ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯ ಅಡುಗೆ ಕೋಣೆಗೆ ಅಗತ್ಯವಿರುವ ಸಾಮಾಗ್ರಿಗಳ ಕೊರತೆ ಇರುವುದು ತಿಳಿದ ಹಿನ್ನೆಲೆಯಲ್ಲಿ, ಅದೇ ಶಾಲೆಯ 1994–95ನೇ ಸಾಲಿನ ಪೂರ್ವ ವಿದ್ಯಾರ್ಥಿಗಳು ಶಾಲೆಗೆ ಅಗತ್ಯವಿದ್ದ ಅಡುಗೆ ಕೋಣೆಯ ಸಾಮಾಗ್ರಿಗಳನ್ನು ದೇಣಿಗೆಯಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪೂರ್ವ ವಿದ್ಯಾರ್ಥಿಗಳಾದ ಅಶ್ರಫ್ ಕುಂಜತ್ತೂರು, ಗಫೂರ್, ಚಂದ್ರಹಾಸ, ಅಶ್ರಫ್ ವಿ.ವಿ., ಗಣೇಶ ಹಾಗೂ ಲತೀಫ್ ಅವರುಗಳು ಅಗತ್ಯ ಸಾಮಾಗ್ರಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪಿಟಿಎ ಅಧ್ಯಕ್ಷರಾದ ಮುಸ್ತಫ ಉದ್ಯಾವರ ಹಾಗೂ ಶಾಲೆಯ ಅಧ್ಯಾಪಕರುಗಳು ಉಪಸ್ಥಿತರಿದ್ದು, ಪೂರ್ವ ವಿದ್ಯಾರ್ಥಿಗಳ ಈ ಸಹಕಾರ ಕಾರ್ಯವನ್ನು ಪ್ರಶಂಸಿಸಿದರು.ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಸೌಲಭ್ಯಕ್ಕೆ ಕೈಜೋಡಿಸಿರುವ ಪೂರ್ವ ವಿದ್ಯಾರ್ಥಿಗಳ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