ಸೋಲಾರ್ ಡ್ರೈಯರ್‌ನಲ್ಲಿದ್ದ ಬರೋಬ್ಬರಿ 215 ಕೆಜಿ ಅಡಿಕೆ ದರೋಡೆ; ಮೂವರು ಖದೀಮ ಕಳ್ಳರ ಬಂಧನ
ಕಾಸರಗೋಡು: ಬದಿಯಡ್ಕ ಸಮೀಪದ ಏತಡ್ಕದಲ್ಲಿ ಸೋಲಾರ್ ಡ್ರೈಯರ್‌ನ ಟರ್ಪಾಲ್ ಹರಿದು, ಅದರೊಳಗೆ ಭದ್ರವಾಗಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ಮೌಲ್ಯದ ಅಡಿಕೆಯನ್ನು ಕಳವುಗೈದಿದ್ದ ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಾದ ಕೆ. ಗಣೇಶ (29), ಶಿಶಿರ್ ಕುಮಾರ್ (19) ಮತ್ತು ಸತೀಶ (31) ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 2ರ ರಾತ್ರಿ, ಏತಡ್ಕದ ನಿವಾಸಿ ಇಬ್ರಾಹಿಂ ಎಂಬುವವರ ಮನೆಯ ಸಮೀಪವಿರುವ ಸೋಲಾರ್ ಡ್ರೈಯರ್ ಅನ್ನು ಗುರಿಯಾಗಿಸಿಕೊಂಡ ಕಳ್ಳರು, ಟರ್ಪಾಲ್…
