ಗೋಹತ್ಯೆ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು.
ಬಂಟ್ವಾಳ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ದಂದೆಗೆ ಬಳಸಿದ ರಿಕ್ಷಾ ಹಾಗೂ ಮಾಂಸ ಮಾಡಲು ಕಟ್ಟಿ ಹಾಕಿದ ದನಗಳ ಸಹಿತ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.ಪೋಲೀಸರ ದಾಳಿ ವೇಳೆ ಪ್ರಮುಖ ಆರೋಪಿ ನಾಸೀರ್ ಸಹಿತ ಇತರರು ಪರಾರಿಯಾಗಿದ್ದು, ಮುಲ್ಕಿ ಕೃಷ್ಣಾಪುರ ಕಾರ್ನಾಡು ನಿವಾಸಿ ತೌಸೀಫ ಎಂಬಾತನನ್ನು ಬಂಧಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಯಾನೆ…
