ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ 2 ವರ್ಷದ ಮಗು ಪತ್ತೆ

ಮಂಗಳೂರು: ಮಂಗಳೂರು ನಗರದ ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ ಜುಲೈ 7 ರಂದು ಅಂದಾಜು 2 ವರ್ಷದ ಗಂಡು ಮಗು ಪತ್ತೆಯಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಮಂಗಳೂರು ನಗರದ ಬೋಂದೆಲ್ ಕೃಷ್ಣ ನಗರ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಿಸಲಾಗಿದೆ. ಈ ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ (ದೂರವಾಣಿ ಸಂಖ್ಯೆ:0824-2440004) ಕಛೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ ಖಂಡಿಸಿ ವಿಶ್ವ ಹಿಂದು ಪರಿಷತ್ ಮಂಗಳೂರು ಪ್ರತಿಭಟನೆ…. !

ಮಂಗಳೂರು:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಮಂಗಳೂರು ಗೋರಕ್ಷಾ ವಿಭಾಗ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಈಗಿರುವ ಕಾನೂನು ಪ್ರಬಲವಾಗಿದ್ದು, ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕೇ ಹೊರತು ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಸಡಿಲಗೊಳಿಸಬಾರದು. ಆದರೆ ರಾಜ್ಯ ಸರ್ಕಾರವು ಕಾನೂನು ಸಡಿಲಗೊಳಿಸಿ ಗೋ ಕಳ್ಳರಿಗೆ ಅನುಕೂಲ ಮಾಡಿಕೊಡಲು…

Read More

ಕಲ್ಲು, ಡಾಂಬರ್, ಸಿಮೆಂಟ್ ಗೆ ಬೆಲೆಯಿದೆ ಆದರೆ ಆರೋಗ್ಯಕ್ಕೆ ಬೆಲೆ ಇಲ್ಲವೇ ಸದನದಲ್ಲಿ ವಿ.ಪ ಶಾಸಕ ಡಾ.ಸರ್ಜಿ ಪ್ರಶ್ನೆ

ಬೆಳಗಾವಿ : ರಾಜ್ಯದಲ್ಲಿ ವಿವಿಧ ಆರೋಗ್ಯ ಯೋಜನೆಗಳ ಎಂಪ್ಯಾನೆಲ್ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗೆ ಸಿ.ಜಿ.ಎಚ್.ಎಸ್ ದರಗಳನ್ನು ಸರಿಯಾಗಿ ಪರಿಷ್ಕರಿಸದೇ ಇರುವುದು ಮತ್ತು ಕೇಂದ್ರ ಸರ್ಕಾರ 2023, 2024 ಮತ್ತು 2025 ಸಿ.ಜಿ.ಎಚ್.ಎಸ್ ದರವನ್ನು ಪರಿಷ್ಕರಿಸಿದೆ ಆದರೆ ರಾಜ್ಯದಲ್ಲಿ ಚಿಕಿತ್ಸೆಗಳಿಗೆ ಸಿ.ಜಿ.ಎಚ್.ಎಸ್ ದರಗಳನ್ನು ಪರಿಸ್ಕರಿಸಿಲ್ಲ ಯಾಕೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಪ್ರಶ್ನಿಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತಾನಾಡಿದ ಅವರು ಸಿ.ಜಿ.ಎಚ್.ಎಸ್…

Read More

ತಟಸ್ಥವಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ! ಸದನದ ಗಮನ ಸೆಳೆದ ಶಾಸಕ ಮಂಜುನಾಥ ಭಂಡಾರಿ

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ತಟಸ್ಥವಾಗಿರುವ ಕುರಿತು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದರು. ಈ ವೇಳೆ ಉತ್ತರಿಸಿದ ಸಚಿವ ಡಿ.ಸುಧಾಕರ್ ಅವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಲಿ ನಿರ್ವಹಿಸುತ್ತಿರುವ ಕಾರ್ಯಗಳ ಜೊತೆಗೆ ಅದರ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಅದರ ಕಾರ್ಯಚಟುವಟಿಕೆಯನ್ನು ವಿಸ್ತರಿಸಿ ಕೆಳಕಂಡ ಪ್ರಕಾರ್ಯಗಳನ್ನು ನಿರ್ವಹಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರಾತಿ ನೀಡಿ ಆದೇಶಿಸಿದ್ದಾಗಿ ತಿಳಿಸಿದ್ದಾರೆ. ಕರಾವಳಿ ಭಾಗದ…

