ನಲ್ಕೆಮಾರ್‌ನಲ್ಲಿ ಭಾರೀ ಮಳೆಗೆ ಬೃಹತ್ ಮರ ಉರುಳಿ ರಸ್ತೆ ಬಂದ್

ಬಂಟ್ವಾಳ: ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ನಲ್ಕೆಮಾರ್‌ನಲ್ಲಿ ಬೃಹತ್ ಮರವೊಂದು ಬುಡಸಮೇತ ಉರುಳಿ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮರದ ಬುಡದ ಮಣ್ಣು ಸಡಿಲಗೊಂಡಿದ್ದರಿಂದ ಸೋಮವಾರ ರಾತ್ರಿ ವೇಳೆ ಮರ ಏಕಾಏಕಿ ಉರುಳಿದೆ. ಘಟನಾ ಸ್ಥಳದ ಸಮೀಪವೇ ನಲ್ಕೆಮಾರ್ ಸರ್ಕಾರಿ ಶಾಲೆ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ರಸ್ತೆ ಮೇಲೆ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದರೂ, ಸಾರ್ವಜನಿಕರು ಪರ್ಯಾಯವಾಗಿ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ರಸ್ತೆಯನ್ನು…

Read More

ಬ್ರಹ್ಮಾವರದಲ್ಲಿ ಭೀಕರ ರಸ್ತೆ ಅಪಘಾತ: ಹುಲಿ ವೇಷದ ಕಲಾವಿದ ಮಂಜುನಾಥ್ ದುರ್ಮರಣ

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮಾವರ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರಾವಳಿಯ ಖ್ಯಾತ ಹುಲಿ ವೇಷದ ಕಲಾವಿದ ಮಂಜುನಾಥ್ (43) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಗೋವಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಇನ್ನೋವಾ ಕಾರಿನಲ್ಲಿ ಐವರು ಉಡುಪಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಉಡುಪಿ ಕಡೆಗೆ ಸಂಚರಿಸುತ್ತಿದ್ದ ವೇಗದೂತ ಬಸ್ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ…

Read More

ಉಡುಪಿಯಲ್ಲಿ ಜೀವದ ಹಂಗು ತೊರೆದು ಬಸ್ ಏಣಿಯಲ್ಲಿ ನೇತಾಡಿದ ವಿದ್ಯಾರ್ಥಿಗಳು; ವೈರಲ್ ವಿಡಿಯೋ ಆತಂಕಕ್ಕೆ ಕಾರಣ

ಹರಿಕಂಡಿಗೆ–ಪೆರ್ಡೂರು ಮಾರ್ಗದ ಖಾಸಗಿ ಬಸ್‌ನಲ್ಲಿ ಜನಸಂದಣಿ; ಹೆಚ್ಚುವರಿ ಬಸ್ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ ಉಡುಪಿ: ಜಿಲ್ಲೆಯ ಹರಿಕಂಡಿಗೆ–ಪೆರ್ಡೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿಗಳು ಬಸ್‌ನ ಏಣಿಯಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಸ್‌ನಲ್ಲಿ ಅತಿಯಾದ ಜನಸಂದಣಿ ಉಂಟಾಗಿರುವುದು ಕಂಡುಬಂದಿದ್ದು, ಆಸನ ಹಾಗೂ ನಿಲ್ಲಲು ಸ್ಥಳಾವಕಾಶವೂ ಇಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಏಣಿಯಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ….

Read More

ಮಂಗಳೂರಿನಲ್ಲಿ ‘ಬಾಲಿಕಾ ಜಾಗೃತಿ ಅಭಿಯಾನ–2026’ಕ್ಕೆ ಅದ್ಧೂರಿ ಚಾಲನೆ

ಮಂಗಳೂರು: ಪ್ರಚಲಿತ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಲೋಬೋ ಫೌಂಡೇಶನ್ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ವಿವಿಧ ಶಾಲೆಗಳಲ್ಲಿ ನಡೆಯಲಿರುವ ‘ಬಾಲಿಕಾ ಜಾಗೃತಿ ಅಭಿಯಾನ–2026’ ರ ಉದ್ಘಾಟನಾ ಸಮಾರಂಭವು ಕಾವೂರಿನ ಬಿ.ಜಿ.ಎಸ್. ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಅಭಿಯಾನಕ್ಕೆ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, “ಬಾಲಕಿಯರ ಶಿಕ್ಷಣ ಹಾಗೂ ಅವರ ಜಾಗೃತಿಯು ಸಮಾಜದ ಉನ್ನತಿಗೆ ಅತ್ಯಗತ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ…

