ರೈಲಲ್ಲಿ ಮಂಗಳೂರಿಗೆ ಗಾಂಜಾ ತಂದ ಇಬ್ಬರು ಅರೆಸ್ಟ್

ಮಂಗಳೂರು: ಮಾದಕ ವಸ್ತುವಾದ ಗಾಂಜಾವನ್ನು ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸಿದ ಅಂತಾರಾಜ್ಯ ಆರೋಪಿತರನ್ನು ಮಂಗಳೂರಿನ ಬಜಪೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 03-01-2026 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ಸುಮಾರು 1 Kg ತೂಕದ ಮಾದಕವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬಿಹಾರದ ಸುನೀಲ್ ಕುಮಾರ್, ಬ್ರಿಜೇಶ್ ಶ್ರೀವಾಸ್ತವ ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿ ಆರೋಪಿತರಿಂದ…

Read More

ಕನ್ನಡ ಭವನದಲ್ಲಿ ಜ. 18ಕ್ಕೆ ಪುಸ್ತಕ ಬಿಡುಗಡೆ

ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ 18.01.2026.ಭಾನುವಾರ, ಕನ್ನಡ ಭವನದ ರಜತ ಸಂಭ್ರಮ ವಿಶೇಷ ಕಾರ್ಯಕ್ರಮವಾದ “ನಾಡು -ನುಡಿ ಹಬ್ಬ “ಕಾರ್ಯಕ್ರಮ ಕನ್ನಡ ಭವನ ಸಂಕೀರ್ಣ ನುಳ್ಳಿಪ್ಪಾಡಿ ಯ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ಡಾ. ಸಂಗಮೇಶ ತಮ್ಮನಗೌಡ್ರ ಇವರ ಕೃತಿ “ವರಕವಿ ಬೇಂದ್ರೆ ಹೀಂಗಂತಾರ “ನೀಲಾ ಪ್ರಕಾಶನ ಗುಜಮಾಗಡಿ, ಹೊರ ತಂದ ಈ ಪುಸ್ತಕ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ…

Read More

ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​(ಎಕೆಪಿಎ) ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ಆಚರಿಸಲಾಯಿತು. ಆಶ್ರಿತ್ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೆಸ್ಟ್ ಘಟಕದ ಅಧ್ಯಕ್ಷರಾದ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದರು. ದೀಪಾವಳಿ ಹಾಗೂ ಕೇರಳ ಪಿರವಿ ಅಂಗವಾಗಿ ಎಕೆಪಿಎ ಸದಸ್ಯರಿಗೆ ಕಾಸರಗೋಡು ವಲಯ ಮಟ್ಟದಲ್ಲಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಯಿತು. ಕಾಸರಗೋಡಿನ ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಶ್ರೀ ಪ್ರದೀಪ್ ಬೇಕಲ್ ಅವರು…

Read More

ಈ ನೆಲದ ಕಲೆ ಮತ್ರು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ‌ ಮಾಡಿದೆ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಸಹ್ಯಾದ್ರಿಯಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26 ಮಂಗಳೂರು: ಈ ನೆಲದ ಅಸ್ಮಿತೆ ಸನಾತನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಕರಾವಳಿಗರು. ಇಲ್ಲಿ ಕಲೆ ಮತ್ತು ಸಂಸ್ಕೃತಿ ದೊಡ್ಡ ಪಾತ್ರವನ್ನು ವಹಿಸಿಕೊಂಡಿದೆ. ಈ ನೆಲದ ಕಲೆ ಮತ್ತು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ನಡೆದ ಯಕ್ಷಧ್ರುವ-ಯಕ್ಷ…

Read More

ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ಧೂಮಾವತಿ ಉತ್ಸವ ಸಮಿತಿ ಸಭೆ ಸಂಪನ್ನ

