ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನ
ಮಂಜೇಶ್ವರ : ಜಿಲ್ಲೆಯ ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ.ಬದಿಯಡ್ಕ ಪೊಲೀಸರು ದಾಖಲಿಸಿದ ಕಳವು ಪ್ರಕರಣದ ಆರೋಪಿ ನೆಲ್ಲಿಕಟ್ಟೆ ಆಮೂಸ್ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತನ ವಿರುದ್ಧ ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೈಲು ಸುಪರಿಂಟೆಂಡೆಂಟ್ ನೀಡಿದ ದೂರಿನಂತೆ, ಶುಕ್ರವಾರ ಸೆಲ್‌ನಿಂದ ಹೊರಬಂದ ಆರೋಪಿ ಮರಳಿ ಜೈಲಿಗೆ ಪ್ರವೇಶಿಸುವ ಸಂದರ್ಭ ಅಡುಗೆ ಕೋಣೆಯ ಮೇಲ್ಭಾಗಕ್ಕೆ ಹತ್ತಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. 10 ಸಾವಿರ ರೂಪಾಯಿ ಕಳವು ಪ್ರಕರಣದಲ್ಲಿ…