ಕೊಂಡೆವೂರು ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಹಾಗೂ ನವ ಚಂಡಿಕಾ ಯಾಗ ಸಮಾಪ್ತಿ
ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ, “ನವ ಚಂಡಿಕಾ ಯಾಗ” ಮತ್ತು ಶ್ರೀ ಗಾಯತ್ರಿ ದೇವಿಯ ಗರ್ಭಗುಡಿಯ ಜೀರ್ಣೋದ್ಧಾರಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮವು 2026 ಫೆಬ್ರವರಿ 22ರಂದು ಭಕ್ತಿಭಾವಪೂರ್ಣವಾಗಿ ಯಶಸ್ವಿಯಾಗಿ ನೆರವೇರಿತು. ಈ ಎಲ್ಲಾ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಕಟೀಲು ಪರಂಪರ ಮುಖ್ಯ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ…
