ಮಂಜೇಶ್ವರದ ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನ–ಬೆಳ್ಳಿ , ನಗದು ಕಳವು
ಮಂಜೇಶ್ವರ: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನಲ್ಲಿ ಕಳ್ಳರು ಬಾಗಿಲಿನ ಬೀಗ ಒಡೆದು ಒಳನುಗ್ಗಿ ದೈವಕ್ಕೆ ಅರ್ಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಕಳವುಗೈದಿದ್ದಾರೆ. ಸುಮಾರು 1.70 ಲಕ್ಷ ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ನಾಣ್ಯಗಳು, ಜೊತೆಗೆ 3,360 ರೂ. ನಗದು ಕಳ್ಳತನವಾಗಿದೆ. ಅಲ್ಲದೆ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ತರವಾಡಿನ ಸದಸ್ಯ ಬಿ. ಬಾಲಕೃಷ್ಣ ಅವರ ದೂರಿನ…