Read More

ವೈಭವೀಕರಣವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ: ಸುಧೀರ್ ಕುಮಾರ್ ರೆಡ್ಡಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪೊಲೀಸ್ ಆಯುಕ್ತರ ಕರೆ ಮಂಗಳೂರು, ಜು. 1: ವೈಭವೀಕರಣವಿಲ್ಲದ, ವಸ್ತುನಿಷ್ಠ ಮತ್ತು ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಿದ್ದು, ಪತ್ರಕರ್ತರು ಪಾರದರ್ಶಕ ಹಾಗೂ ಜವಾಬ್ದಾರಿಯುತ ವರದಿಗಾರಿಕೆಗೆ ಆದ್ಯತೆ ನೀಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಬುಧವಾರ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ…

Read More

ಅಜ್ಮಾನ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ದುಬೈಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯಿಂದ ಪುಣೆ ರೆಸಿಡೆನ್ಸಿಯಲ್ಲಿ ಪ್ರಚಾರ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ದುಬೈ, ಜು. 2: ಪ್ರತಿಷ್ಠಿತ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ಸೆಪ್ಟೆಂಬರ್ 20, 2026ರಂದು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ಹಾಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ಕೆ ದುಬೈಯ ಪುಣೆ ರೆಸಿಡೆನ್ಸಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಂಧ್ಯಾ ಕ್ರಿಯೇಷನ್ಸ್‌ನ ಮುಖ್ಯಸ್ಥ ಶೋಧನ ಪ್ರಸಾದ್ ಹಾಗೂ…

Read More

ಇನ್ನು ಮೊಬೈಲ್ ಸಂಖ್ಯೆ ಬೇಡ; ವಾಟ್ಸ್ಆಪ್‌ಗೆ ಯೂಸರ್‌ನೇಮ್‌ ಸೌಲಭ್ಯ

ವಾಟ್ಸ್ಆಪ್‌ನಲ್ಲಿ ಇಷ್ಟದ ಯೂಸರ್‌ನೇಮ್‌ನ್ನು ಈಗಲೇ ಕಾಯ್ದಿರಿಸಿ; ಇಲ್ಲದಿದ್ದರೆ ಬೇರೆಯವರು ಪಡೆದುಕೊಳ್ಳಬಹುದು! ಶೀಘ್ರದಲ್ಲೇ ಯೂಸರ್‌ನೇಮ್‌ ಸೌಲಭ್ಯ, ಇನ್ನು ಮೊಬೈಲ್ ಸಂಖ್ಯೆ ಹಂಚಿಕೊಳ್ಳದೇ ಚಾಟ್ ಮಾಡಲು ಅವಕಾಶ.ಇನ್ನು ಮೊಬೈಲ್ ಸಂಖ್ಯೆ ಬೇಡ! ವಾಟ್ಸ್ಆಪ್‌ಗೆ ಬರುತ್ತಿದೆ ಯೂಸರ್‌ನೇಮ್‌ ಸೌಲಭ್ಯ “ನಿಮ್ಮ ವಾಟ್ಸ್ಆಪ್‌ ನಂಬರ್ ಕೊಡುತ್ತೀರಾ?” ಎಂಬ ಪ್ರಶ್ನೆಯ ದಿನಗಳು ಇನ್ನು ಮುಗಿಯಲಿವೆಯೇ? ವಾಟ್ಸ್ಆಪ್‌ ಪರಿಚಯಿಸಲು ಸಜ್ಜಾಗಿರುವ ಹೊಸ ಯೂಸರ್‌ನೇಮ್ (ಬಳಕೆದಾರ ಹೆಸರು) ಸೌಲಭ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿವೆ.ಇನ್ನು ಮುಂದೆ ಮೊಬೈಲ್‌ ಸಂಖ್ಯೆಯನ್ನು ಪರಸ್ಪರ ಹಂಚಿಕೊಳ್ಳದೆ, ಯೂಸರ್‌ನೇಮ್‌ ಮೂಲಕವೇ…

