Headlines

ತುಳುನಾಡಿನ ಆಚರಣೆಗಳಲ್ಲಿ ಮೂಡನಂಬಿಕೆ ವೈಭವೀಕರಣಕ್ಕೆ ಕಳವಳ ವ್ಯಕ್ತಪಡಿಸಿದ ಡಾ. ಸಂತೋಷ್ ಗುರೂಜಿ

ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಯು.ಎ.ಇ. ಬಂಟ್ಸ್ ಮತ್ತು ಯು.ಎ.ಇ.ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ಫೆಬ್ರವರಿ 8ನೇ ತಾರೀಕಿನಂದು ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವಬೀಡು ಬಾರ್ಕೂರು) ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ|| ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.ಸುಮಂಗಲೆಯರ ಪೂರ್ಣ ಕುಂಭ…

Read More

ವಿದ್ಯಾರ್ಥಿನಿ ಅಪಹರಣ ಯತ್ನ : ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ಬೆಳ್ತಂಗಡಿ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಹೋಗುವ ವೇಳೆ ಅಪರಿಚಿತ ಗೂಂಡಾಗಳು ಅಪಹರಿಸಲು ಯತ್ನಿಸಿ, ಚಾಕುವಿನಿಂದ ಇರಿದ ಘಟನೆ ಅತ್ಯಂತ ಬೆಚ್ಚಿಬೀಳಿಸುವಂತದ್ದು. ಇದು ಹೆಣ್ಣು ಮಕ್ಕಳ ಸುರಕ್ಷತೆಯ ಮೇಲೆ ದೊಡ್ಡ ಸವಾಲು ಎತ್ತಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷೆ ಶಿನೀರ ಖಂಡಿಸಿದರು. ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಎಪ್‌ಸ್ಟೀನ್ ಫೈಲ್ಸ್ ಮತ್ತು ನ್ಯಾಯ ಸಿಗದೇ ಉಳಿದಿರುವ ಸ್ಥಳೀಯ ಮಟ್ಟದಲ್ಲಿ ನಡೆದ ಬೆಳ್ತಂಗಡಿ ಸೌಜನ್ಯ ಪ್ರಕರಣ ಇರುವಾಗಲೇ ಹೆಣ್ಣು ಮಕ್ಕಳ ಮೇಲಿನ ಅಪಹರಣ,…

Read More

ಕಾಟಿಪಳ್ಳ ನಿವಾಸಿ ಆಟೋ ಚಾಲಕ ವಿಘ್ನೇಶ್ ಕಾಣೆ: ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು- ನಗರದ ಕೃಷ್ಣಪುರ ಕಾಟಿಪಳ್ಳ ನಿವಾಸಿ ವಿಘ್ನೇಶ್ (40) ಬಾಡಿಗೆ ಆಟೋರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡಿಕೊಂಡಿದ್ದರು. ಸಾಲವನ್ನು ಪಡೆದುಕೊಂಡಿದ್ದ ಅವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಫೆಬ್ರವರಿ 7 ರಂದು ಬಾಡಿಗೆ ಆಟೋರಿಕ್ಷಾ ತರಲು ಹಾಗೂ ಆರ್.ಟಿ.ಒ ಕಛೇರಿಗೆ ಪರವಾನಿಗೆ ಪಡೆಯುವ ಬಗ್ಗೆ ಮಂಗಳೂರಿಗೆ ತೆರಳಿರುವುದಾಗಿ ತಿಳಿಸಿ ಹೋದವರು ಈವರೆಗೆ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ : ಎತ್ತರ ಸುಮಾರು 5.2 ಅಡಿ,…

Read More

ವಾಮಂಜೂರು ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ–ಕೊಲೆ: ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹೈಕೋರ್ಟ್ ದೃಢೀಕರಣ

ಮಂಗಳೂರು:ವಾಮಂಜೂರಿನ ಉಳಾಯಿಬೆಟ್ಟು ಟೈಲ್ ಫ್ಯಾಕ್ಟರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ದೃಢೀಕರಿಸಿದೆ.ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿದ್ದೇ ಆದರೆ ಇಂತಹ ಕ್ರೂರ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ವಿಚಾರಣ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಜೊತೆಗೆ, ಶಿಕ್ಷೆ ರದ್ದುಪಡಿಸುವಂತೆ…

Read More

ಕೋಟ: ಫಾರ್ಚೂನರ್ ಕಾರು ಪಲ್ಟಿ – ಚಾಲಕ ಸಹಿತ 6 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಫಾರ್ಚೂನರ್ ಕಾರೊಂದು ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ–66ರ ಕುಂದಾಪುರ ತಾಲೂಕಿನ ಕನ್ನುಕೆರೆ, ನವಶಕ್ತಿ ಕಲ್ಯಾಣ ಮಂಟಪದ ಎದುರು ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಲಾ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಒಟ್ಟು 12 ಮಂದಿ ವಿದ್ಯಾರ್ಥಿಗಳು ಜ.31ರಂದು…