ಕಾಸರಗೋಡು : ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ದೂಮಾವತಿ ಉತ್ಸವ ಸಮಿತಿಯ ಉತ್ಸವ ಖರ್ಚು, ವೆಚ್ಚಗಳ ಹಾಗೂ ಸಮಿತಿ ವಾರ್ಷಿಕ ಸಭೆ ನಾಗರಕಟ್ಟೆಯ ಶ್ರೀ ಶಾರದಾ ಭಜನಾಶ್ರಮ ಪರಿಸರದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷರಾದ ನವೀನ್ ನಾಯ್ಕ್ ಅದ್ಯಕ್ಷತೆಯಲ್ಲಿ ಖರ್ಚು, ವೆಚ್ಚಗಳ ಸಮೀಕ್ಷೆ ನಡೆಯಿಸಲಾಯಿತು. ಕೋಶಾಧಿಕಾರಿ ಕನ್ನಡ ಭವನದ ಡಾ ವಾಮನ್ ರಾವ್ ಬೇಕಲ್ ಆಯ -ವ್ಯಯ ಲೆಕ್ಕ ಪತ್ರ ಮಂಡಿಸಿ ಸರ್ವ ಸದಸ್ಯರ ಅಂಗೀಕಾರ ಪಡೆದರು. ಸಮಿತಿ ಯನ್ನು ಮುಂದಿನ ವರ್ಷಕ್ಕೆ ಮುಂದುವರೆಸಲು ಅಂಗೀಕರಿಸಲಾಯಿತು. ಕೋಶಾಧಿಕಾರಿ ಲೆಕ್ಕ…

Read More

ಹಸಿವಿನ ಬಳಲಿಕೆ ಉಳ್ಳವರಿಗೆ ಅವಮಾನ.ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆಗೆ ನೆರವು ನೀಡಿದ ರೊನಾಲ್ಡ್ ಮಾರ್ಟಿಸ್

ಮಂಗಳೂರು: ನಾಡಿನಲ್ಲಿ ಯಾರೂ ಹಸಿವಿನಿಂದ ಮಲಗುವ ಪರಿಸ್ಥಿತಿ ಇರಬಾರದು. ಒಂದು ವೇಳೆ ಹಸಿವಿನಿಂದ ಬಳಲುತ್ತಿದ್ದರೆ, ಅದು ಉಳ್ಳವರಿಗೆ ಅವಮಾನ ಎಂದು ದುಬಾಯಿಯ ಬ್ಲೂ ರೋಯಲ್ ಗ್ರೂಪ್ ಆಫ್ ಕಂಪನೀಸ್‌ನ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಹೇಳಿದರು.ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ ಬಳಿ ಶನಿವಾರ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಕತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿ ನಿರಂತರ…

Read More

ಕಾಸರಗೋಡಿನಲ್ಲಿ ಕೇರಳ ರಾಜ್ಯ ವಿಧಾನಸಭಾ ಚುನಾವಣೆ: ಇವಿಎಂ–ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ಪರಿಶೀಲನೆಗೆ ಚಾಲನೆ

ಕಾಸರಗೋಡು: ಈ ವರ್ಷ ನಡೆಯಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬಳಸಲಾಗುವ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ಪರಿಶೀಲನೆಗೆ ಶನಿವಾರ ಬೆಳಿಗ್ಗೆ ಚಾಲನೆ ದೊರಕಿತು. ಕಾಸರಗೋಡು ಜಿಲ್ಲಾಧಿಕಾರಿ ವೇರ್‌ಹೌಸ್‌ನಲ್ಲಿ ಸಿದ್ಧಪಡಿಸಿದ ವಿಶೇಷ ಹಾಲ್‌ನಲ್ಲಿ ಈ ಪರಿಶೀಲನೆ ನಡೆಯುತ್ತಿದ್ದು, ಜನವರಿ 25ರವರೆಗೆ ಮುಂದುವರಿಯಲಿದೆ. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಐದು ಮಂದಿ ಮಾನ್ಯ ಇಂಜಿನಿಯರ್‌ಗಳ ತಂಡವು ಜಿಲ್ಲಾ ಚುನಾವಣಾಧಿಕಾರಿಯ ನೇರ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇಂಭಶೇಖರ್ ಅವರ…

