ಭಾರೀ ಮಳೆಗೆ ಮಂಜೇಶ್ವರದಲ್ಲಿ ಗುಡ್ಡ ಕುಸಿತ; ಬಾವಿ ಮಣ್ಣಿನಲ್ಲಿ ಸಂಪೂರ್ಣ ಮುಚ್ಚಳ
ಮಂಜೇಶ್ವರ: ನಿನ್ನೆ ಸುರಿದ ಭಾರೀ ಮಳೆಯ ಪರಿಣಾಮ ಮಂಜೇಶ್ವರದ ಪೊಯ್ಯೆ ಕಂಡ ಪ್ರದೇಶದಲ್ಲಿ ಗುಡ್ಡ ಕುಸಿದ ಘಟನೆ ನಡೆದಿದೆ.ಗುಡ್ಡದಿಂದ ಜರಿದು ಬಂದ ಅಪಾರ ಪ್ರಮಾಣದ ಮಣ್ಣು ಪುರುಷೋತ್ತಮ ಎಂಬವರ ಮನೆಯ ಬಾವಿಯೊಳಗೆ ನುಗ್ಗಿ, ಬಾವಿ ಸಂಪೂರ್ಣ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ಬಾವಿಗೆ ಭಾರೀ ಹಾನಿಯಾಗಿದ್ದು, ಬಳಕೆಗೆ ಅಸಾಧ್ಯವಾಗಿದೆ. ಗುಡ್ಡ ಕುಸಿತ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಮನೆ ಇದ್ದರೂ, ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
