Headlines

ಡಾ. ಇಂಚರ ನಾರಾಯಣಸ್ವಾಮಿ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’

ಮಂಗಳೂರು:ಕೋಲಾರ ಜಿಲ್ಲೆಯ ಖ್ಯಾತ ಸಾಹಿತಿ, ರಂಗ ನಿರ್ದೇಶಕ ಹಾಗೂ ರಂಗ ಇಂಚರ ಟ್ರಸ್ಟ್‌ನ ಅಧ್ಯಕ್ಷ ಡಾ. ಇಂಚರ ನಾರಾಯಣಸ್ವಾಮಿ ಅವರನ್ನು ಪ್ರತಿಷ್ಠಿತ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’ಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ರಂಗಭೂಮಿ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಡಾ. ಇಂಚರ ನಾರಾಯಣಸ್ವಾಮಿ ಅವರು 2025ರಲ್ಲಿ ಕೋಲಾರ ಕನ್ನಡ ಭವನ ಜಿಲ್ಲಾ ಘಟಕ, ಮೇಘಮೈತ್ರಿ ಸಾಹಿತ್ಯ ಸಂಘ…

Read More

ಕೋತ್ವಾಲ್ ಪದ್ಮನಾಭ ಶೇರುಗಾರ್‌ಗೆ ‘ಕನ್ನಡ ಪಯಸ್ವಿನಿ–ಉದ್ಯೋಗ ರತ್ನ’ ಪ್ರಶಸ್ತಿ

ಮಂಗಳೂರು:ಉದ್ಯೋಗದಾತ, ಸಮಾಜಸೇವಕ ಹಾಗೂ ಧಾರ್ಮಿಕ ಸೇವಾಕರ್ತರಾಗಿ ಗುರುತಿಸಿಕೊಂಡಿರುವ ವರ್ಷಿಣಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರನ್ನು 2026ನೇ ಸಾಲಿನ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ–ಉದ್ಯೋಗ ರತ್ನ’ ಅಚೀವ್‌ಮೆಂಟ್ ಅವಾರ್ಡ್‌ಗೆ ಆಯ್ಕೆ ಮಾಡಲಾಗಿದೆ. ಬೆಳ್ಳಾರಿಯಲ್ಲಿ ವರ್ಷಿಣಿ ಎಂಟರ್‌ಪ್ರೈಸಸ್ ಮೂಲಕ ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಅವರು, ಸಮಾಜಸೇವೆ, ಧಾರ್ಮಿಕ ಕಾರ್ಯಗಳು ಹಾಗೂ ದಾನಧರ್ಮಗಳ ಮೂಲಕವೂ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿ, ನಿರ್ದೇಶಕ ಹಾಗೂ ಪೋಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ವಿಶ್ವ ರಾಮ ಕ್ಷತ್ರಿಯ ಮಹಾಸಂಘ…

Read More

200ಕ್ಕೂ ಅಧಿಕ ತಂಡಗಳೊಂದಿಗೆ ಜುಲೈ 22ರಿಂದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ 28ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಅಂತರಶಾಲಾ ಹಾಗೂ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯು ಜುಲೈ 22ರಿಂದ ನಗರದ ಸ್ಮಾರ್ಟ್ ಸಿಟಿ ಟರ್ಫ್ ಫುಟ್ಬಾಲ್ ಮೈದಾನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 25 ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ, ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಹಾಗೂ…

Read More

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಅಷ್ಟಮ ಸಂಭ್ರಮ ಜು.20ರಂದು

ಮಂಗಳೂರು:ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್ ವತಿಯಿಂದ 8ನೇ ವರ್ಷದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಜುಲೈ 20ರಂದು ಮುಲ್ಲಕಾಡು, ಕಾವೂರು ಶ್ರೀ ಕೋಟದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘದ ಪ್ರಮುಖರಾದ ಕಲಾ ಸಾರಥಿ ಕುಮಾರ್ ಮಾಲೆಮಾರ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಯಕ್ಷಗಾನ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಅಂಬುರುಹ ಯಕ್ಷ ಕಲಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ಮಕ್ಕಳಿಗೆ ವೇದಿಕೆ ಕಲ್ಪಿಸುವ…

Read More

ಬಿಜೆಪಿಯ ನಿಧಿ ದುರ್ಬಳಕೆ ಆರೋಪ: ಗುತ್ತಿಗೆದಾರನ ಆಡಿಯೋ ಬಹಿರಂಗ; ‘ಬಿಜೆಪಿ ರಾಜ್ಯ ಕಾರ್ಯದರ್ಶಿ ₹31 ಲಕ್ಷ ಕಮಿಷನ್ ಪಡೆದಿದ್ದಾರೆ

