ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೆಬ್ರವರಿ 12 ರಂದು ಬೆಳ್ಳಿ ಹಬ್ಬ ಮಹೋತ್ಸವ …. !

ಮಂಗಳೂರು:ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು 25 ವರ್ಷದ ಹೊಸ್ತಿಲಿನಲ್ಲಿದ್ದು ಇದರ ಭಾಗವಾಗಿ ಸಂಸ್ಥೆಯು ಫೆಬ್ರವರಿ 12 ರಂದು ಬೆಳ್ಳಿ ಹಬ್ಬ ಮಹೋತ್ಸವ ಆಚರಣೆ ನಡೆಸಲು ತೀರ್ಮಾನಿಸಿದೆ ಇದರ ಉದ್ಘಾಟನಾ ಕಾರ್ಯಕ್ರಮವು 10.30 ಕ್ಕೆ ಎಸ್ ಜೆಇಸಿ ಕ್ಯಾಂಪಸ್ ನಲ್ಲಿ ನಡೆಯಲಿದ್ದು ಉದ್ಘಾಟನೆಯನ್ನು ವಿಧಾನ ಸಭಾಧ್ಯಕ್ಷರಾದ ಯು, ಟಿ, ಖಾದರ್ ನೆರವೇರಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ ತಿಳಿಸಿದರು .

ಅವರು ನಗರದ ಪಾತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಹಲವು ವರ್ಷಗಳಿಂದ ಕಾಲೇಜು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ . ಸರ್ಕಾರಿ ಆನುದಾನ `ಹಾಗೂ ಉದ್ಯಮ ಸಹಕಾರದೊಂದಿಗೆ, ನವೀನತೆ, ಉದ್ಯಮಶೀಲತೆ ಮತ್ತು ಸ್ಮಾರ್ಟ್ ಆಪ್ ಪರಿಸರದ ಪ್ರಾದೇಶಿಕ ಕೇಂದ್ರವಾಗಿಯೂ ಎಸ್ ಜೆಇಸಿ ಹೊರಹೊಮ್ಮಿದ್ದು ಇದೀಗ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ ಎಂದರು .

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಾಸಕರಾದ ಡಾ. ಭರತ್ ಶೆಟ್ಟಿ, ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ರಮಾನಾಥ ರೈ , ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೌಜಾ ಸಹಿತ ಮುಂತಾದವರು ಭಾಗವಹಿಸಲಿದ್ದಾರೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ರಚನಾ ಕ್ರಾಸ್ತಾ ಮತ್ತು ವಿನೂತನ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!