ಮಂಗಳೂರು: ಮುಸ್ಲಿಂ ಸಮಾಜದ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಮೂರನೇ ಹಂತದ ಆರ್ಥಿಕ ಸಹಾಯ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಎಂಬಿಬಿಎಸ್, ಬಿಡಿಎಸ್, ಬಿಎಚ್ಎಂಎಸ್, ಇಂಜಿನಿಯರಿಂಗ್, ಎಂಬಿಎ, ಎಂಕಾಂ, ಎಂಎ, ಎಂಎಸ್ಸಿ, ಪದವಿ, ಪ್ಯಾರಾ ಮೆಡಿಕಲ್, ಡಿಎಡ್, ಬಿಎಡ್ ಹಾಗೂ ಎಂಎಡ್ ಸೇರಿದಂತೆ ವಿವಿಧ ಕೋರ್ಸ್ಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ.
ಯೋಜನೆಯ ಪ್ರಯೋಜನವು ಝಕಾತ್ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಜಮಾತ್ನ ಶಿಫಾರಸು ಪತ್ರ ಕಡ್ಡಾಯವಾಗಿದೆ. ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ರ್ಯಾಂಕ್ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ. ಸರ್ಕಾರಿ ಹಾಗೂ ಮೀಫ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮೀಫ್ ಯೋಜನೆಯಡಿ ಈಗಾಗಲೇ ಉಚಿತ ಅಥವಾ ರಿಯಾಯಿತಿ ಸೀಟು ಪಡೆದಿರುವ ವಿದ್ಯಾರ್ಥಿಗಳು ಹಾಗೂ ಇತರ ಸಂಘ-ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿವೇತನ, ಉಚಿತ ಸೀಟು ಅಥವಾ ಪ್ರಾಯೋಜಕತ್ವ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಯೋಜನೆಯಡಿ ಕಾಲೇಜು ಶುಲ್ಕದ ಒಂದು ಭಾಗವನ್ನು ಮಾತ್ರ ಭರಿಸಲಾಗುತ್ತದೆ.
ಈ ಸೌಲಭ್ಯವು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀಫ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5, 2026 ಆಗಿದೆ. ಅರ್ಜಿಗಳನ್ನು ಕೆಎಸ್ಆರ್ಎಂ ಕಾಂಪ್ಲೆಕ್ಸ್ (ನೆಲ ಮಹಡಿ) , ಈ ಈದ್ಗ್ಗಾಮಸೀದಿ ಎದುರು, ಬಾವುಟಗುಡ್ಡೆ, ಮಂಗಳೂರುದಲ್ಲಿರುವ ಮೀಫ್ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 8431990966 ಸಂಖ್ಯೆಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