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದಲ್ಲಿ ನಿಧಿ ದುರ್ಬಳಕೆ ನಡೆದಿದೆ ಎಂಬ ಆರೋಪದ ನಡುವೆ ಹೊಸ ಆಡಿಯೋ ದಾಖಲೆ ಬಹಿರಂಗವಾಗಿದೆ. ಪಕ್ಷದ ಧ್ವಜಗಳು ಹಾಗೂ ಇತರೆ ಪ್ರಚಾರ ಸಾಮಗ್ರಿಗಳ ತಯಾರಿಕಾ ಒಪ್ಪಂದಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯ ಕಾರ್ಯದರ್ಶಿಯೊಬ್ಬರು ₹31 ಲಕ್ಷ ಕಮಿಷನ್ ಪಡೆದಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸುತ್ತಿರುವ ಆಡಿಯೋ ಇದೀಗ ಹೊರಬಿದ್ದಿದೆ. ಹಣ ಪಡೆದ ನಾಯಕರು ಈಗ ತಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದೂ ಅದೇ ಆಡಿಯೋದಲ್ಲಿ ಹೇಳಲಾಗಿದೆ. ಇನ್ನೂ ₹4 ಲಕ್ಷಕ್ಕೂ ಹೆಚ್ಚು ಹಣ ಬಾಕಿಯಿದೆ ಎಂದು…

Read More

ದಸರಾದಲ್ಲಿ ಕಂಬಳಕ್ಕೆ ₹8 ಕೋಟಿ? ಮೊದಲು ಕರಾವಳಿಯ ಕಂಬಳಗಳಿಗೆ ನ್ಯಾಯ ನೀಡಿ

ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಬಗ್ಗೆ ಈಗ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸರ್ಕಾರವೇಕೋ ಮೈಸೂರಿನಲ್ಲಿ ಕಂಬಳ ನಡೆಸಲೇಬೇಕೆಂಬ ಹಠಕ್ಕೆ ಬಿದ್ದಿರುವುದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ ಈ ಬಗ್ಗೆ ನಿರ್ಣಯಕ್ಕೆ ಬರುವುದಕ್ಕೆ ಮೊದಲು ಎಲ್ಲ ದೃಷ್ಟಿಕೋನಗಳಿಂದಲೂ ಯೋಚನೆ ಮಾಡಬೇಕಾದ ಅಗತ್ಯವಿದೆ. ಕಂಬಳ ಕರಾವಳಿಯ ಸಾಂಸ್ಕೃತಿಕ ಕ್ರೀಡೆ. ಇದಕ್ಕೆ ಅದರದ್ದೇ ಆದ ಇತಿಹಾಸ ಹಾಗೂ ಸ್ಥಳೀಯ ಮೆರಗುಗಳಿವೆ. ಭಾಷೆ, ಸಂಸ್ಕ್ರತಿ, ಕಲೆ, ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದು ಮಾತ್ರವಲ್ಲ, ಅದರ ಆಕರ್ಷಣೆ ಹಾಗೂ ಮೆಚ್ಚುವಿಕೆಯಲ್ಲೂ ವ್ಯತ್ಯಾಸಕ್ಕೆ ಒಳಪಡುತ್ತವೆ. ಹೀಗಾಗಿ…

