10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ: 60/2009, ಕಲಂ:420 ಐಪಿಸಿ ಪ್ರಕರಣದಲ್ಲಿ ಬಯೋಗ್ಯಾಸ್ ಸಂಪರ್ಕ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಾಸನ ಚನ್ನರಾಯಪಟ್ಟಣ ನಿವಾಸಿ S N ಚಂದ್ರೆಗೌಡ ಎಂಬಾತನನ್ನು, ಹಾಸನ ಚನ್ನರಾಯಪಟ್ಟಣದ ಬೆಳಗಿಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ದಿನಾಂಕ 20/01/2026 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

ಉಡುಪಿ ಜಿಲ್ಲಾಧಿಕಾರಿಯ ಭಗವಾಧ್ವಜ ಪ್ರಕರಣಕ್ಕೆ ತೀವ್ರ ವಿರೋಧ: ದೇವಾಲಯಗಳಲ್ಲಿ ರಾಜಕೀಯ ಪತಾಕೆ ಬೇಡ — ರಮಾನಾಥ ರೈ

ಮಂಗಳೂರು:ಉಡುಪಿ ಜಿಲ್ಲಾಧಿಕಾರಿಯವರು ಭಗವಾದ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ ಪ್ರಕರಣ ಈಗ ವಿವಾದಕ್ಕೆ ಕಾರಣವಾಗಿದೆ.ಮಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ರಮಾನಾಥ ರೈ ಅವರು ಜಿಲ್ಲಾಧಿಕಾರಿ ‌ಭಗವಾದ್ವಜ ಹಿಡಿದು ಚಾಲನೆ ನೀಡಿದುದನ್ನು ಖಂಡಿಸಿದ್ದಾರೆ .ಕೇಸರಿ ಧ್ವಜ ಹಿಡಿದುದನ್ನು ಎಲ್ಲಾ ಕಾಂಗ್ರೆಸಿಗರು ತಪ್ಪು ಅಂತ ಹೇಳಬೇಕು.ನೀವು ಯಾವುದೇ ಬಣ್ಣದ ಪತಾಕೆ ಹಾಕಬೇಡಿ.ದೇವಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ, ಕೇಸರಿ, ಹಸಿರು ಯಾವುದೇ ಪತಾಕೆ ಹಾಕಬೇಡಿ ಎಂದವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ದೇವಸ್ಥಾನದ ಕಾರ್ಯಕ್ರಮ, ಎಲ್ಲರಿಗೂ ಸಮಾನವಾದ ಕಾರ್ಯಕ್ರಮ.ಯಾವುದೇ…

Read More

ಹಿಂದೂ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ವಿರುದ್ಧ ದ್ವೇಷ ಭಾಷಣ ಆರೋಪ : ಮಾನವ ಬಂಧುತ್ವ ವೇದಿಕೆಯಿಂದ ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು

ಪುತ್ತೂರು: ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಮಾಜದ ನಾಗರಿಕ ಸಮುದಾಯಗಳ ಮಧ್ಯೆ ಪರಸ್ಪರ ದ್ವೇಷ ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಈ ದ್ವೇಷ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮಾನವ ಬಂಧಿತ್ವ ವೇದಿಕೆಯಿಂದ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಜ.12ರಂದು ವಿವೇಕಾನಂದ ಕಾಲೇಜಿನ ಅವರಣದಲ್ಲಿ ನಡೆದ…

Read More

ಜ.23ರಿಂದ 26ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ : ದ.ಕ ಜಿಲ್ಲಾಪಂಚಾಯತ್ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ತೋಟಗಾರಿಕೆ ಇಲಾಖೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜ.23ರಿಂದ 26ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ತಿಳಿಸಿದ್ದಾರೆ.ಕದ್ರಿ ಉದ್ಯಾನವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಅವರು, ಜ.23ರ ಸಂಜೆ 4 ಗಂಟೆಗೆ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರ ಉಪಸ್ಥಿತಿ…

