ನೇತ್ರಾವತಿ ಲಯನ್ಸ್ ಕ್ಲಬ್‌ಗೆ ನೂತನ ಸಾರಥ್ಯ: ಪದಗ್ರಹಣದೊಂದಿಗೆ ₹3.5 ಲಕ್ಷ ಸೇವಾಕಾರ್ಯಗಳ ಹಸ್ತಾಂತರ
ಮಂಗಳೂರು: ನೇತ್ರಾವತಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 6ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜಿಲ್ಲಾ ಮಾಜಿ ಗವರ್ನರ್ (PDG) ಸಂಜಿತ್ ಶೆಟ್ಟಿ ಅವರ ನೇತೃತ್ವದಲ್ಲಿ ನೆರವೇರಿತು. ಸಮಾರಂಭದಲ್ಲಿ ಡಾ. ವಿದ್ಯಾಧರಿ ಶೆಟ್ಟಿ ಅಧ್ಯಕ್ಷೆಯಾಗಿ, ಲಯನ್ ಶೋಭಾ ಸುಬ್ರಮಣ್ಯ ಕಾರ್ಯದರ್ಶಿಯಾಗಿ ಹಾಗೂ ಲಯನ್ ಸುಪಲಾ ಗೋಪಾಲ್ ಖಜಾಂಜಿಯಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಅಂಗವಾಗಿ ನೂತನ ಅಧ್ಯಕ್ಷೆ ಡಾ. ವಿದ್ಯಾಧರಿ ಶೆಟ್ಟಿ ಅವರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಹಸ್ತಾಂತರಿಸಿದರು. ಜೊತೆಗೆ ಸುಮಾರು ₹3.5 ಲಕ್ಷ…