Read More

‘2026 ಫಿಫಾ ವರ್ಲ್ಡ್ ಕಪ್ ವಿತ್ ಕೇರಳ ಎಕ್ಸೈಸ್’ ಫುಟ್‌ಬಾಲ್ ಟೂರ್ನಮೆಂಟ್ ಸಮಾಪ್ತಿ

​ಕಾಸರಗೋಡು: ಕೆಎಸ್‌ಇಎಸ್‌ಎ ಮತ್ತು ಕೆಎಸ್‌ಇಒಎ ಕಾಸರಗೋಡು ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ, ಪಡನ್ನ ಸಿಎಪಿ ಟರ್ಫ್‌ನಲ್ಲಿ ಆಯೋಜಿಸಲಾಗಿದ್ದ “2026 ಫಿಫಾ ವರ್ಲ್ಡ್ ಕಪ್ ವಿತ್ ಕೇರಳ ಎಕ್ಸೈಸ್ – 7’s ಫುಟ್‌ಬಾಲ್ ಟೂರ್ನಮೆಂಟ್” ಯಶಸ್ವಿಯಾಗಿ ಸಂಪನ್ನಗೊಂಡಿತು. ​ತೃಕ್ಕರಿಪುರ ಶಾಸಕ ಶ್ರೀ ಸಂದೀಪ್ ವಾರಿಯರ್ ಟೂರ್ನಮೆಂಟ್ ಉದ್ಘಾಟಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಫುಟ್‌ಬಾಲ್ ತಾರೆ ಮೊಹಮ್ಮದ್ ರಫಿ ಹಾಗೂ ಇತರ ಗಣ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಫ್ರಾನ್ಸ್, ಪೋರ್ಚುಗಲ್, ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್‌ನಲ್ಲಿ,…

Read More

ಜು.18ರಂದು ಐಎಟಿ ದಕ್ಷಿಣ ಕನ್ನಡ-ಉಡುಪಿ ಜಂಟಿ ಘಟಕ ಉದ್ಘಾಟನೆ

ಮಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಂಟಿ ಘಟಕದ (23ನೇ ಘಟಕ) ಉದ್ಘಾಟನಾ ಸಮಾರಂಭವು ಜುಲೈ 18ರಂದು ಬೆಳಿಗ್ಗೆ 10 ರಿಂದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಐಎಟಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಸ್.ಎಂ. ಶಿವಪ್ರಕಾಶ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್…

Read More

2050ರ ವೇಳೆಗೆ ಸಮುದ್ರ ಮಟ್ಟ ಏರಿಕೆ: ಕರಾವಳಿ ನಗರಗಳಿಗೆ ಹೆಚ್ಚುತ್ತಿದೆ ಅಪಾಯ, ನಾಸಾ ಅಧ್ಯಯನ ಎಚ್ಚರಿಕೆ

ನ್ಯೂಯಾರ್ಕ್:ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ನಿರಂತರವಾಗಿ ಏರುತ್ತಿದ್ದು, 2050ರ ವೇಳೆಗೆ ವಿಶ್ವದ ಅನೇಕ ಕರಾವಳಿ ನಗರಗಳು ಪ್ರವಾಹ ಮತ್ತು ಕರಾವಳಿ ಸವೆತದ ಗಂಭೀರ ಅಪಾಯವನ್ನು ಎದುರಿಸಬಹುದು ಎಂದು ನಾಸಾ ಹಾಗೂ ಇತರ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಎಚ್ಚರಿಸಿವೆ. ನಾಸಾದ ಉಪಗ್ರಹ ದತ್ತಾಂಶದ ಪ್ರಕಾರ, ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳ ಕರಗುವಿಕೆ ಹಾಗೂ ಸಮುದ್ರದ ನೀರಿನ ಉಷ್ಣ ವಿಸ್ತರಣೆಯಿಂದ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ಅಮೆರಿಕದ ಗಲ್ಫ್ ಕರಾವಳಿ ಮತ್ತು ಅಟ್ಲಾಂಟಿಕ್ ಕರಾವಳಿಯ ಹಲವಾರು ನಗರಗಳು ಹೆಚ್ಚು ಅಪಾಯದ…

Read More

ಕೋರಿಯಾರ್ ಸೇತುವೆ ನಿರ್ಮಾಣಕ್ಕೆ ೩೦ ಕೋಟಿ ರೂ ಮಂಜೂರು: ಶಾಸಕಿ ಭಾಗೀರಥಿ ಮುರುಳ್ಯ

ಕಡಬ ತಾಲೂಕಿನ ೧೦೨ ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಎಂಬಲ್ಲಿ ಕುಮಾರಾಧಾರ ನದಿಗೆ ಸರ್ವಋತು ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖಾ ಮುಖಾಂತರ ೩೦ ಕೋಟಿ ರೂ ಮಂಜೂರುಗೊಳಿಸಿದೆ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೋರಿಯಾರ್ ನಿಂದ ಸಂಸದರ ಆದರ್ಶ ಗ್ರಾಮ ಬಳ್ಪವನ್ನು ಸಂಪರ್ಕಿಸುವ ಈ ಸೇತುವೆ ನಿರ್ಮಾಣವಾಗಬೇಕು ಎಂದು ಕಳೆದ ಹತ್ತಾರು ವರ್ಷಗಳಿಂದ ಈ ಭಾಗದ ಜನತೆ ಅಹವಾಲು…

Read More
error: Content is protected !!