Headlines

ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ ದಿನೇಶ್ ಸುವರ್ಣ ರಾಯಿ

ಕಲ್ಲಡ್ಕ : “ಪ್ರಕೃತಿಯ ನಾಶ ಜಗತ್ತು ಸರ್ವನಾಶ” ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆಯ ಸಂದೇಶದ ಸಾರವಾಗಿದೆ. ಪ್ರಕೃತಿಯನ್ನು ನಾಶ ಮಾಡಿದರೆ ಅದರ ದುಷ್ಪರಿಣಾಮ ಇಡೀ ಮಾನವಕುಲ ಹಾಗೂ ಜೀವಜಗತ್ತಿನ ಮೇಲೆ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಪೂಜ್ಯಭಾವದಿಂದ ಕಾಪಾಡಿ, ಉಳಿಸಿ, ಬೆಳೆಸಬೇಕು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು. ಅವರು ಜುಲೈ 9 ಗುರುವಾರ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ 70ನೇ…

Read More

ಕೊಪ್ಪಳದ ಲಲಿತಮ್ಮ ಬಿ. ಹಿರೇಮಠ ಅವರಿಗೆ ‘ಕನ್ನಡ ಪಯಸ್ವಿನಿ ಜಾನಪದ ರತ್ನ ಅಚೀವ್‌ಮೆಂಟ್ ಅವಾರ್ಡ್–2026’ಜುಲೈ 26ರಂದು ಕಾಸರಗೋಡಿನಲ್ಲಿ ಪ್ರಶಸ್ತಿ ಪ್ರದಾನ

ಕೊಪ್ಪಳ/ಕಾಸರಗೋಡು: ಕೊಪ್ಪಳ ಜಿಲ್ಲೆಯ ಖ್ಯಾತ ಜಾನಪದ ಗಾಯಕಿ ಲಲಿತಮ್ಮ ಬಿ. ಹಿರೇಮಠ (ಕುಷ್ಟಗಿ) ಅವರಿಗೆ ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಕನ್ನಡ ಭವನ ನೀಡುವ “ಕನ್ನಡ ಪಯಸ್ವಿನಿ ಜಾನಪದ ರತ್ನ ಅಚೀವ್‌ಮೆಂಟ್ ಅವಾರ್ಡ್–2026”ಕ್ಕೆ ಆಯ್ಕೆ ಮಾಡಲಾಗಿದೆ. ಜಾನಪದ ಸಂಗೀತ ಕ್ಷೇತ್ರದಲ್ಲಿ ಲಲಿತಮ್ಮ ಬಿ. ಹಿರೇಮಠ ಅವರು ಸಲ್ಲಿಸಿರುವ ವಿಶಿಷ್ಟ ಸೇವೆ ಹಾಗೂ ಕಲಾ ಸಾಧನೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ…

Read More

ಜು. 12ರಂದು ‘ಬಿ ದಿ ಬಿಂದು ಬ್ರೈಡ್’ ಗ್ರ್ಯಾಂಡ್ ಫಿನಾಲೆ

ಅಂತಿಮ ಸುತ್ತಿನಲ್ಲಿ 20 ಸ್ಪರ್ಧಿಗಳು; ವಿಜೇತೆಗೆ ಬಿಂದು ಜ್ಯುವೆಲ್ಲರಿಯ ಅಧಿಕೃತ ಬ್ರ್ಯಾಂಡ್ ಮಾಡೆಲ್ ಆಗುವ ಅವಕಾಶ ಮಂಗಳೂರು, ಜು. 10: ವಿಶ್ವಾಸ, ಕರಕುಶಲತೆ ಹಾಗೂ ಗುಣಮಟ್ಟದ ಸೇವೆಯ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಆಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ವಿಶೇಷ ವಧು ಪ್ರತಿಭಾ ಅನ್ವೇಷಣಾ ಕಾರ್ಯಕ್ರಮ ‘ಬಿ ದಿ ಬಿಂದು ಬ್ರೈಡ್’ ಗ್ರ್ಯಾಂಡ್ ಫಿನಾಲೆ ಜುಲೈ 12ರಂದು (ಭಾನುವಾರ) ಮಧ್ಯಾಹ್ನ 2 ಗಂಟೆಗೆ ನಗರದ ಎಕ್ಕೂರಿನ ಎ.ಜೆ. ಗ್ರ್ಯಾಂಡ್ ಎಲೈಟ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಬಿಂದು ಜ್ಯುವೆಲ್ಲರಿಯ ಮಾರುಕಟ್ಟೆ…