Read More

ಯೂತ್ ವಿಂಗ್ – ‘YOUNG DEMOCRATS’ ಆರಂಭಿಸ ಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರ್ಧಾರ : ಪಕ್ಷದ ರಾಷ್ಟ್ರೀಯಉಪಾಧ್ಯಕ್ಷ ಮುಹಮ್ಮದ್ ಶಫಿ

ಮಂಗಳೂರು:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯು ಡೆಮಾಟ್ರಿಕ್ ಯೂತ್ ವಿಂಗ್ – ‘YOUNG DEMOCRATS’ ಆರಂಭಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಾದ ಮುಹಮ್ಮದ್ ಶಫಿ ತಿಳಿಸಿದ್ದಾರೆ.ಅವರು ನಗರದ ಎಕ್ಕೂರಿನ ಇಂಡಿಯಾನ್‌ ಸಭಾಂಗಣದಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ , ಪಕ್ಷದ ಯುವ ಸಂಘಟನೆ ಆರಂಭಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಸಮಿತಿ ಯನ್ನು ರಚಿಸಲಾಗಿದೆ…

Read More

ಕೊಡಿಯಾಲ್ ಬೈಲ್ 30ನೇ ವಾರ್ಡಿನ ಸಮಸ್ಯೆಗಳಿಗೆ ಪರಿಹಾರ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪಾಲಿಕೆ ಕಚೇರಿಯಲ್ಲಿ ಸಾರ್ವಜನಿಕ ಸಭೆ

ಮಂಗಳೂರು:ನಗರದ ಕೊಡಿಯಾಲ್ ಬೈಲ್ 30 ನೇ ವಾರ್ಡಿನ ಪ್ರಮುಖ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಾಲಿಕೆಯ ಕಚೇರಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವ ಹಾಗೂ ದ.ಕ ಜಿಲ್ಲಾಧಿಕಾರಿ, ಮ.ನಪಾ ಆಡಳಿತಾಧಿಕಾರಿಯಾದ ದರ್ಶನ್ ಎಚ್.ವಿ ರವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಇಲ್ಲಿನ ಬಲ್ಲಾಳ್ ಬಾಗ್ ನಲ್ಲಿರುವ ಹಳೆಯ ಅವೈಜ್ಞಾನಿಕ ಬ್ರಿಡ್ಜ್ ನಲ್ಲಿ ಮಳೆಗಾಲದಲ್ಲಿ ಕಸ ಕಡ್ಡಿಗಳು ತುಂಬಿ ನೀರು ಸಾರಾಗವಾಗಿ ಹರಿಯದೇ, ಕೊಡಿಯಾಲ್ ಗುತ್ತು, ಭಾರತಿ ನಗರ, ಚಂದ್ರಿಕಾ ಬಡಾವಣೆ ಮೊದಲಾದ ಪ್ರದೇಶಗಳಲ್ಲಿ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿ…

Read More

ನಾಡಗೀತೆ ಕಡ್ಡಾಯ ಆದೇಶ ಸಮರ್ಪವಲ್ಲ …. !

*ಮಂಗಳೂರು:ಕುವೆಂಪು ಅವರು ರಚಿಸಿರುವ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಅವಧಿ ಅತಿ ಉದ್ದವಾಗಿದ್ದು, ಮಕ್ಕಳಿಗೆ ಹಾಡುವುದು ಕಷ್ಟಸಾಧ್ಯವಾಗಿದೆ. 2.30 ನಿಮಿಷ ಅವಧಿಯ ಈ ಹಾಡನ್ನು ಶಾಲೆಗಳಲ್ಲಿ ಬೆಳಗ್ಗಿನ ವೇಳೆ, ವಿಶೇಷ ಕಾರ್ಯಕ್ರಮಗಳಲ್ಲಿ, ಸರಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಆಸಮರ್ಪಕ ನಿರ್ಧಾರವಾಗಿದೆ ಎಂದು ಮಂಗಳೂರು ಮೂಲದ ಗಾಯಕ, ರಾಗ ಸಂಯೋಜಕ ಮಾಣಿಕ್ಯರಾಜ್ ಹೇಳಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ , ‘ಜಯ…

