ಕೋಟ್ಯಾಂತರ ಖರ್ಚಿನ ಕಾಮಗಾರಿಯಲ್ಲಿ ವನಿತಾ ಹಾಸ್ಟೆಲ್ ಕಟ್ಟಡ ಉದ್ಘಾಟನೆಗೊಂಡರೂ ಕಾರ್ಯಾಚರಣೆಗೆ ಮೀನ ಮೇಷ ಎಣಿಸುತ್ತಿರುವ ಅಧಿಕಾರಿಗಳು
ಮಂಜೇಶ್ವರ: ಸೀಮಾವರ್ತಿ ಪ್ರದೇಶವಾದ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ, ಅರ್ಧಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳ ವಸತಿಗಾಗಿ ನಿರ್ಮಿಸಲಾದ ಹಾಸ್ಟೆಲ್ ಕಟ್ಟಡವು ಉದ್ಘಾಟನೆಯಾದರೂ ಇನ್ನೂ ಬಳಕೆಗೆ ತೆರೆಯಲಾಗಿಲ್ಲ. ಇದರಿಂದಾಗಿ ದೂರದ ಪ್ರದೇಶಗಳಿಂದ ಆಗಮಿಸುವ ಮಹಿಳಾ ನೌಕರರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಈ ಹಾಸ್ಟೆಲ್ ಅನ್ನು ನಿರ್ಮಿಸಲಾಗಿದ್ದು, ವೊರ್ಕಾಡಿ ಗ್ರಾಮದ ಮಜೀರ್ಪಳ್ಳ ಧರ್ಮನಗರದಲ್ಲಿ, ಮಲಯೋರ ಹೆದ್ದಾರಿಗೆ ಸಮೀಪ ಬ್ಲಾಕ್ ಪಂಚಾಯತ್‌ಗೆ ಸೇರಿದ ಒಂದು ಏಕರೆ ಭೂಮಿಯಲ್ಲಿ…