Read More

ಮಂಜೇಶ್ವರದಲ್ಲಿ ಮೊದಲ ಬಾರಿಗೆ ‘ಹಲಸು ಹಣ್ಣಿನ ಮೇಳ’ಕ್ಕೆ ಅದ್ಧೂರಿ ಚಾಲನೆ

ಹಲಸಿನ ವೈವಿಧ್ಯಮಯ ತಿನಿಸುಗಳು, ಅಪರೂಪದ ಹಣ್ಣುಗಳು, ಸೀರೆಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ–ಮಾರಾಟ ಮಂಜೇಶ್ವರ, ಜು. 10: ಸಪ್ತಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಮೂರು ದಿನಗಳ **‘ಹಲಸು ಹಣ್ಣಿನ ಮೇಳ’**ಕ್ಕೆ ಶುಕ್ರವಾರ ಮಂಜೇಶ್ವರದ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಮೇಳವನ್ನು ಉದ್ಘಾಟಿಸಿದರು. ಮಾರಾಟ ಮಳಿಗೆಗೆ ವಾರ್ಡ್ ಸದಸ್ಯ ಅಬ್ದುಲ್ಲಾ ಗುಡ್ಡಕ್ಕೇರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ…

Read More

ಜಾನಪದ ಸಾಮ್ರಾಟ್ ಶರಣಯ್ಯ ಎನ್. ಇಟಗಿ ಅವರಿಗೆ ಅಂತರ್ ರಾಜ್ಯ ‘ಕನ್ನಡ ಪಯಸ್ವಿನಿ ಜಾನಪದ ರತ್ನ’ ಪ್ರಶಸ್ತಿ

ಕೊಪ್ಪಳ/ಕಾಸರಗೋಡು: ಕೊಪ್ಪಳ ಜಿಲ್ಲೆಯ ಖ್ಯಾತ ಜಾನಪದ ಕಲಾವಿದ, ಜಾನಪದ ಸಾಮ್ರಾಟ್ ಹಾಗೂ ಜಾನಪದ ಕಲಾಗುರು ಶ್ರೀ ಶರಣಯ್ಯ ಎನ್. ಇಟಗಿ ಅವರಿಗೆ ಕಾಸರಗೋಡಿನ ಕನ್ನಡ ಭವನ ನೀಡುವ ಪ್ರತಿಷ್ಠಿತ “ಅಂತರ್ ರಾಜ್ಯ ಕನ್ನಡ ಪಯಸ್ವಿನಿ ಜಾನಪದ ರತ್ನ – ಅಚೀವ್‌ಮೆಂಟ್ ಅವಾರ್ಡ್–2026”ಕ್ಕೆ ಆಯ್ಕೆ ಮಾಡಲಾಗಿದೆ. ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ವಿಶಿಷ್ಟ ಕೊಡುಗೆ ನೀಡಿರುವ ಶರಣಯ್ಯ ಎನ್. ಇಟಗಿ ಅವರು ನೂರಾರು ಜಾನಪದ ತಂಡಗಳನ್ನು ಸಂಘಟಿಸಿ ತರಬೇತಿ ನೀಡಿದ್ದು, ತಮ್ಮ ಕಲಾ ಸಾಧನೆಯ ಮೂಲಕ ರಾಷ್ಟ್ರ…

Read More

ಗದಗದ ಡಾ. ಶಾಂತಕುಮಾರ ಬಿ. ಭಜಂತ್ರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಗದಗ: ಗದಗ ಜಿಲ್ಲೆಯ ದಲಿತ ಸಾಹಿತ್ಯ ಅಕಾಡೆಮಿ (ದೆಹಲಿ) ಜಿಲ್ಲಾ ಅಧ್ಯಕ್ಷರು, ಪ್ರೌಢಶಾಲೆಯ ಆದರ್ಶ ಶಿಕ್ಷಕರು ಹಾಗೂ ಸಮಾಜಸೇವಕರಾದ ಡಾ. ಶಾಂತಕುಮಾರ ಬಿ. ಭಜಂತ್ರಿ ಅವರಿಗೆ ಶೈಕ್ಷಣಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026”ಗೆ ಆಯ್ಕೆ ಮಾಡಲಾಗಿದೆ. ಕಾಸರಗೋಡಿನ ಕನ್ನಡ ಭವನದಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಜುಲೈ 26ರಂದು ನಡೆಯಲಿರುವ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ” ಹಾಗೂ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದ…

