ದುಬೈ ಯಕ್ಷೋತ್ಸವ-2025 ಆಮಂತ್ರಣ ಪತ್ರಿಕೆ ಬಿಡುಗಡೆ

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಸಂಭ್ರಮವು ಯಕ್ಷಧ್ರುವ ಪಟ್ಲ ಪೌಂಡೇಶನ್ ಯುಎಇ(ದುಬೈ) ಘಟಕದ ಸಹಯೋಗದೊಂದಿಗೆ ಜೂನ್29 ರಂದು ಜರಗಲಿರುವ “ದುಬೈ ಯಕ್ಷೋತ್ಸವ-2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಮೆ.11 ರಂದು ಜರುಗಿತ್ತು. ನಗರದ ಗಿಸಾಸ್ ನ ಫಾರ್ಚೂನ್ ಪ್ಲಾಝದ ಬಾಕ್ವೆಂಟ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಇದೆ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಯುಎಇಯಲ್ಲಿ ಇರುವ ಎಲ್ಲ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮ…

Read More

ಪೊದರು ಗಳಿಂದ ಆವೃತ್ತವಾದ ವಿದ್ಯುತ್ ಟ್ರಾನ್ಸ್ಫರ್ಮಾರ್ ಗಳು, ಸಾರ್ವಜನಿಕ ಸಂಚಾರಕ್ಕೆ ಸವಾಲು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಅಂಬಿತ್ತಡಿಗಳಲ್ಲಿ ಸ್ಥಾಪಿತವಾಗಿರುವ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಧೀನದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಪೊದರುಗಳಿಂದ ಆವರಿಸಲ್ಪಟ್ಟು ಸಾರ್ವಜನಿಕ ಸುರಕ್ಷತೆಗೆ ಭಾರೀ ಅಪಾಯಕಾರಿಯಾಗಿದೆ.ಈ ದಾರಿಯಾಗಿ ಪ್ರತಿ ದಿನ ನೂರಾರು ಮಂದಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸುತಿದ್ದಾರೆ. ಅಂಬಿತ್ತಡಿ ಹಾಗೂ ರಾಗಂ ಜಂಕ್ಷನ್ ರಸ್ತೆ ಬದಿಯಲ್ಲಿ ಸ್ಥಾಪಿಸಲ್ಪಟ್ಟಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಪೂರ್ಣವಾಗಿ ಕಾಡುಹಿಡಿದ ಪೊದರುಗಳಿಂದ ಆವರಿಸಲ್ಪಟ್ಟಿವೆ. ಈ ಪೊದರುಗಳು ಮಳೆಯ ಸಮಯದಲ್ಲಿ ತೊಳೆದ ನಂತರ ಅಥವಾ ಗಾಳಿಗೆ ಬಿದ್ದು ಟ್ರಾನ್ಸ್‌ಫಾರ್ಮರ್‌ಗೆ ಸ್ಪರ್ಶಿಸಿದರೆ ವಿದ್ಯುತ್…

Read More

ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟಕ್ಕೆ ಅದ್ದೂರಿ ಯ ತೆರೆ

ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಮೇ 04 ರಿಂದ 11 ವರೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೆಯರ್ಮನ್ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,ಅಬ್ದುಲ್ ವಹಾಬ್,ಮುಹಮ್ಮದ್ ಇಬ್ರಾಹಿಂ,ಯು.ಕೆ ಯೂಸುಫ್, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯೂ,ರಾಜ್ಯ ಸಮಿತಿ ಸದಸ್ಯ ಕೆ. ಸಬೀಶ್, ಜಿಲ್ಲಾ ಜತೆ…

Read More

ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ

ಮಂಜೇಶ್ವರ : ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ ನಡೆಯಿತು.ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಡೆದ ಮಹಾ ಸಭೆಯನ್ನು ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಆರಿಫ್ ಮಚ್ಚಂಪ್ಪಾಡಿ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಾಯಿಭದ್ರ ರೈ, ಸಲಾಂ ವರ್ಕಾಡಿ, ರತನ್ ಹೊಸಂಗಡಿ, ರವಿ ಪ್ರತಾಪ ನಗರ, ದೀಪಕ್ ರಾಜ್ ಉಪ್ಪಳ ಮೊದಲಾದವರು ಮಾತನಾಡಿದರು. ನೂತನ ವರ್ಷದ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಲಾಂ…

Read More

ಉದ್ಯಾವರ ಶ್ರೀ ಅರಸು ಮಂಜಿಷ್ಲಾರ್ ದೈವಗಳ ವರ್ಷಾವಧಿ ಉತ್ಸವಕ್ಕೆ ಸಂಭ್ರಮದ ಸಮಾಪ್ತಿ.

