗ ಬೆಂಗಳೂರಿನಲ್ಲಿ ಪತ್ತೆ

ಮಂಜೇಶ್ವರ : ಮದ್ರಸದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಬಗ್ಗೆ ದೂರಲಾಗಿತ್ತು . ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆಯಾದ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ . ಕಳೆದ ಎರಡು ದಿವಸದಿಂದ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂಬಕ್ಕರ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು .ಈಗ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ

Read More
error: Content is protected !!