Read More

ಖಮೇನಿ ಅಂತ್ಯಕ್ರಿಯೆಗೆ ಯುರೋಪ್‌ಗೆ ಆಹ್ವಾನವಿಲ್ಲ; ಭಾರತದಿಂದ ಇಬ್ಬರು ಪ್ರತಿನಿಧಿಗಳು ಭಾಗಿ

ಟೆಹರಾನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಯಾವುದೇ ಯುರೋಪಿಯನ್ ದೇಶಕ್ಕೆ ಅಧಿಕೃತ ಆಹ್ವಾನ ಕಳುಹಿಸದಿರಲು ಇರಾನ್ ಸರ್ಕಾರ ನಿರ್ಧರಿಸಿದೆ. ಇರಾನ್ ವಿರುದ್ಧದ ನೀತಿಗಳನ್ನು ಬೆಂಬಲಿಸಿದ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಬೆಂಬಲ ನೀಡದ ದೇಶಗಳನ್ನು ಅಂತ್ಯಕ್ರಿಯೆಗೆ ಆಹ್ವಾನಿಸಲಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ 4ರಂದು ಆರಂಭವಾಗಲಿದ್ದು, ಜುಲೈ 9ರಂದು ಮಶಾದ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ…

Read More

ಭಾರೀ ಮಳೆಗೆ ಮನೆ ಗೋಡೆ ಕುಸಿತ, ಮತ್ತೊಂದು ಮನೆ ಅಪಾಯದ ಸ್ಥಿತಿಯಲ್ಲಿ: ತುರ್ತು ಕ್ರಮಕ್ಕೆ ಡಿವೈಎಫ್‌ಐ ಆಗ್ರಹ

ಎರಡು ದಿನದಿಂದ ವಿಪರೀತವಾಗಿ ಸುರಿದ ಧಾರಾಕಾರ ಮಳೆಗೆ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಜಯನಗರ ಎಂಬಲ್ಲಿ ನಿನ್ನೆ ಜಯಪ್ರಕಾಶ್ ಎಂಬವರ ಮನೆಯ ಒಂದು ಭಾಗ ಕುಸಿದು ಬಿದ್ದಿದ್ದೆ. ಅಲ್ಲೇ ಹತ್ತಿರದ ಸರಸ್ವತಿ ಎಂಬವರ ಮನೆ ಬಿರುಕು ಬಿದ್ದು ಕುಸಿಯುವ ಹಂತದಲ್ಲಿದೆ. ಇವತ್ತು ಸ್ಥಳೀಯ ಡಿವೈಎಫ್ಐ ಬಜಾಲ್ ಘಟಕದ ನಿಯೋಗದ ಜೊತೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ತೊಂದರೆಗೊಳಗಾದ ಸ್ಥಳವನ್ನು ಪರಿಶೀಲಿಸಲಾಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ಮಾಡಲಾಯಿತು. ಮಂಗಳೂರು ಮಹಾನಗರ ಪಾಲಿಕೆಯು ಜಲ್ಲಿಗುಡ್ಡೆ ಜಯನಗರದ ಕೆಳಭಾಗದ…

Read More

ಕಾಂಗ್ರೆಸ್ ಇತಿಹಾಸ ತಿಳಿದರೆ ಖಾಕಿ ಚಡ್ಡಿ ಧರಿಸಿದವರು ಊರು ಬಿಡುವ ಪರಿಸ್ಥಿತಿ: ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಜು. 1: ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಪೂರ್ವದ ಇತಿಹಾಸದ ಶೇಕಡಾ 25ರಷ್ಟನ್ನಾದರೂ ತಿಳಿದುಕೊಂಡರೆ, ಖಾಕಿ ಚಡ್ಡಿ, ಕಪ್ಪು ಟೋಪಿ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದವರು ಊರು ಬಿಟ್ಟು ಓಡಿಹೋಗುವ ಪರಿಸ್ಥಿತಿ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ನಗರದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಉದ್ದೇಶ ತಮ್ಮದಲ್ಲ. ಆದರೆ ಮಹಾತ್ಮ…

Read More
error: Content is protected !!