Read More

ಉಪ್ಪಳ ನಿವಾಸಿ ಯುವಕನೊಬ್ಬ ದುಬೈಯಲ್ಲಿ ಸಾವು

ಮಂಜೇಶ್ವರ: ಉಪ್ಪಳ ನಿವಾಸಿಯಾದ ಯುವಕನೊಬ್ಬ ದುಬೈಯಲ್ಲಿ ಸಾವನ್ನಪ್ಪಿದ್ದಾನೆ. ಉಪ್ಪಳ ಹಿದಾಯತ್ ಬಜಾರ್ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಮುಹಮ್ಮದ್ ರಫೀಕ್ (27) ಸಾವನ್ನಪ್ಪಿದ ದುರ್ದೈವಿ. ಇವರು ದುಬೈಯ ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ದಿವಸ ವಾಸಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಸಾವು ಸಂಭವಿಸಿರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.ಕೆಎಂಸಿಸಿ ಸಂಘಟನೆಯ ನೇತೃತ್ವದಲ್ಲಿ ಶವ ಶರೀರ ಊರಿಗೆ ತರಲಿರುವ ಕ್ರಮ ಆರಂಭಿಸಲಾಗಿದೆಯೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

Read More

ಆಗಸದಲ್ಲಿ ಇಂದು ಶಶಿ ಕಮಾಲು

2026ರ ಹೊಸ ವರ್ಷದ ಮೊದಲ ವಾರವೇ ಬಾನಿನಲ್ಲಿ ಸೂಪರ್ ಚಂದಮಾಮ ಗೋಚರಿಸಲಿದ್ದಾನೆ.ಇದು ಪ್ರಥಮ ಸೂಪರ್ ಮೂನ್ ಆಗಿರಲಿದೆ.ಜನವರಿ 3, 2026 ರಂದು ಆಕಾಶದಲ್ಲಿ ಗೋಚರಿಸುವ ಚಂದ್ರನು ವಿಶೇಷವಾಗಿದೆ. ಈ ದಿನದಂದು ವರ್ಷದ ಮೊದಲ ಹುಣ್ಣಿಮೆ, ಆದ್ರೆ ಈ ಹುಣ್ಣಿಮೆ ಸಾಮಾನ್ಯದಲ್ಲ, ಸೂಪರ್ ಮೂನ್ ಅಂದ್ರೆ, ಇದು ಸಾಮಾನ್ಯ ನಿಯಮಿತ ಹುಣ್ಣಿಮೆಯಂತೆ ಕಾಣುವುದಿಲ್ಲ, ಆದ್ರೆ 2026 ರಲ್ಲಿ ಕಂಡು ಬರುವ ಅತಿದೊಡ್ಡ ಮತ್ತು ಪ್ರಕಾಶಮಾನವಾದ ಚಂದ್ರಗಳಲ್ಲಿ ಒಂದಾಗಿರುತ್ತದೆ. ವರ್ಷಕ್ಕೆ ಮೂರರಿಂದ ನಾಲ್ಕು ಸೂಪರ್ ಮೂನ್ ಗಳಲ್ಲಿ ಇದು ಮೊದಲನೆಯದು…

Read More

ಬೋಳೂರು ವಾರ್ಡಿನಲ್ಲಿ 40 ಲಕ್ಷ ರೂ. ಅನುದಾನದ ರಸ್ತೆ–ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆಯ 27ನೇ ಬೋಳೂರು ವಾರ್ಡಿನಲ್ಲಿ 40 ಲಕ್ಷ ರೂ ವಿಶೇಷ ಅನುದಾನಲ್ಲಿ ಸುನೀಲ್ ಕುಮಾರ್ ರಸ್ತೆಯಿಂದ ಚಾರಂದಾಯ ದೈವಸ್ಥಾನ ಹಾಗೂ ಕುಚ್ಚಿಕಾಡು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಯ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಹದಗೆಟ್ಟಿರುವ ಈ ರಸ್ತೆಯ ಅಭಿವೃದ್ಧಿ ಕಾರ್ಯವು ಶೀಘ್ರವಾಗಿ ಮುಗಿದು ಜನರ ಬಳಕೆಗೆ ಸಿಗಬೇಕೆಂಬ ಉದ್ದೇಶದಿಂದ ವಿಶೇಷ ಮುತುವರ್ಜಿ ವಹಿಸಿ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಂದರು….

Read More
error: Content is protected !!