ಕಳೆದ ನಾಲ್ಕು ದಿನಗಳಲ್ಲಾಗಿ ನಡೆದ ಉತ್ಸವ ಭಾನುವಾರದಂದು ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂಡಿತು. ಈ ಸಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾರೀ ಜನಸ್ತೋಮವೇ ಕಂಡು ಬಂತು. ಧ್ವಜರೋಹಣದ ಮರುದಿವಸ ನಡೆದ ಯಕ್ಷಗಾನ ತಾಳಮದ್ದಳೆ, ಸಂಗೀತ ರಸಮಂಜರಿ ಬಳಿಕ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ ವೀಕ್ಷಿಸಲು ಉಭಯ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು. ಅದೇ ರೀತಿ ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ…

Read More

ಸ್ಥಳೀಯಾಡಳಿತ ಚುನಾವಣೆ:ಯುವಕರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಆಲೋಚನೆ.

ಕಾಸರಗೋಡು : ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡಿ ಪಕ್ಷದ ಪುನರ್ ಸಂಘಟನೆ ಮಾಡಿ ಎಲ್ಲಾ ಕಡೆ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಪಕ್ಷ ಪ್ರತ್ಯೇಕ ಕಾರ್ಯಯೋಜನೆಯನ್ನು ಮಾಡಿದೆ. ತಳಮಟ್ಟದಿಂದಲೇ ಪಕ್ಷವನ್ನು ಪುನರ್ ಸಂಘಟಿಸಿ ಚುನಾವಣೆ ಎದುರಿಸಲು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಸಮಿತಿ ನಿರ್ಧರಿಸಿದೆ. ಇದರ ಅಂಗವಾಗಿ ಕೆಪಿಸಿಸಿಯ ಉಪಾಧ್ಯಕ್ಷರು ಸಹಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೂತನ ನೇಮಕಾತಿ ಮಾಡುವ ಬಗ್ಗೆ ಪಕ್ಷ ಚಿಂತಿಸಿದೆ. ಕಾಸರಗೋಡು ಸಹಿತ ಎಂಟು ಜಿಲ್ಲೆಗಳಲ್ಲಿ…

Read More

ಇನ್ನು ಮುಂದೆ ಮೊಡವೆಗೆ ಹೇಳಿ ಗುಡ್ ಬಾಯ್

ಹದಿಹರೆಯದವರಲ್ಲಿ ಮೊಡವೆ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಣ್ಣು, ಗಂಡು ಎನ್ನುವ ಬೇಧವಿಲ್ಲದೆ ಎಲ್ಲರಲ್ಲೂ ಮುಖದ ಮೊಡವೆ ಉಂಟಾಗುತ್ತದೆ. ಕೆಲವರಲ್ಲಿ ಚರ್ಮದ ಕೆಂಪು ಗುಳ್ಳೆಯಾದರೆ ಇನ್ನೂ ಕೆಲವರಲ್ಲಿ ಕೀವಿನ ಗುಳ್ಳೆಯ ರೀತಿಯಲ್ಲಿ ಉಂಟಾಗುತ್ತದೆ. ಮೊಡವೆ ಉಂಟಾಗಲು ಕಾರಣಗಳೆಂದರೆ… ೧.ಮುಖದ ಮೇಲಿನ ಎಣ್ಣೆಯ ಅಂಶ ಹೆಚ್ಚಾದರೆ ಮೊಡವೆ ಉಂಟಾಗುತ್ತದೆ. ಎಣ್ಣೆಯ ಅಂಶ ಶೇಖರಣೆಯಾಗಲು ಕಾರಣಗಳೆಂದರೆ ಎಣ್ಣೆಯುಕ್ತ ಆಹಾರ, ಸರಿಯಾಗಿ ನಿದ್ದೆ ಮಾಡದೇ ಇರುವುದು, ಅತಿಯಾದ ಚಿಂತೆ ಮಾಡುವುದು ಮತ್ತು ಅಧಿಕ ಮಾಂಸದ ಸೇವನೆಯಿಂದ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ.೨.ಹಾರ್ಮೋನ್‌ಗಳಲ್ಲಿ ಬದಲಾವಣೆ೩.ಹೆಚ್ಚು…

