ರೀಲ್ಸ್ ವ್ಯೂಸ್ ದಾಹಕ್ಕೆ ಬಿದ್ದ ಯುವತಿಯಿಂದ ಬಲಿಯಾಯಿತು ರಿಯಲ್ ಜೀವ … !

ಕೋಝಿಕೋಡ್:ಇಂದಿನ ದಿನಗಳಲ್ಲಿ ನಾನು ಸೆಲೆಬ್ರಿಟಿ ಆಗಬೇಕು.. ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ತುಣುಕಿಗೆ ಲಕ್ಷಾಂತರ ಲೈಕು ಕಮೆಂಟು ಶೇರು ಸಿಗಬೇಕ್ಕೆನ್ನುವ ಮನಸ್ಥಿತಿಯ ಮನಸುಗಳು ನಾವಿರುವ ಸಮಾಜದ ಉದ್ದಗಲಕ್ಕೂ ಕಾಣಸಿಗುವುದು ಇಂದಿನ ದಿನಗಳಲ್ಲಿ ಟ್ರೆಂಡ್ ಎಂದೇ ಹೇಳಬಹುದು . ಆದರೆ ವ್ಯೂಸ್ , ಲೈಕ್ ಗಾಗಿ ಪ್ರಾಮಾಣಿಕ ಪ್ರಯತ್ನ ಮಾಡದೆ ಮತ್ತೊಬ್ಬರನ್ನು ಸಾವಿನ ಕುಣಿಕೆಗೆ ದೂಡಿ ತಮ್ಮ ಬೇಳೆಯನ್ನು ಬೇಯಿಸುತ್ತಾರೆ ಅಲ್ವಾ ಅಂಥವರದ್ದು ನರ ಜನುಮವೇ … ? ಇಲ್ಲಾ ಇನ್ನೊಬ್ಬರ ಕುಟುಂಬವನ್ನು ನರಕಕ್ಕೆ ದೂಡುವ ರಾಕ್ಷಸ ಜನುಮವೇ ಎಂಬುದೇ ತಿಳಿಯದು.ಈ ಪ್ರಶ್ನೆ ಇದೀಗ ಹುಟ್ಟಿದ್ದು ಇತ್ತೀಚಿಗೆ ಕೇರಳದಲ್ಲಿ ನಡೆದ ಘಟನೆಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹರಿ ಬಿಟ್ಟ ತಕ್ಷಣವೇ ಅದು ವಿಂಚಿನಂತೆ ಕ್ಷಣಮಾತ್ರದಲ್ಲೇ ಎಲ್ಲೆಡೆ ವೈರಲ್ ಆಯಿತು . ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಮಾನಸಿಕ ಸ್ಥೈರ್ಯ ಕುಗ್ಗಿ 42 ವರ್ಷದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ದೀಪಕ್ ಯು ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಕೋಝಿಕ್ಕೋಡ್‌ನ ಗೋವಿಂದಪುರಂ ನಿವಾಸಿ. ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯವರು ಆತನನ್ನು ಎಬ್ಬಿಸಲು ಆತ ತನ್ನ ಕೋಣೆಯಲ್ಲಿ ಮುಂದಾದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಲವು ಬಾರಿ ಬಾಗಿಲು ಬಡಿದು ಕರೆದರೂ ಕೋಣೆ ಒಳಗಿನಿಂದ ಯಾವುದೇ ಉತ್ತರ ಬರಲಿಲ್ಲ . ಇದರಿಂದ ಭಯಗೊಂಡ ಮನೆಯವರು ನೆರೆಹೊರೆಯವರ ಸಹಾಯ ಪಡೆದು ಬಲವಂತವಾಗಿ ಬಾಗಿಲು ಒಡೆದು ತೆರೆದರು. ಆದರೆ ವಿಧಿಯಾಟಕ್ಕೆ ಹೆಣೆದಿದ್ದ ಮೋಸದಾಟಕ್ಕೆ ಆತ ಬಲಿಯಾಗಿದ್ದಾನೆ .

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ ಎಂದು ಆತನ ಪೋಷಕರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಮಹಿಳೆಯು ದೀಪಕ್‌ನ ಸಾವಿಗೆ ಕಾರಣವಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದೀಪಕ್ ತನ್ನ ಜೀವನದುದ್ದಕ್ಕೂ ವಿವಾದಗಳಿಂದ ದೂರವಿದ್ದರು ಎಂದು ಅವರು ಹೇಳಿದರು.

ಕೆಲವು ದಿನಗಳ ಹಿಂದೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಜನದಟ್ಟಣೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತ ತನ್ನನ್ನು ಹಲವಾರು ಬಾರಿ ಅನುಚಿತವಾಗಿ ಮುಟ್ಟಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.ವಿಡಿಯೊ ನೋಡಿದ ಸಂಬಂಧಿಕರು, ಸ್ನೇಹಿತರು ದೀಪಕ್‌ನನ್ನು ತೀವ್ರವಾಗಿ ನಿಂದಿಸಿದರು. ಇದು ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಯಿತು. ಅದನ್ನು ನಿಭಾಯಿಸಲು ಸಾಧ್ಯವಾಗದೆ ದೀಪಕ್ ಈ ಕಠಿಣ ಕ್ರಮ ತೆಗೆದುಕೊಂಡರು ಎಂದು ಹೇಳಲಾಗಿದೆ.

ಪೊಲೀಸರು ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೀಪಕ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ವಿಡಿಯೊ ಮಾಡಿರುವ ಮಹಿಳೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ರೀಲ್ಸ್ ಗೋಳು ಒಬ್ಬರ ಬದುಕನ್ನೇ ಹಾಳು ಮಾಡಿತು, ರೀಲ್ಸ್ನ ಗೀಳು ಒಂದು ಕುಟುಂಬದ ಆಧಾರವನ್ನೇ ನೆಲಕ್ಕೆ ಉರುಳಿಸಿತ್ತು .

✍️ಗಿರೀಶ್ ಪಿ. ಎಂ

SHARE
Loading spinner

Leave a Reply

Your email address will not be published. Required fields are marked *

error: Content is protected !!