Read More

ರಥ ಶಿಲ್ಪ ರತ್ನ ಡಾ. ಯಲ್ಲಪ್ಪ ಬಡಿಗೇರರಿಗೆ ಅಂತರ್ ರಾಜ್ಯ ಪ್ರಶಸ್ತಿ

ಕಾಸರಗೋಡು, ಜು. 10: ಕೊಪ್ಪಳ ಜಿಲ್ಲೆಯ ಭಾನಾಪುರದ ಖ್ಯಾತ ರಥ ಶಿಲ್ಪಿ ಡಾ. ಯಲ್ಲಪ್ಪ ಬಡಿಗೇರ ಅವರು 2026ನೇ ಸಾಲಿನ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ರಥ ಶಿಲ್ಪ ರತ್ನ – ಅಚೀವ್ಮೆಂಟ್ ಅವಾರ್ಡ್” ಅಂತರ್ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಡಿನಾಡು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ…

Read More

ರಜೆ ಘೋಷಣೆ ಉಲ್ಲಂಘಿಸಿ ತರಗತಿ ನಡೆಸಿದ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸ್ಪಷ್ಟನೆಗೆ ಸೂಚನೆ; ಆದೇಶ ಉಲ್ಲಂಘಿಸಿದರೆ ಕ್ರಮದ ಎಚ್ಚರಿಕೆ ಮಂಗಳೂರು, ಜು. 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ, ಕೆಲವು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನು ನಡೆಸಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ಜಿಲ್ಲಾಡಳಿತವು ನೋಟಿಸ್ ಜಾರಿಗೊಳಿಸಿ, ಘಟನೆಯ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಲಾಗಿದ್ದು, ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲ ಶಿಕ್ಷಣ ಸಂಸ್ಥೆಗಳ…

Read More

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಶ್ಯಾಮಲಾ ಭಂಡಾರಿ ಕುಂದಾಪುರಗೆ ಜಯ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಇತಿಹಾಸ ದಲ್ಲೇ ಮಹಿಳಿಯೊಬ್ಬರು ರಾಜ್ಯ ವಕೀಲರ ಪರಿಷತ್ತಿಗೆ ಚುನಾಯಿತರಾಗಿ ಆಯ್ಕೆಯಾದದ್ದು ಇದೆ ಮೊದಲು. ಹಿರಿಯ ವಕೀಲರಾಗಿ ಸಾಮಾಜಿಕ ಹೋರಾಟಗಳ ಮೂಲಕ ಮಹಿಳಾ ರಾಜಕಾರಣದಲ್ಲಿ ವಿಸಿಷ್ಟ್ ವಾಗಿ ಸಾಮಾಜಿಕ ಶೈಕ್ಷಣಿಕ ಕಾನೂನು ಕ್ಷೇತ್ರಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆ ಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ನೋಟರಿ ವಕೀಲರ ಸಂಘ ದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read More

ಸತತ ಮೂರನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ; ಯಾವ ಕ್ಷಣದಲ್ಲಾದರೂ ದಾಳಿ ನಡೆಸಲು ಸಿದ್ಧ ಎಂದು ಇಸ್ರೇಲ್

ಇರಾನ್ ಮೇಲೆ ಸತತ ಮೂರನೇ ದಿನವೂ ವೈಮಾನಿಕ ದಾಳಿಗಳು ಮುಂದುವರಿದಿವೆ. ಕೊನಾರಕ್ ನಗರದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಬುಶೆಹರ್ ಅಣು ಕೇಂದ್ರದ ಸಮೀಪ ಸೇರಿದಂತೆ ದಕ್ಷಿಣ ಇರಾನ್‌ನ ಹಲವು ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಮೇಲೆ ಯಾವ ಕ್ಷಣದಲ್ಲಾದರೂ ದಾಳಿ ನಡೆಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಇರಾನ್‌ನ ಅಣು ಸ್ಥಾವರಗಳು ಸೇರಿದಂತೆ 170ಕ್ಕೂ…

Read More
error: Content is protected !!