Read More

ಮನ್‌ರೇಗಾ ಮಾರ್ಪಾಡು ಬಡವರಿಗೆ ಅನ್ಯಾಯ: ಮೋದಿ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಮಂಗಳೂರು:ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ಬಡವರಿಗೆ ತೊಂದರೆ ಆಗಿಲ್ಲ ಆದರೆ ನಮ್ಮ ಪಕ್ಷದಿಂದ ಜಮೀನ್ದಾರರಿಗಳಿಗೆ ಬಂಡವಾಳ ಶಾಹಿಗಳಿಗೆ, ಭೂಮಾಲಕರಿಗೆ ತೊಂದರೆ ಆಗಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೂ ತೊಂದರೆ ಆಗಿದೆ. ಕೇಂದ್ರದ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.ಮನ್‌ರೇಗಾ ಯೋಜನೆಯ ಹೆಸರನ್ನು ತಿದ್ದುವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಟೋಪಿ…

Read More

ಮಂಗಳೂರಿನಲ್ಲಿ ಜನವರಿ 24–25ರಂದು ತುಳುನಾಡು ಪ್ರೀಮಿಯರ್ ಲೀಗ್ (TNPL) ಬ್ಯಾಡ್ಮಿಂಟನ್ ಸೀಸನ್–1

ಮಂಗಳೂರು: ತುಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್(TNPL)) – ಸೀಸನ್ 1 ಓಪನ್ ರಾಜ್ಯ ಆಮಂತ್ರಣ ಬ್ಯಾಡ್ಮಿಂಟನ್ ಲೀಗ್ ಆಗಿದ್ದು, ಜನವರಿ 24 ಮತ್ತು 25ರಂದು ಮಂಗಳೂರಿನ ಉರ್ವಾ ಇಂಡೋರ್ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ. ಈ ಲೀಗ್‌ನಲ್ಲಿ ಭಾರತದ ವಿವಿಧ ಭಾಗಗಳಿಂದ 10 ಫ್ರಾಂಚೈಸ್ ತಂಡಗಳು ಭಾಗವಹಿಸಲಿದ್ದು, ಏಳು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಹಾಗೂ ಭಾರತವನ್ನು ಪ್ರತಿನಿಧಿಸಿದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು TNPL ಸ್ಥಾಪಕ ಹಾಗೂ…

Read More

ಭಾಷೆ, ಸಾಹಿತ್ಯ, ಸಂಸ್ಕೃತಿಪರ ಚಟುವಟಿಕೆ ಮೂಲಕಸ್ವಸ್ಥ ಸಮಾಜ ನಿರ್ಮಾಣ ಡಾ| ಎಚ್. ಪ್ರಭಾಕರ್ ರಾವ್

ಮಂಗಳೂರು:ಕಲೆ ಸಾಹಿತ್ಯಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಆರೋಗ್ಯಪೂರ್ಣರಾಗಿರುತ್ತಾರೆ. ಇದು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರದಾನ ಪಾತ್ರವಹಿಸುತ್ತದೆ. ವ್ಯಕ್ತಿ ಆರೋಗ್ಯ ವೈದ್ಯರಿಂದ ಸರಿಪಡಿಸಲಾಗುವುದು ಸಮಾಜದ ಸ್ವಾಸ್ಥ ಆರೋಗ್ಯಪೂರ್ಣವಾಗಬೇಕಾದರೆ, ವಾಮನ ರಾಯರಂತಹ ಸಂಘಟಕರ ಯೋಚನೆ, ಯೋಜನೆಗಳು ಸಾಂಗವಾಗಿ ನಡೆಯಬೇಕಿದೆ, ಅದಕ್ಕೆ ಎಲ್ಲರೂ ಸ್ಪಂದಿಸಬೇಕಿದೆ ಎಂದು ಕನ್ನಡ ಭವನದ “ರಜತ ಸಂಭ್ರಮ” ಕಾರ್ಯಕ್ರಮವಾದ ”ನಾಡು-ನುಡಿ ಹಬ್ಬ”-2026 ಕನ್ನಡ ಭವನದ “ಶ್ರೀ ಕೃಷ್ಣ ದೇವರಾಯ” ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ…

Read More
error: Content is protected !!