Read More

ಹೆಜಮಾಡಿ ಮಹಾಲಿಂಗೇಶ್ವರನಿಗೆ ಪುತ್ತಿಗೆ ಶ್ರೀಪಾದರಿಂದ ಸ್ವರ್ಣ ಅಟ್ಟೆ ಪ್ರಭಾವಳಿ ಅರ್ಪಣೆ

ಉಡುಪಿ: ಪಡುಬಿದ್ರಿ ಸಮೀಪದ ಹೆಜಮಾಡಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಮೂರ್ತಿಗೆ ಉಡುಪಿ ಶ್ರೀ ಕೃಷ್ಣ ಮಠದ ವಿಶ್ವಗೀತಾ ಪರ್ಯಾಯೋತ್ಸವದ ಸ್ಮರಣಾರ್ಥವಾಗಿ ಭಕ್ತಿಪೂರ್ವಕವಾಗಿ ಸ್ವರ್ಣ ಅಟ್ಟೆ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಭಗವದ್ಭಕ್ತರ ಸಹಕಾರದಿಂದ ಈ ಸ್ವರ್ಣಖಚಿತ ಅಟ್ಟೆ–ಪ್ರಭಾವಳಿಯನ್ನು ದೇಣಿಗೆಯಾಗಿ ನೀಡಲಾಗಿದ್ದು, ಈ ಸಂಬಂಧ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಅಶ್ವತ್ಥ ಕಟ್ಟೆಯಿಂದ ಆರಂಭವಾದ ಭವ್ಯ ಮೆರವಣಿಗೆ ಗ್ರಾಮ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ…

Read More

ಓಮನ್‌ನಲ್ಲಿ ಭೀಕರ ಅಪಘಾತ: ಕಾಪು ಯುವಕ ಸಹಿತ ಮೂವರ ಮೃತ್ಯು

ಉಡುಪಿ: ಓಮನ್‌ನ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ನಲ್ಲಿ ಫೆ.8ರಂದು ಮುಂಜಾನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಉಡುಪಿ ಕಾಪು ಸಮೀಪದ ಉಚ್ಚಿಲ ಕಲತ್ತೂರು ನಿವಾಸಿ ಚೇತನ್ (26) ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಧೃಡಪಡಿಸಿದ್ದಾರೆ.

Read More

ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ‘ಚಿನ್ನು ಪಾಪು’ ಆತ್ಮಹತ್ಯೆ

ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದ ಸಾಮಾಜಿಕ ಮಾಧ್ಯಮದ ಯುವ ಪ್ರಭಾವಿ ‘ಚಿನ್ನು ಪಾಪು’ ಅವರು ಸೋಮವಾರ ಕಾಸರಗೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ‘ಚಿನ್ನು ಪಾಪು’ ಎಂದು ಪರಿಚಿತರಾಗಿದ್ದ ಅವರನ್ನು ದೇಲಂಪಾಡಿ ಪಂಚಾಯತ್ ನ ಅಧೂರ್ ಮೂಲದ ರೇಷ್ಮಾ (24) ಎಂದು ಗುರುತಿಸಲಾಗಿದೆ. ಕಾಸರಗೋಡು ಪಟ್ಟಣದ ಸಮೀಪದ ಉಳಿಯತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಧ್ಯಾಹ್ನ ವೇಳೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು…

Read More

ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೆಬ್ರವರಿ 12 ರಂದು ಬೆಳ್ಳಿ ಹಬ್ಬ ಮಹೋತ್ಸವ …. !

ಮಂಗಳೂರು:ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು 25 ವರ್ಷದ ಹೊಸ್ತಿಲಿನಲ್ಲಿದ್ದು ಇದರ ಭಾಗವಾಗಿ ಸಂಸ್ಥೆಯು ಫೆಬ್ರವರಿ 12 ರಂದು ಬೆಳ್ಳಿ ಹಬ್ಬ ಮಹೋತ್ಸವ ಆಚರಣೆ ನಡೆಸಲು ತೀರ್ಮಾನಿಸಿದೆ ಇದರ ಉದ್ಘಾಟನಾ ಕಾರ್ಯಕ್ರಮವು 10.30 ಕ್ಕೆ ಎಸ್ ಜೆಇಸಿ ಕ್ಯಾಂಪಸ್ ನಲ್ಲಿ ನಡೆಯಲಿದ್ದು ಉದ್ಘಾಟನೆಯನ್ನು ವಿಧಾನ ಸಭಾಧ್ಯಕ್ಷರಾದ ಯು, ಟಿ, ಖಾದರ್ ನೆರವೇರಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ ತಿಳಿಸಿದರು . ಅವರು ನಗರದ ಪಾತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಹಲವು ವರ್ಷಗಳಿಂದ ಕಾಲೇಜು…

Read More

ಸಾಹಿತಿ, ರಂಗ ಕಲಾವಿದರು, ಕನ್ನಡ ಪರ ಸೇವೆಯಲ್ಲಿ ಸದಾ ನಿರತರಾಗಿರುವ ಪಿ. ಎಸ್. ಸಾಲಿಮಠ ಬೆಂಗಳೂರು ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ “2026 ಗೆ ಆಯ್ಕೆ

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಅಂಗವಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್ ಅರಸ್ “ವೇದಿಕೆಯಲ್ಲಿ 22.02.2026.ರಂದು, ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ…

Read More
error: Content is protected !!