Read More

ಪಾಕ್ ಜತೆ ಸಂಘರ್ಷ : ಕಾಸರಗೋಡಿನಲ್ಲಿ ಕಟ್ಟೆಚ್ಚರ, ಸೀತಾಂಗೋಳಿ ಎಚ್.ಎ.ಎಎಲ್ ಸಹಿತ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಬಿಗಿ ಭದ್ರತೆ, ಕಂಟ್ರೋಲ್ ರೂಂ ಕಾರ್ಯಾರಂಭ

ಜಿಲ್ಲೆಯಲ್ಲಿರುವಸೀತಾಂಗೋಳಿಯ ಎಚ್.ಎ.ಎಲ್. ಕಾರ್ಖಾನೆ, ಪೆರಿಯ ದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಸಿಪಿಸಿಆರ್ ಐ ಗೆ ಕೇಂದ್ರ ನಿರ್ದೇಶನದಂತೆ ಭದ್ರತಾ ಕಾವಲು ಏರ್ಪಡಿಸಲಾಗಿದೆ ಅಲ್ಲದೇ ವಿದೇಶಿಯರು ಸಹಿತ ಪ್ರವಾಸ ಬಂದು ವಾಸಿಸುವ ಟೂರಿಸ್ಟ್ ಹೋಟೆಲ್ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭದ್ರತೆ ಒದಗಿಸಲಾಗಿದೆ.ಅಲ್ಲದೇ ರೈಲ್ವೇ ನಿಲ್ದಾಣ, ರೈಲ್ವೇಹಳಿ, ಕರಾವಳಿ ತೀರಪ್ರದೇಶದ ಮೇಲೆ ವಿಶೇಷ ಕಣ್ಣಾವಲು ಇರಿಸಲಾಗಿದೆ. ಮುನ್ನೆಚ್ಚರಿಕೆಯಂಗವಾಗಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಗೃಹಖಾತೆ ಕಾರ್ಯದರ್ಶಿಗೆ ಇದರ ಹೊಣೆ ವಹಿಸಲಾಗಿದೆ.

Read More

ಮಲಪ್ಪುರಂನಲ್ಲಿ ಮತ್ತೆ ನಿಪಾ ವೈರಸ್.ಸಂಪರ್ಕ ಪಟ್ಟಿಯಲ್ಲಿ 49 ಮಂದಿ, ಮೂಲವನ್ನು ಕಂಡುಹಿಡಿಯಲು ಜಂಟಿ ಪರೀಕ್ಷೆ; ಆರೋಗ್ಯ ಸಚಿವೆ ವೀಣಾ ಜಾರ್ಜ್ ಭರವಸೆ.

ಮಲಪ್ಪುರಂನ ವಲಂಚೇರಿಯಲ್ಲಿ ನಿಪಾ ವೈರಸ್ ಇರುವುದು ದೃಢಪಟ್ಟಿದೆ.ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅವರನ್ನು ಪೆರಿಂಥಲ್ಮನ್ನ ಇಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗೆ ಸೂಕ್ತ ವಾದ ಔಷಧವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಸಂಪರ್ಕ ಪಟ್ಟಿಯಲ್ಲಿ 49 ಮಂದಿ. ಈ ಪ್ರದೇಶದಲ್ಲಿ 6 ಜನರಿಗೆ ಸಾದಾರಣ ಲಕ್ಷಣಗಳು ಕಂಡುಬಂದಿವೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 45 ಜನರು ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ. ಈ ಪೈಕಿ 12 ಮಂದಿ ಮನೆಯಲ್ಲಿದ್ದಾರೆ. ರೋಗಲಕ್ಷಣಗಳನ್ನು ಹೊಂದಿರುವ…

Read More
error: Content is protected !!