Read More

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ‌ ಆಗ್ರಹಿಸಿ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯಿಂದ ಬೃಹತ್ ರ‌್ಯಾಲಿ

ಜನರ ಬದುಕಿನ ಕುರಿತು ಚಿಂತಿಸದ ಬಿಜೆಪಿ, ಕಾಂಗ್ರೆಸ್ ನಾಯಕರು ಪರಸ್ಪರ ಸ್ಪರ್ಧೆಗೆ ಬಿದ್ದು ವೈಭವದ ಕಂಬಳ, ಹುಲಿ ಕುಣಿತ ಆಯೋಜಿಸುತ್ತಿದ್ದಾರೆ, ಮುನೀರ್ ಕಾಟಿಪಳ್ಳ ಆರೋಪ ಶಿಕ್ಷಣ,ಆರೋಗ್ಯ, ಉದ್ಯೋಗ, ವಸತಿ ಸಹಿತ ದ.ಕ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು, ಅಭಿವೃದ್ದಿಯ ಫಲ ಜನಸಾಮಾನ್ಯರಿಗೂ ತಲುಪುವಂತೆ ಯೋಜನೆಗಳನ್ನು ರೂಪಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ‘ಜನ ಸಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ, ಘೋಷಣೆಯ ಅಡಿಯಲ್ಲಿ ಅಂಬೆಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದ ವರಗೆ…

Read More

ಕುಂಜತ್ತೂರಿನಲ್ಲಿ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭ

ಕುಂಜತ್ತೂರಿನಲ್ಲಿ ಇಂದು ಆಂಜನೇಯ ಕಣ್ವ ತೀರ್ಥ ಸಂಸ್ಥೆಯ ಸಕ್ರಿಯ ಸದ್ಯಸರಾದ ಗಣೇಶ್ ಹಾಗೂ ಸೂರಜ್ ಅವರ ಮಾಲಕತ್ವದ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭಗೊಂಡಿತು. ಮಳಿಗೆಯನ್ನು ಶ್ರೀ ಸುಳಿಜನಾರ್ಧನ ದೇವಸ್ಥಾನ ಕಣ್ವತೀರ್ಥ ಅರ್ಚಕರಾದ ಶ್ರೀ ಮರಿ ಭಟ್ ಅವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ರಾಜ ಬೆಳ್ಚಪಾಡ ಮಾಡ, ಶ್ರೀ ತಿಮೀರಿ ಬೆಳ್ಚಪಾಡ, ಶ್ರೀ ಭಗವತಿ ಕ್ಷೇತ್ರ ಉದ್ಯಾವರ ಮಾಡದ ಅಚ್ಚಮಾರರು, ಗುರಿಕಾರರು ಆಚಾರ್ಯಪಟ್ಟವರು ದಿವ್ಯ ಉಪಸ್ಥಿತರಿದ್ದರು. ರಾಜಕೀಯ ನೇತಾರಾರಾದ ಶ್ರೀ ಹರಿಶ್ಚಂದ್ರ ಮಂಜೇಶ್ವರ,…

Read More

ಭಾರತದಾದಂತ್ಯ ಮತ್ತೆ 450 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು

ನವದೆಹಲಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯಕ್ಕೆ ಸದ್ಯ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಮತ್ತೆ ಇಂದು ವಿವಿಧ ವಿಮಾನ ನಿಲ್ದಾಣಗಳಲ್ಲಿ 450 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರತವು ಹಿಂದೆಂದೂ ಕಂಡಿರದ ಪ್ರಮಾಣದ ವಿಮಾನ ಪ್ರಯಾಣ ಬಿಕ್ಕಟ್ಟಿನಲ್ಲಿ ಸತತ ಏಳನೇ ದಿನವೂ ಅಡಚಣೆಗಳು ಮುಂದುವರೆದಿವೆ.ದೆಹಲಿ ವಿಮಾನ ನಿಲ್ದಾಣದಲ್ಲಿ, 134 ಇಂಡಿಗೋ ವಿಮಾನಗಳು – 75 ನಿರ್ಗಮನ ಮತ್ತು 59 ಆಗಮನ – ಇಂದು ರದ್ದಾಗಿವೆ, ಆದರೆ ಬೆಂಗಳೂರು ವಿಮಾನ ನಿಲ್ದಾಣವು 127 ರದ್ದತಿಗಳನ್ನು ವರದಿ ಮಾಡಿದೆ….

Read More

ಸಂಸದರಾದ ಬ್ರಿಜೇಶ್ ಚೌಟ ರವರೇ SDPI ಪಕ್ಷದ ಮೇಲೆ ಮಾಡಿದ ಆರೋಪವನ್ನು ಕೂಡಲೇ ಹಿಂಪಡಿಯಿರಿ : ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್

ಮಂಗಳೂರು: ಲೋಕ ಸಭೆಯ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ನಿಷೇಧಿತ ಸಂಘಟನೆಯೊಂದಿಗೆ ಸಂಧಿಸಿದೆ ಎಂದು ನೇರವಾಗಿ ಆರೋಪವನ್ನು ಮಾಡಿದ್ದಾರೆ . ಇದು ಅವರ ಪಕ್ಷದ ಕಾರ್ಯಕರ್ತರ ನಡುವೆ ಮೈಲೇಜ್ ಹೆಚ್ಚಿಸಿಕೊಳ್ಳುವ ಹುನ್ನಾರವಾಗಿದೆ ಅದು ಬಿಟ್ಟು ಜಿಲ್ಲೆಯ ಅಭಿವೃದ್ಧಿ ವಿಷಯಗಳನ್ನು ಲೋಕಸಭೆಯಲ್ಲಿ ಮಾತನಾಡುವುದಿಲ್ಲವೆಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಕಿಡಿಕಾರಿದ್ದಾರೆ . ಅವರು ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ…

Read More

ಡಿಸೆಂಬರ್ 14 ರಂದು ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮಂಗಳೂರು ಆಯೋಜಿಸುವ “ದಕ್ಷಿಣ ಕನ್ನಡ ಉಡುಪಿ ಹಾಗು ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ”

ಮಂಗಳೂರು: ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮಂಗಳೂರು ಆಯೋಜಿಸುವ “ದಕ್ಷಿಣ ಕನ್ನಡ ಉಡುಪಿ ಹಾಗು ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ” ವು ಡಿಸೆಂಬರ್ 14 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಉಪಾಧ್ಯಕ್ಷೆ ರೇಖಾ ಶೆಟ್ಟಿ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ , ೩೦ ವರ್ಷ ಮೇಲ್ಪಟ್ಟವರಿಗೆ ಓಟ , ಜಿಗಿತ , ಎಸೆತದ ಆಟಗಳಿವೆ ಮತ್ತು ೧೨ ವರ್ಷ ಕೆಳಗಿನ ಮಕ್ಕಳಿಗೆ ಓಟ…

Read More

ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ನಿಟ್ಟೆ-ಸುದ್ದಿ-ರೋಟರಿ ಎಂಸ್‌ ಎಂಇ ಹಾಗೂ ಸ್ಮಾರ್ಟ್‌ ಅಪ್ ಬೂಟ್ ಕ್ಯಾಂಪ್ – 2025

ಮಂಗಳೂರು: ಉದ್ಯಮೇನ ಹಿ ಸಿಧ್ಯಂತಿ ಕಾರ್ಯಾಣಿ” ಎಂಬ ಶೀರ್ಷಿಕೆ ಅಡಿಯಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ನಿಟ್ಟೆ ಇನ್ಸಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಷನ್, ಮಂಗಳೂರು ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಜಂಟಿಯಾಗಿ ಡಿಸೆಂಬರ್ 15 ಮತ್ತು 16 ರಂದು ಮಂಗಳೂರಿನ ಪಡೀಲ್ ನಲ್ಲಿರುವ NIPE ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕರಾದ ಸಿಎ.ಎಸ್.ಎಸ್ ನಾಯಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…

Read More
error: Content is protected !!